ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ತಾಲೂಕಿನ ತಿಗಡಿ ವಲಯದ ಯರಗೊಪ್ಪ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಈ ಶಿಬಿರದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ನಾಗರಾಜ್ ಹಲ್ಕಿ ಹಾಗೂ ಒಕ್ಕೂಟದ ಅಧ್ಯಕ್ಷರಾಗಿ ಈರವ್ವ ಅಕ್ಕಿಸಾಗರ ಮತ್ತು ಶ್ರೀ ಆರ್ಥೋ ಅಂಡ್ ಪ್ರಮೋ ಸೆಂಟರ್ ಬೆಳಗಾವಿಯ ವೈದ್ಯರು ಸಾಹಿದೀಪ ಕಣ್ಣಿನ ಆಸ್ಪತ್ರೆ ಬೆಳಗಾವಿಯ ವೈದ್ಯರು
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಯೋಜನೆಯ ಕಾರ್ಯಕ್ರಮಗಳ ಕುರಿತು ಮತ್ತು ಆರೋಗ್ಯ ರಕ್ಷಾ ಸಂಪೂರ್ಣ ಸುರಕ್ಷಾ ನೆಟ್ವರ್ಕ್ ಆಸ್ಪತ್ರೆಗಳ ಕುರಿತು ಮಾತನಾಡಿದ್ದರು ಈಗಿರುವಂತ ಕಾಲದಲ್ಲಿ ಮನುಷ್ಯನಿಗೆ ಮೊದಲು ಆರೋಗ್ಯವೇ ಮುಖ್ಯ ಹೀಗಾಗಿ ಎಲ್ಲರೂ ಕೂಡ ಆರೋಗ್ಯವನ್ನು ಕಾಪಾಡಿಕೊಂಡು ಹೋಗುವಂತ ಪರಿಸ್ಥಿತಿ ಎದುರಾಗಿದೆ ಹಾಗೂ ಯಾವದೇ ಸಂದರ್ಭದಲ್ಲಿ ಮನುಷ್ಯನ ಆರೋಗ್ಯ ಹದಗೆಟ್ಟು ಹೋಗಬಹುದು ಹೀಗಾಗಿ ಮುಂಚಿತವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು
ಇದೇ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರು ಹಾಲಪ್ಪ ಮಿರ್ಜಿ ಅವರು ಮಾತನಾಡಿ ಮನುಷ್ಯನ ಸ್ವಚ್ಛತೆ ಬಗ್ಗೆ ಹಲವಾರು ವಿಷಯಗಳು ನಮ್ಮಲ್ಲಿ ಚರ್ಚೆಗಳಾಗುತ್ತವೆ ಮನುಷ್ಯನ ದೇಹಕ್ಕೆ ಸಾಕಷ್ಟು ರೋಗರು ಜನಗಳು ಕಂಡುಬರುತ್ತವೆ ಹಾಗೂ ಇವುಗಳನ್ನು ವಾಸಿ ಮಾಡಲು ಸಾಕಷ್ಟು ವೈದ್ಯರನ್ನು ನಾವು ಸಂಪರ್ಕಿಸುತ್ತೇವೆ ನಮ್ಮ ಸಂಸ್ಥೆಯಿಂದ ಈ ತರಹ ಹಲವಾರು ಕಾರ್ಯಕ್ರಮಗಳು ನಾವು ಮಾಡುತ್ತಾ ಬಂದಿದ್ದೇವೆ ಈ ಕಾರ್ಯಕ್ರಮಗಳ ಉದ್ದೇಶ ಹಾಗೂ ಜನರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು
ಸ್ವಚ್ಛತೆಯ ಕುರಿತು ಕಣ್ಣಿನ ಆಸ್ಪತ್ರೆಯ ವೈದ್ಯರಾದ ಅಭಿ ದಾಲಿ ಮಾತನಾಡಿದರು ಮನುಷ್ಯನಿಗೆ ಮೊದಲು ಆರೋಗ್ಯವೇ ಮುಖ್ಯ ನಮ್ಮ ಸುತ್ತಮುತ್ತಲಿನ ಪರಿಸರವು ಸ್ವಚ್ಛತೆಯಿಂದ ಕೂಡಿದರೆ ನಾವು ರೋಗ ಮುಕ್ತರಾಗಿ ಬಾಳಲು ಸಾಧ್ಯ ಹೀಗಾಗಿ ಸಾರ್ವಜನಿಕರು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುತ್ತಾ ನಿಮ್ಮ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬೇಕು
ಈ ಕಾರ್ಯಕ್ರಮದ ಸದುಪಯೋಗವನ್ನು ಒಟ್ಟು 104 ಜನ ಸದಸ್ಯರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಲಾಭವನ್ನು ಪಡೆದುಕೊಂಡರು ಈ ಶಿಬಿರದಲ್ಲಿ ಬಿಪಿ ಶುಗರ್, ಮಂಡೇನೋ ಮೊಣಕಾಲು ನೋವು ಸೊಂಟ ನೋವು ಬೆನ್ನು ನೋವು ಮುಂತಾದ ನೋವುಗಳ ಬಗ್ಗೆ ಚಿಕಿತ್ಸೆ ನೀಡಿದರು ಮತ್ತು ಕಣ್ಣಿನ ಚಿಕಿತ್ಸೆಯನ್ನು ನೀಡಿದರು
ಈ ಕಾರ್ಯಕ್ರಮಕ್ಕೆ ಒಕ್ಕೂಟದ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು ಸುವಿಧ ಸಹಾಯಕರು ರುದ್ರಪ್ಪ ಮುಳಕುರ ಸೇವಾ ಪ್ರತಿನಿಧಿ ಸಿಂಗಪ್ಪಾ ಮತ್ತು ಮೇಲ್ವಿಚಾರಕರು ಸಹಕರಿಸಿದರು ಮತ್ತು ಊರಿನ ಗ್ರಾಮಸ್ಥರು ಕೂಡ ಭಾಗವಹಿಸಿದ್ದರು
ಇದೇ ಸಂದರ್ಭದಲ್ಲಿ
ನಾಗರಾಜ ಹಲ್ಕಿ,
ರುದ್ರಪ್ಪ ಮುಳಕೂರ,
N.B. ಹಿರೇಮಠ,
ಈರವ್ವ ಅಕ್ಕಿಸಾಗರ,
ರಾಹುಲ ಹಿರೇಮನಿ ಸೇರಿದಂತೆ ಇನ್ನುಳಿದವರು ಭಾಗವಹಿಸಿದ್ದರು.
ವರದಿಗಾರರು
ಶಾನೂಲ ಮ
ಬೈಲಹೊಂಗಲ