ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ ಬ್ಯಾಂಕರ್ಸ್ ಕಾಲೊನಿಯಲ್ಲಿ ಬುಧವಾರ ಮಧ್ಯಾಹ್ನ ಹಾಡು ಹಗಲೇ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ನಾಲ್ಕು ಜನರನ್ನು ಬಂಧನ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.
ಹೇಗ್ಗೆರಿಯ ಅಭಿಷೇಕ ಎಂಬ ಯುವಕ ಬ್ಯಾಂಕರ್ಸ್ ಕಾಲೋನಿಯಲ್ಲಿನ ಪಲ್ಲವಿ ಹಾಗೂ ಸುವರ್ಣಾ ಎಂಬ ಇಬ್ಬರು ಮಹಿಳೆಯರಿಗೆ ಫೈನಾನ್ಸ್ ಮಾಡಿದ್ದ.ಈ ನಡುವೆ ಸುವರ್ಣಾ ಎಂಬ ಮಹಿಳೆಯ ಜೊತೆ ಅಭಿಷೇಕ್ ಅತಿಯಾದ ಸಲುಗೆ ಸ್ನೇಹ ಬೆಳೆದಿತ್ತು.ಹೀಗಾಗಿ ಇವರಿಬ್ಬರ ವಿಚಾರವನ್ನು ಹಲ್ಲೆಗೊಳಗಾದ ಪಲ್ಲವಿ ಸುವರ್ಣಾಳ ಮನೆಯವರಿಗೆ ತಿಳಿಸಿದ್ದಳು.
ಹೀಗಾಗಿ ಸುವರ್ಣಾಳ ಮನೆಯಲ್ಲಿ ಸ್ವಲ್ಪ ಕಿರಿ ಕಿರಿ ಉಂಟಾಗಿ ಗಲಾಟೆ ಉಂಟಾಗಿತ್ತು ಹೀಗಾಗಿ ಪಲ್ಲವಿಗೆ ಬುದ್ದಿ ಕಲಿಸಬೇಕು ಎಂದು ಸುವರ್ಣಾ ಹಾಗೂ ಅಭಿಷೇಕ್ ಪ್ಲ್ಯಾನ್ ಮಾಡಿದ್ದರು.ಹೀಗಾಗಿ ಅಭಿಷೇಕ್ ತನ್ನ ಇಬ್ಬರು ಸ್ನೇಹಿತರಾದ ಅಭಿಷೇಕ ಹಾಗೂ ಪ್ರಜ್ವಲ್ ಎಂಬುವರಿಂದ ಮಚ್ಚನ್ನು ತರಿಸಿದ್ದ ಎಂಬ ಮಾಹಿತಿ ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ ಅಂತಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಒಟ್ಟಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲವನ್ನು ಪಡೆದುಕೊಂಡಿದ್ದ ಪಲ್ಲವಿ ಎಂಬ ಮಹಿಳೆ ತನ್ನಗೆ ಇರೋದು ಬಿಟ್ಟು,ಅವರಿಬ್ಬರ ವಿಚಾರದ ಬಗ್ಗೆ ಬಾಯ್ಬಿಟ್ಟ ತಪ್ಪಿಗೆ ಆಸ್ಪತ್ರೆ ಪಾಲಾದ್ರೆ, ಇತ್ತ ಸಿಟ್ಟಿನ ಭರದಲ್ಲಿ ಕೊಲೆ ಮಾಡಲು ಯತ್ನಿಸಿದ ಅಭಿಷೇಕ ತನ್ನ ಗೆಳತಿ ಹಾಗೂ ಗೆಳೆಯರ ಜೊತೆ ಜೈಲು ಪಾಲಾಗಿದ್ದಾನೆ.