ಕಾಗವಾಡ : ದಕ್ಷಿಣ ಭಾರತ ವಿಭಾಗದ ಸಕ್ಕರೆ ಕಾರ್ಖಾನೆಗಳ ಮಹಾ ಒಕ್ಕೂಟದ ಸಿಸ್ಮಾ ಅಧ್ಯಕ್ಷರಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲರ ಸುಪುತ್ರರು ಹಾಗೂ ಕೆಂಪಪಾಢದ ಅಥಣಿ ಸಕ್ಕರೆ ಕಾರ್ಖಾನೆಯ ಎಂ ಡಿ ಯೋಗೇಶ್ ಪಾಟೀಲ್ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ವಿಭಾಗ ಮಟ್ಟದ ಸಕ್ಕರೆ ಕಾರ್ಖಾನೆಗಳ ಸಿಸ್ಮಾ sisma -k ಸಂಘದ ವಾರ್ಷಿಕ ಸಾಯಯನ್ಯ ಸಭೆ ಜರುಗಿತು.
ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘ ಕರ್ನಾಟಕ ಅಧ್ಯಕ್ಷರಾಗಿ 2 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಿದರು ಯೋಗೇಶ್ ಪಾಟೀಲರು ಅಧಿಕಾರ ವಹಿಸಿಕೊಂಡರು. ಯೋಗೇಶ್ ಪಾಟೀಲರು ರಾಜ್ಯದ ಮಾಜಿ ಸಚಿವ ಶ್ರೀಮಂತ ಪಾಟೀಲರ ಹೆಮ್ಮೆಯ ಸುಪುತ್ರರು, ಮತ್ತು ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ.
ಯೋಗೇಶ್ ಪಾಟೀಲರ ಪೂಜ್ಯ ತಂದೆ ಹಾಗೂ ಮಾಜಿ ಸಚಿವರಾದ ಶ್ರೀಮಂತ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಇವರು ಚಿಕ್ಕ ವಯಸ್ಸಿನಲ್ಲಿ ಕಾರ್ಖಾನೆಯ ಜವಾಬ್ದಾರಿ ಹೊತ್ತು ರೈತರ ಶ್ರೇಯೋಭಿವೃದ್ಧಿಗಾಗಿ ಸತತ ಪ್ರಯತ್ನದೊಂದಿಗೆ ಈಗಾಗಲೇ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರು, ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದರ ಜೊತೆಗೆ iSMA ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ನಿರ್ದೇಶಕರಾಗಿ ಹಾಗೂ WISMA ವೆಸ್ಟ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸದ್ಯ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಕರ್ನಾಟಕ ಅಧ್ಯಕ್ಷರಾಗಿ ಕಾಗವಾಡ ಹಾಗೂ ಅಥಣಿ ತಾಲೂಕಿನಿಂದ ಇತಿಹಾಸದ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದು, ಎನ್ನಡೆ ಅವರ ಅಭಿಮಾನಿಗಳು ಅಭಿನಂದನೆ. ಸಲ್ಲಿಸುತ್ತಿದ್ದಾರೆ.
ಜರುಗಿದ ಸಭೆಯಲ್ಲಿ ಸಿಸ್ಮಾ ಮಾಜಿ ಅಧ್ಯಕ್ ವಿಜೇಂದ್ರ ಸಿಂಗ್, ಕಾರ್ಯದರ್ಶಿ ಡಾ. ಎಸ್ ಎಸ್ ಸಾಲಿಮಠ, ಮ್ಯಾನೇಜರ್ ವೀರೇಶ್ ಕವಟಗಿ, ಚಾಮುಂಡಿ ಶುಗರ್ಸ್ ಲಿಮಿಟೆಡ್ ಎಂಡಿ ಶ್ರೀ ಎಂ. ಶ್ರೀನಿವಾಸನ್, ಮೈಲಾರಿ ಶುಗರ್ ಕೋ ಲಿಮಿಟೆಡ್ ಚೇರ್ಮನ್ ಶ್ರೀ ಟಿ ರಾಮಕೃಷ್ಣಾ, ಎಂಡಿ ಉದಯ್ ಕುಮಾರ್ ಪುರಾಣಿಕಮಠ, ಕೋರೊ ಮಂಡೆಲ್ ಶುಗರ್ ಲಿಮಿಟೆಡ್ ಕೃಷ್ಣರಾಜಪೇಟ. ಉಪಾಧ್ಯಕ್ಷ ವಿ ಜ ರವಿ, ಬೀಳಗಿ ಶುಗರ್ ಮಿಲ್ಸ್ ಲಿಮಿಟೆಡ್ ಬಡಗಂದಿ. ಎಂಡಿ ರಾಹುಲ್ ನಾಡಗೌಡ, ಗೋದಾವರಿ ಶುಗರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಬಿ ಆರ್ ಬಕ್ಷಿ, GEM ಶುಗರ್ಸ್ ಉಪಾಧ್ಯಕ್ಷ ಮರಿಮುತ್ತು, ಬನಾರಿ ಅಮ್ಮನ ಶುಗರ್ಸ್ ಕಾರ್ಯಕಾರಿ ಅಧ್ಯಕ್ಷ ಜಿ ಸರ್ವನನ್ ಸೇರಿದಂತೆ ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ನಿರ್ದೇಶಕರು, ಹಲವು ಕಾರ್ಖಾನೆಗಳ ಅಧಿಕಾರಿ ವರ್ಗದವರು, ಉಪಸ್ಥಿತರಿದ್ದರು. ಫೋಟೋ ಶೀರ್ಷಿಕೆ 25 ಕಾಗವಾಡ 2 ಕಾಗವಾಡ ತಾಲೂಕಿನ ಅಥಣಿ ಶುಗರ್ಸ್ ಎಂ ಡಿ ಯೋಗೇಶ್ ಶ್ರೀಮಂತ ಪಾಟೀಲ್ ಇವರನ್ನು ದಕ್ಷಿಣ ಭಾರತ ಶುಗರ್ ಅಸೋಸಿಯೇಷನ್ ಸಿಸ್ಮಾ ಅಧ್ಯಕ್ಷರಾಗಿ ಆಯ್ಕೆ ಮಾಡಿ ಸನ್ಮಾನಿಸುತ್ತಿರುವ ದೃಶ್ಯ.
ಸುಕುಮಾರ್ ಬನ್ನೂರೆ
ಇನ್ನು ನ್ಯೂಸ್ ಕಾಗವಾಡ