Athani

ತನ್ನ ಮನೆಯಲ್ಲೇ ನೇಣಿಗೆ ಕೊರಳೊಡ್ಡಿ ಜೀವ ಬಿಟ್ಟ ಪೊಲೀಸ್​ ಅಧಿಕಾರಿ; ಕಾರಣವೇನು?

Share

ಅಥಣಿ ತಾಲೂಕಿನ ಐಗಳಿ ಪೊಲೀಸ್​​ ಠಾಣೆ ಎಎಸ್​ಐ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸ್ವಗ್ರಾಮ ಅನಂತಪೂರದ ತನ್ನ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.

ಇನ್ನು, ಸೂಸೈಡ್​ ಮಾಡಿಕೊಂಡ ಎಎಸ್​ಐ (50) ಶಂಭು ಮೆತ್ರಿ. ಇವರು ಅಥಣಿ ತಾಲೂಕಿನ ಐಗಳಿ ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಆಗಿ ಕಾರ್ಯನಿವರ್ಹಿಸುತ್ತಿದ್ದರು.

ಕಳೆದ ಹಲವು ತಿಂಗಳಿಂದ ಶಂಭು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಜೀವನದ ಮೇಲೆ ಜಿಗುಪ್ಸೆ ಬಂದು ಪ್ರಾಣಬಿಟ್ಟಿದ್ದಾರೆ ಎನ್ನುತ್ತಿವೆ ಪೊಲೀಸ್​ ಮೂಲಗಳು. ಸ್ಥಳಕ್ಕೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Tags:

error: Content is protected !!