ಅಥಣಿ : ಇಗಾಗಲೆ ಮುನ್ನೆಚ್ಚರಿಕೆ ವಹಿಸಿ ಅಥಣಿ ತಹಸೀಲ್ದಾರ್ ಕಚೇರಿಗೆ ಮನವಿ ಕೊಟ್ಟು ಅಥಣಿ ತಾಲೂಕಿನ ವಕ್ಬ ಆಸ್ತಿ ವಿವರ ಕೇಳಲಾಗಿದೆ. ಇನ್ನು ವರದಿ ಬಂದಿಲ್ಲ ವರದಿ ಬಂದಾಕ್ಷಣ ನಾವು ರೈತರ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಬೀಸಿ ಮುಟ್ಟಿಸುವ ಕಾರ್ಯಕ್ಕೆ ಮುಂದಾಗುತ್ತೇವೆ. ಹಾಗೂ ಈಗಾಗಲೆ
ರಾಜ್ಯದಲ್ಲಿ ಲಕ್ಷಾಂತರ ರೈತರ ಜಮೀನಿಗೆ ವಕ್ಬ ಶಾಕ್ ಕೊಟ್ಟಿದೆ. ನೂರಾರು ವರ್ಷಗಳಿಂದ ಉಳಿಮೆ ಮಾಡಿದ ರೈತರ ಜಮೀನು ವಕ್ಬ ಹೆಸರಲ್ಲಿ ಕಬಳಿಕೆ ಮಾಡಲಾಗುತ್ತಿದೆ. ಎಂದು ಅಥಣಿಯಲ್ಲಿ ಬಿಜೆಪಿ ಮುಖಂಡ ಸಂಪತ್ ಕುಮಾರ ಶೆಟ್ಟಿ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ರೈತರಿಗೆ ಅನ್ಯಾಯ ಆಗಲಿಕ್ಕೆ ಬಿಡುವುದಿಲ್ಲ ಎಂಬ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖಂಡ ಸಂಪತ್ ಕುಮಾರ ಶೆಟ್ಟಿ ಈ ಗೊಂದಲ ಯಾಕಾಯ್ತು. ಗೊಂದಲ ಸೃಷ್ಟಿ ಬಗ್ಗೆ ತಾವು ಸ್ಪಷ್ಟ ನಿಲುವುವನ್ನ ನೀಡಬೇಕು.ಇಷ್ಟು ದಿನ ಯಾವುದೆ ಸಮಸ್ಯೆ ಇಲ್ಲದೆ ರೈತರು ಸುಖ ಜೀವನ ನಡೆಸುತ್ತಿದ್ದರು ಈಗ ನಿಮ್ಮ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಯನ್ನ ಅನುಸರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.