Vijaypura

ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಠಾಧೀಶನ ಜನ್ಮದಿನೋತ್ಸವ..!

Share

ಕರ್ನಾಟಕ ಏಕೀಕರಣದ ರೂವಾರಿಗಳಲ್ಲಿ ಒಬ್ಬರಾದ ವಿಜಯಪುರ ಜಿಲ್ಲೆ ಇಂಚಗೇರಿ ಮಠ ಮಾಧವಾನಂದ ಶ್ರೀಗಳ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಯಿತು. ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿಯಲ್ಲಿ ಶ್ರೀಗಳ ಮೂರ್ತಿ ಮೆರವಣಿಗೆ ನಡೆಸಿದ ಸಾವಿರಾರು ಭಕ್ತರು ಏಕೀಕರಣಕ್ಕಾಗಿ ಹೋರಾಡಿದ ಶ್ರೀಗಳಿಗೆ ಭಕ್ತಸೇವೆ ಸಮರ್ಪಿಸಿದರು. ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನ ಹೋರಾಟದ ಮೂಲಕ ಮಾಧವಾನಂದ ಶ್ರೀಗಳು ಒಗ್ಗೂಡಿಸಿದ್ದರು. ಮೈಸೂರು ಕರ್ನಾಟಕವಾಗಬೇಕೆಂದು ಉಪವಾಸ ಸತ್ಯಾಗ್ರಹವನ್ನು ಮಾಡಿದ್ದರು. ಕನ್ನಡ ರಾಜ್ಯೋತ್ಸವದ ಮರುದಿನವೇ ಮಾಧವಾನಂದ ಶ್ರೀಗಳ ಜನ್ಮದಿನ ಎನ್ನುವುದು ಮತ್ತೊಂದು ವಿಶೇಷವೇ ಸರಿ.. ಶ್ರೀಗಳ ಜನ್ಮದಿನ ಆಚರಣೆಗೆ ರಾಜ್ಯ ಹೊರ ರಾಜ್ಯಗಳಿಂದಲೂ ಭಕ್ತರು ಬರೋದು ವಿಶೇಷ..

Tags:

error: Content is protected !!