ಮಾಜಿ ಸಚಿವೆ ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕಿ ಶ್ರೀಮತಿ ಶಶಿಕಲಾ ಜೊಲ್ಲೆಯವರ 55 ನೇ ಹುಟ್ಟು ಹಬ್ಬದ ನಿಮಿತ್ಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ಶ್ರೀ ಬೀರೇಶ್ವರ ಕೋ -ಆಪ್ ಕ್ರೆಡಿಟ್ ಸೋಸಾಯಟಿ ಲಿ.ಯಾಕ್ಸಂಬಾ ಇದರ 221ನೇ ಶಾಖೆಯನ್ನು ಶೇಗುಣಸಿ ವಿರಕ್ತಮಠದ ಶ್ರೀ ಶಂಕರ ಮಹಾಸ್ವಾಮಿಜಿ ರಿಬ್ಬಿನ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ವೇದಿಕೆ ಕಾರ್ಯಕ್ರಮವನ್ನು ಡಾ.ಮಹಾಂತಪ್ರಭು ಸ್ವಾಮಿಜಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಡಾ. ಮಹಾಂತ ಪ್ರಭು ಮಹಾಸ್ವಾಮಿಗಳು ಹಾಗೂ ಕೋಳಿಗುಡ್ಡದ ವೇದಮೂರ್ತಿ ಶ್ರೀ ಬಸಯ್ಯ ರಾಚಯ್ಯ ಹಿರೇಮಠ ಸಾನಿಧ್ಯ ವಹಿಸಿಕೊಂಡಿದ್ದರು. ಸಂಸ್ಥೆಯ ವ್ಯವಸ್ಥಾಪಕ ಬಹಾದ್ದೂರ್ ಗುರವ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಠೇವಣಿ ಹಾಗೂ ಹೊಸ ಖಾತೆ ತೆರೆದ ಗ್ರಾಹಕರಿಗೆ ಪ್ರಮಾಣ ಪತ್ರ ಹಂಚಿದರು.
ನಂತರ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮಿಜಿ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು ಆದ ಅಣ್ಣಾಸಾಹೇಬ ಹಾಗೂ ಶಶಿಕಲಾ ಜೊಲ್ಲೆ ದಂಪತಿ ಗ್ರಾಮೀಣ ಭಾಗದ ಸಮಾಜಕ್ಕೆ ಒಂದು ಸಾಮಾಜಿಕ ಆರ್ಥಿಕ ಹಾಗೂ ಉದ್ಯೋಗ ಭದ್ರತೆ ನೀಡುವುದರೊಂದಿಗೆ ಸಂಸ್ಥೆಯ ಯಶಸ್ಸು ಶಿಸ್ತು ಉತ್ತಮ ನಿರ್ವಹಣೆ ಮಾಡುವ ಮೂಲಕ ರಾಜ್ಯದಲ್ಲಿ ಇರುವ ಯಶಸ್ವಿ ಬ್ಯಾಂಕುಗಳಲ್ಲಿ ಮುಂಚುಣಿಯಲ್ಲಿರುವ ಬ್ಯಾಂಕ್ ಎಂದರೆ ಅದು ಶ್ರೀ ಬೀರೇಶ್ವರ ಬ್ಯಾಂಕ್ ಎಂದು ಹೇಳುವ ಮೂಲಕ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅಪ್ಪನಗೌಡ ಪಾಟೀಲ್ ಮಲ್ಲನಗೌಡ ಪಾಟೀಲ ಕೋಳಿಗುಡ್ಡ ಗ್ರಾಮ ಪಂಚಾಯತ ಅಧ್ಯಕ್ಷ ಶರಣಪ್ಪಗೌಡ ಪಾಟೀಲ, ಉಪಾಧ್ಯಕ್ಷೆ ಮಂಜುಳಾ ಮಾದರ ತಮ್ಮಣ್ಣಪ್ಪ ತೇಲಿ ಸಂಜು ಅವಕ್ಕನವರ, ಬಿಜೆಪಿ ಅಥಣಿ ಮಂಡಲ ಅಧ್ಯಕ್ಷ ಚೇತನಗೌಡ ಪಾಟೀಲ, ಪರಮೇಶ್ವರ ಮುಳ್ಳೂರ ಮಹಾದೇವ ಚೌಗಲಾ, ಆನಂದ ಕುಲಕರ್ಣಿ, ವಿಠ್ಠಲ ಮಾಚಕನೂರ ಶ್ರೀನಿವಾಸ ಅಮಲಝರಿ, ಸಿದ್ರಾಮ್ ಹಲಕ್ಕಿ, ಶಿವರಾಯ ಯಲಡಗಿ ಹಾಗೂ ಕೋಳಿಗುಡ್ಡ ಗ್ರಾಮದ ಸಮಸ್ತ ನಾಗರಿಕರು ಉಪಸ್ಥಿತರಿದ್ದರು