Uncategorized

ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ಸಿದ್ದರಾಮಯ್ಯ ಅವರ ಅಂತಿಮ ಅಧಿವೇಶನ

Share

ಸಿಎಂ ಸಿದ್ದರಾಮಯ್ಯ ತಮ್ಮ ಕೊನೆಯ ದಿನಗಳನ್ನು ಎನಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಅವರ ಕೊನೆಯ ಅಧಿವೇಶನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಭವಿಷ್ಯ ನುಡಿದರು.

ಅವರು ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಸಭೆಯ ಕುರಿತು ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಬೆಳಗಾವಿಗೆ ಆಗಮಿಸಿ ಇಲ್ಲಿನ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಈ ರಾಜ್ಯದ ರೈತರನ್ನ ಹಾಗೂ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಉತ್ತರ ಕರ್ನಾಟಕಕ್ಕೂ ಹಾಗೂ ಕಿತ್ತೂರು ಕರ್ನಾಟಕಕ್ಕೂ ರಾಜ್ಯ ಸರ್ಕಾರದ ಸಂಬಂಧವಿಲ್ಲದಂತಾಗಿದೆ. ಅಭಿವೃದ್ಧಿ ಕೈಗೊಳ್ಳದ ಈ ಸರ್ಕಾರದ ಶಾಸಕರೇ ತಾವು ಶಾಸಕರಾಗಿದ್ದು ದುರ್ದೈವದ ಸಂಗತಿ ಎನ್ನುತ್ತಿದ್ದಾರೆ. ಎಂದೆಂದೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಮುಖ್ಯಮಂತ್ರಿಗಳನ್ನ ನೋಡಿದ್ರೆ ಅಯ್ಯೋ ಎನಿಸುತ್ತಿದೆ. ಹಣಕಾಸಿನ ನಿರ್ವಹಣೆಯಲ್ಲಿ ಸಿದ್ದರಾಮಯ್ಯ ಸಂಪೂರ್ಣವಾಗಿ ಸೋತಿದ್ದು, ಶಾಸಕರಿಗೂ ಅನುದಾನ ನೀಡಲು ಹಣವಿಲ್ಲದಂತಾಗಿದೆ. ಶಾಸಕರು ಅಸಹಾಯಕರಾಗಿದ್ದಾರೆ ಎಂದರು.

ವಕ್ಫ್ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರನ್ನ ಆತಂಕಕ್ಕೆ ದೂಡಿದೆ. ಇನ್ನೊಂದೆಡೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ. ಆದ್ದರಿಂದ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು. ಬಿಜೆಪಿ ಹಾಗೂ ಜೆಡಿಎಸ್ ರಾಜ್ಯ ಸರ್ಕಾರವನ್ನು ಸರಿದಾರಿಗೆ ತರಲು ತಂತ್ರಗಾರಿಕೆ ನಡೆಸಿದೆ ಎಂದರು.

ಭ್ರಷ್ಟಾಚಾರವನ್ನೇ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಭಂಡತನದಿಂದ ಹೇಳುತ್ತಿದ್ದರು ಆದರೆ ಮೂಡಾ ಹಗರಣದಲ್ಲಿ ಅವರ ಸಂಪೂರ್ಣ ಕುಟುಂಬವೇ ತೊಡಗಿರುವುದು ಬೆಳಕಿಗೆ ಬಂದಿದೆ. ಸಿದ್ದರಾಮಯ್ಯ ಕೇವಲ ಮುಖ್ಯಮಂತ್ರಿ ಅಲ್ಲ. ಅವರು ರಾಜ್ಯದ ಆರೋಪಿ ನಂಬರ್ ವನ್ ಎಂದರು. ಸಿದ್ದರಾಮಯ್ಯ ತಮ್ಮ ಕೊನೆಯ ದಿನಗಳನ್ನ ಎಣಿಸುತ್ತಿದ್ದಾರೆ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಕೊನೆಯ ಅಧಿವೇಶನವನ್ನು ನಡೆಸಲಿದ್ದಾರೆ. ಇದು ಸತ್ಯ ಎಂದರು.

ರಾಜ್ಯದಲ್ಲಿ ಸಿಎಂ ಸ್ಥಾನವನ್ನು ಹರಾಜಿಗಿಟ್ಟಿದ್ದು. ಆದ್ದರಿಂದಲೇ ಸಿದ್ದರಾಮಯ್ಯನವರಿಗೆ ಆತಂಕ ಕಾಡುತ್ತಿದೆ. ಶಾಸಕರೇ ಸಿಎಂ ಗೆ ಆಫರ್ ಗಳನ್ನು ನೀಡುತ್ತಿದ್ದು, ಸಿದ್ದರಾಮಯ್ಯ ಬಿಜೆಪಿ ಕಡೆ ಬೊಟ್ಟು ಮಾಡುತ್ತಿದ್ದಾರೆ. ಆಪರೇಷನ್ ಕಮಲ ಮಾಡಲು ಬಿಜೆಪಿಯವರು ಮೂರ್ಖರಲ್ಲ ಎಂದರು.

Tags:

error: Content is protected !!