Uncategorized

ರಾಯಬಾಗ ಪೊಲೀಸರಿಂದ 7.82 ಲಕ್ಷ ಮೊತ್ತದ ಗಾಂಜಾ ವಶ ; ಆರೋಪಿಗಳ ಬಂಧನ

Share

ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಂದಿಕುರಳಿ ಗ್ರಾಮ ಹದ್ದಿನ ಜಮೀನದಲ್ಲಿ ಸುಮಾರು 7.82 ಲಕ್ಷ ಮೊತ್ತದ ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳವಾರ ಬೆಳಗ್ಗೆ ತಾಲೂಕಿನ ನಂದಿಕುರಳಿ ಗ್ರಾಮ ಹದ್ದಿ ಜಮೀನ ರಿ.ಸ ನಂ. 303/5 ನೇದ್ದರಲ್ಲಿ ಕಂಚಕರವಾಡಿಯ ರಾಯಪ್ಪ ಸತ್ಯಪ್ಪ ತೋಳಿ ಇವನು ತನ್ನ ಪಾಲಿನಿಂದ ಮಾಡಿದ ಜಮೀನದಲ್ಲಿ ಕಬ್ಬಿನ ಬೆಳೆಯಲ್ಲಿ ಅನಧಿಕೃತವಾಗಿ ಗಾಂಜಾಗೆ ಹೋಲುವ ಮಾದಕ ಪದಾರ್ಥದ ಗಿಡಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಬೆಳೆಸಿರುವ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ, ಹೆಚ್ಚುವರಿ ಎಸ್ ಪಿ ಬೆಳಗಾವಿ ಅವರ ಮಾರ್ಗದರ್ಶನದಲ್ಲಿ ಹಾಗೂ ಮಾನ್ಯ ಡಿಎಸ್‌ ಪಿ ಅವರ ನೇತೃತ್ವದಲ್ಲಿ ರಾಯಬಾಗ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜನರು ಕೂಡಿ ಕಾರ್ಯಾಚರಣೆ ಮಾಡಿ ಆರೋಪಿತನ ತಾಬಾದಿಂದ ಒಣ ಗಾಂಜಾ ಮಾಲನ್ನು ವಶಪಡಿಸಿಕೊಂಡು, ಕಂಚಕರವಾಡಿಯ ಆರೋಪಿ ರಾಯಪ್ಪ ಸತ್ಯಪ್ಪ ತೋಳೆನನ್ನು ಬಂಧಿಸಿದ್ದಾರೆ.

ಈ ಪ್ರಕರಣದ ತನಿಖಾಧಿಕಾರಿಗಳನ್ನು ಮತ್ತು ತನಿಖಾ ತಂಡವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಭೀಮಾಶಂಕರ ಗುಳೇದ ಐಪಿಎಸ್. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್ ಬಿ ಬಸರಗಿ ಮತ್ತು ಶೃತಿ ಹಾಗೂ ಅಥಣಿ ಉಪ ವಿಭಾಗ ಡಿ.ಎಸ್.ಪಿ ಪ್ರಶಾಂತ ಮುನ್ನೋಳ್ಳಿರವರು ಪ್ರಶಂಶಿಸಿದ್ದಾರೆ.

Tags:

error: Content is protected !!