ಕಾಗವಾಡ : ಪಂಚಾಯತಿ ರಾಜ್ಯ ಮತ್ತು ಗ್ರಾಮೀಣ ಅಭಿವೃದ್ದಿ ಇಲಾಖೆಯ ವತಿಯಿಂದ (ಆರ್.ಟಿ.ಪಿ.ಐ.ಆರ್) ಇಲಾಖೆಯಿಂದ ಕಾಗವಾಡ ವಿಧಾನ ಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಸನ್ ೨೦೨೩-೨೦೨೪ ನೇ ಸಾಲಿನಲ್ಲಿ ಆಡಳಿತಾತ್ಮಕ ಯೋಜನೆ ಅಡಿಯಲ್ಲಿ ಇಲಾಖೆಯ ವತಿಯಿಂದ ೧೨ ಕೋಟಿ ರೂ ಅನುದಾನದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಹೇಳಿದರು.
ಕಾಗವಾಡದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಶಾಸಕ ರಾಜು ಕಾಗೆ ಮಾತನಾಡುವಾಗ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ದಿಗೊಳಿಸಲು ಅನೇಕ ದಿನಗಳಿಂದ ಬೇಡಿಕೆಯಾಗಿತ್ತು ಇದನ್ನು ಗಮನಿಸಿ ರಾಜ್ಯ ಸರಕಾರದಿಂದ ೧೨ ಕೋಟಿ ರೂ ಅನುದಾನ ಮಂಜೂರುಗೊಳಿಸಿ ಕಾಮಗಾರಿಗಳಿಗೆ ಪೂಜೆ ಸಲ್ಲಿಸುತ್ತಿದ್ದೇನೆ ಎಂದರು.
ಗುಣಮಟ್ಟದ ರಸ್ತೆಗಳು ನಿರ್ಮಿಸಲು ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಸಾರ್ವಜನಿಕರು ಇದರ ಮೇಲೆ ನಿಗಾ ಇಡಬೇಕು ಎಂದು ಶಾಸಕರು ಸೂಚನೆ ನೀಡಿದರು. ಪಂಚಾಯತಿ ರಾಜ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕಾ ಅಭಿಯಂತರಾದ ವೀರಣ್ಣ ವಾಲಿ ಶಾಸಕರಿಗೆ ವಿವರವಾದ ಮಾಹಿತಿ ನಿಡುವಾಗ ಕ್ಷೇತ್ರದಲ್ಲಿ ರೂ. ೧೨ ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗಳು ಕ್ಯಗೊಂಡಿದ್ದು ಅದರಲ್ಲಿ ತಲಾ ರೂ ೪೦ ಲಕ್ಷ ವೆಚ್ಚದಲ್ಲಿ ಕೃಷ್ಣಾಕಿತ್ತೂರ,
ಉಗಾರ- ಕುಡಚಿ, ಜುಗೂಳ, ನಾಗನೂರ ಇದೇ ರೀತಿ ರೂ. ೨೫ ಲಕ್ಷ ತಲಾ ೦೧ ರಸ್ತೆಯ ಅಭಿವೃದ್ದಿಗಳಿಗೆ ವೆಚ್ಚು ಮಾಡಿ ಕಾಮಗಾರಿ ಕೈಗೊಂಡಿದ್ದು ಕಾಗವಾಡದಲ್ಲಿ ಮೂರು ರಸ್ತೆಗಳು ಮೋಳವಾಡ, ಮೋಳೆ, ಬಣಜವಾಡ, ಮಂಗಾವತಿ, ಶಹಾಪೂರ, ಕೆಂಪವಾಡ, ನವಲಿಹಾಳ, ಮಂಗಸೂಳಿ, ಕವಲಗುಡ್ಡ, ಶೇಡಬಾಳ ಇದೇ ರೀತಿ ಚಮಕೇರಿ, ಬ್ಯಾಡರಟ್ಟಿ, ಗುಂಡೇವಾಡಿ, ಪಾರ್ಥನಹಳ್ಳಿ, ಅಬ್ಬಿಹಾಳ, ಜಕ್ಕಾರಟ್ಟಿ, ತಾವಂಶಿ, ಜಂಬಗಿ, ಪಾಂಡೇಗಾ0ವ ಮುಂತಾದ ಗ್ರಾಮಗಳಲ್ಲಿ ಏಕಕಾಲಕ್ಕೆ ರಸ್ತೆ ಅಭಿವೃದ್ದಿ ಕಾಮಗಾರಿಗಳು ಕೈಗೊಳ್ಳಲಾಗಿದೆ ಎಂದು ವೀರಣ್ಣ ವಾಲಿ ಶಾಸಕರಿಗೆ ಮಾಹಿತಿ ನೀಡಿದರು.
ಕಾಗವಾಡ ಕಾರ್ಯಕ್ರಮದಲ್ಲಿ ಕೃಷ್ಣಾ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಸೌರಭ ಪಾಟೀಲ, ರಮೇಶ ಚೌಗಲೆ, ಪ್ರಕಾಶ ಪಾಟೀಲ, ಬಾಬಾಸಾಬ ಚೌಗಲೆ, ಕಾಕಾ ಪಾಟೀಲ, ಶಾಂತಿನಾಥ ಕರವ, ಸೇರಿದಂತೆ ಅನೇಕರು ಇದ್ದರು. ಗುತ್ತಿದೆದಾರರಾದ ಸಂತೋಷ ವಡ್ಡರ, ಘಟನಟ್ಟಿ, ಸೇರಿದಂತೆ ಅನೇಕರು ಇದ್ದರು.
ಸುಕುಮಾರ ಬನ್ನುರೆ
ಇನ್ ನ್ಯೂಸ್ ಕಾಗವಾಡ