ಇನ್ನರ್ ವ್ಹಿಲ್ ಸಂಸ್ಥೆ ರಜತ ಮಹೋತ್ಸವದ ನೆನಪಿಗಾಗಿ ಸುಕನ್ಯಾ ವೃದ್ದಾಶ್ರಮಕ್ಕೆ ಎರಡು ವ್ಹಿಲ್ ಚೇರ ದೇಣಿಗೆ ನೀಡಿ ಮಾತನಾಡಿದರು.
ಅಥಣಿ – ಸಮಾಜಕ್ಕಾಗಿ ಬದುಕುವುದರಲ್ಲಿ ಇರುವ ಸಂತೋಷ ಮತ್ಯಾವುದರಲ್ಲೂ ಇಲ್ಲ ಎಂಬ ಮಾತನ್ನು ನಾವು ಕೇಳಿರುತ್ತೇವೆ. ಈ ಮಾತು ಸತ್ಯ. ಈ ನಿಟ್ಟಿನಲ್ಲಿ ಅರಿವು ಮೂಡಿಸುವುದಕ್ಕಾಗಿ
ನಮ್ಮ ಇನ್ನರ್ ವ್ಹಿಲ್ ಸಂಸ್ಥೆ
ಎಲ್ಲೆಡೆಗೂ ಸಾಮಾಜಿಕ ಸೇವಾ ಕಾರ್ಯವನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದು
ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಪಾಂಗಿ
ಹೇಳಿದರು.
ಇನ್ನರ್ ವ್ಹಿಲ್ ಸಂಸ್ಥೆ ರಜತ ಮಹೋತ್ಸವದ ನೆನಪಿಗಾಗಿ ಅಥಣಿ ಚಮಕೇರಿ ರಸ್ತೆಯಲ್ಲಿ ಇರುವ ಸುಕನ್ಯಾ ವೃದ್ದಾಶ್ರಮಕ್ಕೆ ಎರಡು ವ್ಹಿಲ್ ಚೇರ ದೇಣಿಗೆ ನೀಡಿ, ನನಗಲ್ಲ, ನಮಗೆ’ ಎಂಬ ಸಾಮಾಜಿಕ ಒಗ್ಗಟ್ಟು ಸಾರುವ ಸಂದೇಶವನ್ನು ನಾವು ಕೇಳಿ ರುತ್ತೇವೆ. ನಾವು “ನನಗಾಗಿ’ ಬದುಕುವುದಕ್ಕಿಂತ “ನಮಗಾಗಿ’ ಬದುಕಿದಾಗ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ. ಈ ಹಿನ್ನೆಲೆ ನಮಗೆ ಸಾಮಾಜಿಕ ತುಡಿತ ಇರುವುದು ಅಗತ್ಯ. ಯುವ ಸಮಾಜಕ್ಕೆ ಸಮಾಜದ ಮೇಲಿನ ಕಾಳಜಿ ಮತ್ತು ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳಲು ಪ್ರೋತ್ಸಾಹ ನೀಡುವುದಕ್ಕಾಗಿಯೇ ಶ್ರಮಿಸುತ್ತಿದ್ದೇವೆ ಎಂದರು.
ಅಧ್ಯಕ್ಷೆ ಶ್ರೀಮತಿ ತೃಪ್ತಿ ಕುಲಕರ್ಣಿ ಸಮಾಜದಲ್ಲಿ ಸೇವಾ ಮನೋಭಾವವನ್ನು ಹೆಚ್ಚು ಮೈಗೂಡಿಸಿಕೊಂಡು ಪ್ರಾಮಾಣಿಕತೆ ಪ್ರದರ್ಶಿಸಿದರೆ ಮನಸ್ಸಿಗೆ ಸಿಗುವ ಆನಂದವೇ ಬೇರೆ ಆ ನಿಟ್ಟಿನಲ್ಲಿ ಸುಕನ್ಯಾ ವೃದ್ಧಾಶ್ರಮದ ಸೇವಾ ಕಾರ್ಯವನ್ನು ಮೆಚ್ಚಬೇಕು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಶ್ರೀಮತಿ ಲಲಿತಾ ಮೇಕನಮರಡಿ, ಶ್ರೀಮತಿ ಸುನೀತಾ ದೇಸಾಯಿ, ಶ್ರೀಮತಿ ಮಧು ಮಂಗಸೂಳಿ, ಪ್ರಿಯಾ ಚಿಮ್ಮಡ, ಭಾರತಿ ಕೋರೆ, ಶೋಭಾ ಕೋಲಾರ. ಮಹಾದೇವಿ ಪಾಟೀಲ, ರೇಣು ಸೌದಾಗರ, ಸುಜಾತಾ ಜಗದಾಳಮಠ , ಮನೀಷಾ ಸಂಕ್ರಟ್ಟಿ, ಜಯಶ್ರೀ ಪೂಜಾರಿ, ಶಿಲ್ಪಾ ದಾದಪ್ಪಗೊಳ, ಭಾಗ್ಯವಂತಿ ಬಿರಾದಾರ, ಮಹಾದೇವ ಬಿರಾದಾರ, ಈರಣ್ಣ ಅಡಿಗಲ್ ಸೇರಿದಂತೆ ಇತರರು ಇದ್ದರು.