Dharwad

ತಾಯಂದಿರಿಂದಲೇ ಮಕ್ಕಳ ಕಿಡ್ನ್ಯಾಪ್

Share

ಸಪ್ತಪದಿ ತುಳಿದು ಪತಿಯ ಜೊತೆಗೆ ಸುಖ ಜೀವನ ನಡೆಸಬೇಕಾಗಿದ್ದ ಇಬ್ಬರು ಚಾಲಾಕಿ ಮಹಿಳೆಯರು ತಮ್ಮ ತಮ್ಮ ಪ್ರಿಯಕರರೊಂದಿಗೆ ಸೇರಿ ಮಕ್ಕಳನ್ನು ಕಿಡ್ನಾಪ ಮಾಡಿಕೊಂಡು, ಮಕ್ಕಳ ಪತಿ ಹಾಗೂ ಪೋಷಕರಿಗೆ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಭೇದಿಸುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಮಕ್ಕಳ ರಕ್ಷಣೆಯ ಜತೆಗೆ ನಾಲ್ವರನ್ನು ಬಂಧಿಸಿದ್ದಾರೆ.

ಕಳೆದ ನವೆಂಬರ್ 7 ರಂದು ರೇಷ್ಮಾ ಹಾಗೂ ಪ್ರಿಯಾಂಕಾ ಸಾಂಬ್ರಾಣಿ ಇಬ್ಬರು ಮಹಿಳೆಯರು ಮಕ್ಕಳನ್ನು ರಾಣೆಬೆನ್ನೂರಿನ ಹಾಸ್ಟೆಲಗೆ ಸೇರಿಸುವುದಾಗಿ ಮನೆಯವರಿಗೆ ತಿಳಿಸಿ ಇಬ್ಬರು ಮಹಿಳೆಯರು ತಮ್ಮ ಆರು ಮಕ್ಕಳೊಂದಿಗೆ ಮನೆಯಿಂದ ಹೊರ ಹೋಗಿದ್ದರು. ನಂತರ ಮನೆಯಿಂದ ಆಚೆ ತೆರಳಿ ರೇಷ್ಮಾ ತನ್ನ ಪ್ರಿಯಕರ ಸುನೀಲನನ್ನು ಕೂಡಿ ಕೊಂಡಿದ್ದಾಳೆ. ಇನ್ನೂ ಗಂಡನನ್ನು ಕಳೆದುಕೊಂಡಿದ್ದ ಪ್ರಿಯಾಂಕಾ ಕೂಡಾ ಶಿಕಾರಿಪುರದ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಮಕ್ಕಳ ಪೋಷಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣಕ್ಕೆ ಬೇಡಿಕೆ ಬರುತ್ತಿದಂತೆ ಮನೆಯ ಪೋಷಕರು ವಿದ್ಯಾಗಿರಿ ಪೊಲೀಸ್ ಠಾಣೆಗೆ ತೆರಳಿ ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು.

ಮಹಿಳೆಯರಿಬ್ಬರು ತಮ್ಮ ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ಪುರುಷರೊಂದಿಗೆ ಸೇರಿ ಮಕ್ಕಳನ್ನು ಬಿಟ್ಟು ಕಳುಹಿಸಲು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇನ್ನೂ ದೂರು ಪಡೆದುಕೊಂಡ ವಿದ್ಯಾಗಿರಿ ಠಾಣೆಯ ಪೊಲೀಸರು ಆರು ಮಕ್ಕಳ ಪತ್ತೆಗಾಗಿ, ಮಹಾರಾಷ್ಟ್ರ, ಹೈದರಾಬಾದನಲ್ಲಿ ತನಿಖೆ ಕೈಗೊಂಡಿದ್ದರು. ಇನ್ನೂ ಇಬ್ಬರು ಮಹಿಳೆಯರು ಆರು ಮಕ್ಕಳೊಂದಿಗೆ ತಮ್ಮ ಇಬ್ಬರು ಪ್ರಿಯಕರರೊಂದಿಗೆ ಇರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಈಗ ನಾಲ್ವರ ಹೆಡೆಮುರಿ ಕಟ್ಟುವುದರ ಜೊತೆಗೆ ಆರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಮಕ್ಕಳ ನೋಡುತ್ತಿದಂತೆ ಎರಡು ಕುಟುಂಬದ ಪೋಷಕರು ಮಹಿಳೆಯರ ಕೃತ್ಯಕ್ಕೆ ಹಿಡಿಶಾಪ ಹಾಕಿ ನಿಟ್ಟುಸಿರು ಬಿಟ್ಟು, ಪೊಲೀಸರ ಕಾರ್ಯಕ್ಕೆ ಶ್ಲಾಘಿಸಿದರು.

ಈ ಕುರಿತು ಮಾತನಾಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪೋನ ಕರೆ ಜಾಡು ಹಿಡಿದು ವಿವಿಧ ಅಯಾಮಗಳಲ್ಲಿ ತನಿಖೆ ಮಾಡಲಾಗಿದೆ. ಪೋಷಕರ ಮಾಹಿತಿ ಮೇರೆಗೆ ತನಿಖೆ ನಡೆಸಿ ಮಕ್ಕಳ ರಕ್ಷಣೆ ಜತೆಗೆ ಇಬ್ಬರು ಮಹಿಳೆಯರ ಬಂಧಿಸಲಾಗಿದೆ ಎಂದು ತಿಳಿಸಿದರು.

 

Tags:

error: Content is protected !!