Banglore

ಪ್ರಧಾನಿಗಳಾಗಿ ಈ ರೀತಿ “ಮೋದಿ” ಮಾತು ಸರಿಯಲ್ಲ- ಗೃಹ ಸಚಿವ ಪರಮೇಶ್ವರ

Share

700 ಕೋಟಿ ರೂಪಾಯಿ ಲೂಟಿ ಕುರಿತು ಪಿಎಂ ಮೋದಿ ಮಾಡಿರುವುದು ಸತ್ಯಕ್ಕೆ ದೂರವಾದ ಆರೋಪ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಲು ಸಮರ್ಥವಾಗಿದೆ. ಕರ್ನಾಟಕದಿಂದ ಹಣ ಕಳುಹಿಸುವ ಅವಶ್ಯಕತೆಯಿಲ್ಲ. ಪ್ರಧಾನಿಗಳಾಗಿ ಈ ರೀತಿ ಮಾತನಾಡುವುದು ಸರಿಯಲ್ಲವೆಂದು ಗೃಹ ಸಚಿವ ಜಿ. ಪರಮೇಶ್ವರ ಕಿಡಿ ಕಾರಿದ್ದಾರೆ.

ಅವರು ಇಂದು ಮಾಧ್ಯಮಗಾರರೊಂದಿಗೆ ಮಾತನಾಡಿದರು. ಮದ್ಯಕ್ಕೆ ಸಂಬಂಧಿಸಿದಂತೆ 700 ಕೋಟಿ ರೂಪಾಯಿ ಲೂಟಿಯ ಆರೋಪದ ಬಗ್ಗೆ ಪಿಎಂ ಮೋದಿ ಬಳಿ ಯಾವ ಪುರಾವೆಯಿದೆ ಗೊತ್ತಿಲ್ಲ. ಆದರೇ ಅವರು ಸತ್ಯಕ್ಕೆ ದೂರವಾದ ಮಾತುಗಳನ್ನು ಆಡಿದ್ದಾರೆ. ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷ ಕೂಡ ಇದೆ. ಅಲ್ಲಿನ ನಾಯಕರು ಚುನಾವಣೆಯನ್ನು ನೋಡಿಕೊಳ್ಳುತ್ತಾರೆ.

ಕರ್ನಾಟಕದವರು ಹೋಗಿ ನೋಡಿಕೊಳ್ಳುವ ಅವಶ್ಯಕತೆಯಿಲ್ಲ. ಅವರಿಗೆ ಹಣಕಾಸಿನ ವ್ಯವಸ್ಥೆ ನಾವು ಮಾಡಬೇಕಂತಿಲ್ಲ. ಚುನಾವಣೆಯನ್ನು ಎದುರಿಸಲು ಅಲ್ಲಿನ ನಾಯಕರು ಸಮರ್ಥರಾಗಿದ್ದಾರೆ. ನಾವು ಇಲ್ಲಿಂದ ಅವರಿಗೆ ಹಣ ಕಳುಹಿಸುವ ಅವಶ್ಯಕತೆಯಿಲ್ಲ. ಇದು ಪ್ರಧಾನಿಗಳು ಹೇಳುವ ಮಾತಲ್ಲ ಎಂದರು.

Tags:

error: Content is protected !!