ಅಥಣಿ :ಅಥಣಿ ಹೆಸ್ಕಾಂ ಇಲಾಖೆ ಕಳ್ಳಾಟ ಹೆಚ್ಚಾಗಿದ್ದು 86 ಕೋಟಿ ಹಗರಣದಲ್ಲಿ ಸುಮಾರು 21 ಅಧಿಕಾರಿಗಳು ಅಮಾನತ್ತುಗೊಂಡರು ಅಥಣಿ ಹೆಸ್ಕಾಂ ಇಲಾಖೆ ಇನ್ನು ಕೂಡ ಬದಲಾವಣೆ ಕಂಡಿಲ್ಲ. ತಾಲೂಕಿನ ಗ್ರಾಮೀಣ ಪ್ರದೇಶಗಳ ರೈತರ ಟ್ರಾನ್ಸಫಾರ್ಮರ್ ಸುಟ್ಟರು ರೈತರೆ ಹೆಸ್ಕಾಂ ಕಚೇರಿಗೆ ಖಾಸಗಿ ವಾಹನದಲ್ಲಿ ತಂದು ರಿಪೇರಿ ಮಾಡಿಸುವ ಅನಿವಾರ್ಯತೆ ಎದುರಾಗಿದೆ.
ಅಧಿಕಾರಿಗಳ ಕುರುಡತನಕ್ಕೆ ರೈತರು ಕಣ್ಣೀರು ಹಾಕುತ್ತಿದ್ದಾರೆ.ರೈತರು ಖಾಸಗಿ ವಾಹನಕ್ಕೆ ಸಾವಿರಾರು ರೂಪಾಯಿ ಹಣ ನೀಡಿ ವಿದ್ಯುತ್ ಪರಿವರ್ತಕ ಸಾಗಿಸುತ್ತಿದ್ದಾರೆ. ಸರ್ಕಾರದ ಆದೇಶಾನುಸಾರ ವಿದ್ಯುತ್ ಪರಿವರ್ತಕಗಳ ಸಂಪೂರ್ಣ ಜವಾಬ್ದಾರಿ ಹೆಸ್ಕಾಂ ಇಲಾಖೆಯದಾಗಿರುತ್ತದೆ ಆದರೆ ಹಣದಾಸೆಗೆ ಇಲಾಖೆ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೂಡಲೆ ಮಲಾಧಿಕಾರಿಗಳು ಗಮನ ಹರಿಸುವಂತೆ ರೈತರು ಆಗ್ರಹಿಸಿದ್ದಾರೆ.