Belagavi

ಅಥಣಿ ಫಾರ್ಮಹೌಸನಲ್ಲಿ ನಡೆದಿದ್ದು ಆತ್ಮಹತ್ಯೆಯಲ್ಲ…

Share

ಫಾರ್ಮ್ ಹೌಸ್ ನಲ್ಲಿ ದಂಪತಿಗಳ ಮೃತ ದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದು, ಇದು ಆತ್ಮಹತ್ಯೆ ಆಗಿರದೆ ಕೊಲೆಯಾಗಿರುವ ಸಂಶಯವನ್ನ ಎಸ್ಪಿ ಡಾಕ್ಟರ್ ಭೀಮಾ ಶಂಕರ್ ಗುಳೇದ್ ವ್ಯಕ್ತಪಡಿಸಿದ್ದಾರೆ.

ಅಥಣಿ ತಾಲೂಕಿನ ಮದಭಾವಿ ರಸ್ತೆಯ ಚೌಹಾನ್ ಫಾರ್ಮ್ ಹೌಸ್ ನಲ್ಲಿ ನಾನಾ ಸಾಹೇಬ್ ಬಾಬು ಚೌಹಾನ್ (58) ಮತ್ತು ಜಯಶ್ರೀ ನಾನಾಸಾಹೇಬ್ ಚೌಹಾನ್ (50) ಇವರ ಮೃತದೇಹಗಳು ಕಂಡುಬಂದಿದ್ದು ಗುರುವಾರದಂದು ಘಟನಾ ಸ್ಥಳಕ್ಕೆ ಭೇಟಿ ನೀಡಲಾಗಿದೆ. ದಂಪತಿಗಳ ಆರೋಪ ಒಂದರಲ್ಲಿ ಜೈಲು ಸೇರಿದ್ದು ಇತರ ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ವ್ಯಕ್ತವಾಗಿತ್ತು.

ಆದರೆ ಪೊಲೀಸರು ಬೀಗ ಮುರಿದು ತಪಾಸನೆಗಾಗಿ ಒಳ ಪ್ರವೇಶಿಸಿದಾಗ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನ ಕುಟುಂಬಸ್ಥರಿಗೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದರು.

Tags:

error: Content is protected !!