police

ನಾಲ್ಕು ದಿನಗಳ ಕಾಲ ನಡೆದ ಧರಣಿ ಸತ್ಯಾಗ್ರಹ ಕೊನೆಗೂ ಅಂತ್ಯ: ಜೆಪಿಸಿ ಕಮಿಟಿ ಯಿಂದ ಧರಣಿ ನಿರತರಿಗೆ ಭರವಸೆ

Share

ವಿಜಯಪುರ ನಗರ ಶಾಸಕ ಯತ್ನಾಳ ನೇತೃತ್ವದಲ್ಲಿ ನಡೆಸುತ್ತಿರುವ ಅಹೋ ರಾತ್ರೀ ಧರಣಿ ಸತ್ಯಾಗ್ರಹ ನಾಲ್ಕು ದಿನಗಳ ಬಳಿಕ ಅಂತ್ಯಗೊಂಡಿದೆ. ವಕ್ಫ್ ವಿವಾದವನ್ನು ಖಂಡಿಸಿ ಅಹೋರಾತ್ರೀ ಧರಣಿ ತ್ಯಾಗ್ರಹ ನಡೆಸುತ್ತಿದ್ದರು. ಕೆಂದ್ರದ ಜೆಪಿಸಿ‌ ಕಮಿಟಿ‌ ಜಿಲ್ಲೆಗೆ ಬಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಹೋರಾಟ ಅಂತ್ಯಗೊಳಿಸಲಾಗಿದೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ವಿಜಯಪುರ ಜಿಲ್ಲೆಗೆ ಬಂದಿದ್ದ ವೇಳೆ ವಕ್ಫ ಅದಾಲತ್ ನಡೆಸಿದ್ದ ಸಚಿವ ಜಮೀರ ಅಹ್ಮದ ಅವರು ಬಳಿಕ ಜಿಲ್ಲೆಯ ರೈತರಿಗೆ ಅಧಿಕಾರಿಗಳು ನೋಟಿಸ್ ನೀಡಲಾಗಿತ್ತು. ಅಲ್ಲಿಂದಲೇ ರೊಚ್ಚಿಗೆದ್ದ ರೈತರು ಅಹೋರಾತ್ರೀ ಹೋರಾಟವನ್ನು ಡಿಸಿ ಕಚೇರಿ ಮುಂಭಾಗ ಆರಂಭಸಿದರು. ಬಳಿಕ ಬಳಿಕ ಶಾಸಕ ಯತ್ನಾಳ ಹಾಗೂ ಮಾಜಿ‌ ಸಚಿವ ಸಿಟಿ ರವಿ ಅವರ ನೇತೃತ್ವದಲ್ಲಿ ಬೃಹತ್ ಹೋರಾಟದ‌ ಫಲವಾಗಿ ಸರ್ಕಾರ ರೈತರಿಗೆ ಕೊಟ್ಟಿದ್ದ ನೋಟಿಸ್ ವಾಪಸ್ ಪಡೆಯಲು ಸೂಚನೆ ನೀಡಿದ್ದರು.ಕ ಕೇವಲ ಸೂಚನೆ ನೀಡಿದರೆ ಮಾತ್ರವಲ್ಲ ಈ ಕಾಯ್ದೆಯೇ ರದ್ದಾಗಬೇಕು‌ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಯತ್ನಾಳ ಅವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು…

ಯಾವಾಗ ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯಲು ಸರ್ಕಾರ ಮುಂದಾದರೂ ಸಹಿತ ಶಾಸಕ ಯತ್ನಾಳ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಅಹೋರಾತ್ರೀ ಧರಣಿ ಸತ್ಯಾಗ್ರಹ ಆರಂಭಿಸಿದರು. ನಾಲ್ಕು ದಿನಗಳ ಕಾಲ ಧರಣಿ ಸತ್ಯಾಗ್ರಹ ಸ್ಥಳದಲ್ಲೇ ವಾಸ್ತವ್ಯವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೂಡಿದ್ದರು. ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣ ಮಾಡಬೇಕು.

ರೈತರ ಉತಾರಿಯ ಯಾವುದೇ ಕಲಂ ನಲ್ಲಿ ವಕ್ಫ್ ಎಂದು ನಮೂದಾಗಬಾರದು, ವಕ್ಫ್ ಟ್ರೂಬ್ಯೂನಲ್ ರದ್ದು ಮಾಡಿ, ವಕ್ಫ್ ಅದಾಲತ್ ಎಲ್ಲಿಯೂ ನಡೆಸಬಾರದು, 1974 ರ ಹಾಗೂ ನಂತರದ ಎಲ್ಲ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು ಹೀಗೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಅಹೊರಾತ್ರೀ ಧರಣಿ‌ ಸತ್ಯಾಗ್ರಹ ಆರಂಭಸಿದ್ದರು. ಇದರ ತೀವೃತೆ ಅರಿತ ಕೇಂದ್ರದ ಜೆಪಿಸಿ ಕಮಿಟಿ ವಿಜಯಪುರ ಜಿಲ್ಲೆಗೆ ಬಂದು ಪ್ರತಿಭಟನಾ ನಿರತರ ಬೇಡಿಕೆ ಆಲಿಸಿ ಸಮಸ್ಯೆಯ ಪರಿಹರಿಸುವ ಭರವಸೆ ನೀಡಿದರು…

ಒಟ್ಟಿನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ವಕ್ಫ್ ದಂಗಲ್ ದೆಹಲಿಗೂ ತಲುಪಿದ್ದ ಜೆಪಿಸಿ ಕಮಿಟಿ ಜಿಲ್ಲೆಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಈ ವಿಚಾರವಾಗಿ ವಕ್ಫ್ ಕಾಯ್ದೆಯಲ್ಲಿ ಅಮೂಲಾಗ್ರ ಬದಲಾವಣೆ ಜೆಪಿಸಿ ಕಮಿಟಿ ತರತ್ತಾ ಎಂಬುದನ್ನು ಕಾದು ನೊಡಬೇಕಿದೆ..‌

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ…

Tags:

error: Content is protected !!