ಬೆಳಗಾವಿ ರೈತರು ಬೆಳೆದ ಭತ್ತಕ್ಕೆ 3 ಸಾವಿರ ರೂ. ಬೆಂಬಲ ಬೆಲೆ ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮುಂಗಾರು ಹಂಗಾಮಿನಲ್ಲಿ ಸತತವಾಗಿ ಬಂದ ಮಳೆಗೆ ಹಾನಿಯಾದ ಆಲೂಗಡ್ಡೆ ಹಾಗೂ ಇನ್ನಿತರ ಬೆಳೆಗಳ ನಷ್ಟಕ್ಕೆ ಜಿಲ್ಲಾಡಳಿತ ತತಕ್ಷಣ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ಆಲೂಗಡ್ಡೆ ಬೆಳೆ ನಷ್ಟವಾಗಿರುವ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು. ಅಪ್ಪಾಸಾಹೇಬ ದೇಸಾಯಿ, ಮಾರುತಿ ಕಡೆಮನಿ, ಸುಭಾಸ ಧಾಯಗೊಂಡೆ, ರಾಮನಗೌಡ ಪಾಟೀಲ್, ಚಂದ್ರು ರಾಜಾಯಿ, ರಾಜು ಕಾಣಿಕರ, ನಾಮದೇವ ದುಡಮ, ಫಕೀರಾ ಸದಾವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು