ಧಾರವಾಡದ ನಗರದ ಕಳೆದ ದಿನ ತಡ ರಾತ್ರಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರವರು ಬೈಕ್ನಲ್ಲಿ ಸಿಟಿ ರೌಂಡ್ಸ ಹಾಕುವ ಮೂಲಕ, ಲೇಟ್ ನೈಟ್ ಸಿಟಿ ಸುತ್ತುವವರ ಸೇರಿ ಪ್ರಮುಖ ವೃತ್ತಗಳಲ್ಲಿ ಹರಟೆ ಹೊಡೆಯುತ್ತಾ ನಿಲ್ಲುವವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಧಾರವಾಡ ನಗರದ ಜುಬ್ಲಿ ವೃತ, ಟೋಲ್ ನಾಕಾ ಸೇರಿದಂತೆ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆ ಮಾರ್ಗವಾಗಿ ಬೈಕ್ನಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಸಿಟಿ ರೌಂಡ್ಸ್ ನಡೆಸಿದ ಪೊಲೀಸ್ ಕಮಿಷನರ್ ಎನ್ ಶಶಿಕುಮಾರವರು, ಅನುಮಾನಾಸ್ಪದವಾಗಿ ಓಡಾಟ ಮಾಡುತ್ತಿದ್ದವರನ್ನು ಸಿಬ್ಬಂದಿಯಿಂದ ತಪಾಸಣೆ ನಡೆಸಿದರು. ಜತೆಗೆ ಇದೇ ವೇಳೆ ಲೇಟ್ ನೈಟ್ ಸಿಟಿ ಸುತ್ತಿದ್ದವರು ಸೇರಿದಂತೆ, ಪ್ರಮುಖ ವೃತಗಳಲ್ಲಿ ಹರಟೆ ಹೊಡೆಯುವ ಯುವಕರಿಗೆ ಖಡಕ್ ಎಚ್ಚರಿಕೆ ನೀಡಿದರು. ಇನ್ನು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕ್ರೈಂ ಕಂಟ್ರೋಲ್ ಮಾಡುವುದರ ಜೊತೆಗೆ, ವಿವಿಧ ರೀತಿಯ ಪ್ರಯತ್ನವನ್ನೂ ಕಮಿಷನರ ನಡೆಸುತ್ತಿದ್ದು, ಅವಳಿನಗರದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.