ಬೆಳಗಾವಿ : ನಾನು ಮಹಿಳಾ ಅಧಿಕಾರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕೆಲಸ ಸಹಿಸಿಕೊಳ್ಳದ ಕೆಲವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹಿಂದುಳಿದ ವರ್ಗಗದ ಜಿಲ್ಲಾಧಿಕಾರಿ ಶಿವಪ್ರೀಯಾ ಕಡೆಚೂರ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಒಂದು ವರ್ಷ ನಾಲ್ಕು ತಿಂಗಳಿನಿಂದ ಶೃದ್ಧೆ, ಭಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ಧ ಕೆಲವರು ಷಡ್ಯಂತ್ರ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ನಮ್ಮ ಇಲಾಖೆಯ ಜಂಟಿ ಸಭೆ ಮಾಡೋಣ ಎಂದಿದ್ದರು. ಸಮಾಜ ಕಲ್ಯಾಣ ಇಲಾಖೆಯ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ದರ ಪಟ್ಟಿಯಲ್ಲಿ ಹೆಚ್ಚಳ ಮಾಡಿದ್ದಾರೆ. ಇದನ್ನು ಅನುಷ್ಠಾನ ಮಾಡಲು ಸಾಕಷ್ಟು ತಾಂತ್ರಿಕ ಸಮಸ್ಯೆ ಇದೆ. ಸರಕಾರದ ಆದೇಶದ ಪ್ರಕಾರ ಆಹಾರ ದರದ ಪರಿಷ್ಕರಣೆಯಲ್ಲಿ ನೂರು ರೂ. ದರ ಹೆಚ್ಚಳ ಮಾಡಿದೆ. ಕೆಳಮಟ್ಟದದಲ್ಲಿ ಅದನ್ನು ಅನುಷ್ಠಾನ ಮಾಡಲು ನಮಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದರು.
ವಾಡ್೯ ಗಳು ಹೊರಗಿನವರಲ್ಲ. ನನ್ನೊಂದಿಗೆ ಯಾರ ಜೊತೆಗೂ ಜಗಳ ಬಂದಿಲ್ಲ. ನಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಯಾವುದೇ ಕಿರುಕುಳ ನಾನು ಕೊಟ್ಟಿಲ್ಲ. ಜಿಪಂನಲ್ಲಿ ಸುಮಾರು 200 ಜನರಿಂದ ಖಾಲಿ ಹಾಳಿಯ ಮೇಲೆ ಸಹಿ ಪಡೆದುಕೊಂಡು ದುರುಪಯೋಗ ಮಾಡಿ ನನ್ನ ವಿರುದ್ಧ ಕೆಲವರು ಪಿತೂರಿ ಮಾಡುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ನಾನು ಕಿರುಕುಳ ನೀಡುತ್ತೇನೆ ಎಂದು 200 ಜನ ವಾಡ್೯ನ ಸಹಿ ಮಾಡಿರುವುದು ಅವರಿಗೆಯೇ ತಿಳಿದಿಲ್ಲ. ಇದೊಂದು ದೊಡ್ಡ ಷಡ್ಯಂತ್ರವಾಗಿದೆ. ಈ ಕುರಿತು ಜಿಪಂ ಸಿಇಒಗೆ ಈಗಾಗಲೇ ವರದಿ ನೀಡಲಾಗಿದೆ ಎಂದರು. ನಮ್ಮ ಇಲಾಖೆಯಲ್ಲಿ ಅನುದಾನ ಕೊರತೆಯೂ ಇದೆ. ನಮ್ಮ ಜಿಲ್ಲೆಯ ಹಾಸ್ಟೆಲ್ ಸಣ್ಣಪುಟ್ಟ ಸಮಸ್ಯೆ ಇರುತ್ತದೆ. ಅದನ್ನು ದುರಸ್ತಿ ಮಾಡಿಸಬೇಕು. ಇದರ ದುರುಪಯೋಗ ಕೆಲವೊಂದಿಷ್ಟು ಜನರ ವಿರುದ್ಧ ತನಿಖೆ ನಡೆಸಲು ತಿಳಿಸಲಾಗಿದೆ ಎಂದರು.