Vijaypura

ಮರಾಠಿ ನೆಲದಲ್ಲಿ ಕನ್ನಡಿಗ ಜನಪ್ರತಿಧಿಗಳ ಪ್ರಚಾರದ್ದೇ ಹವಾ: ‘ಮಹಾ’ ಪ್ರಚಾರದ ಅಖಾಡದಲ್ಲಿ ಕರ್ನಾಟಕದ ಹಾಲಿ ಹಾಗೂ ಮಾಜಿ ಸಚಿವರು

Share

 

ವಿಜಯಪುರ ಮಹಾರಾಷ್ಟ್ರ ರಾಜ್ಯದಲ್ಲಿ ಚುನಾವಣೆ ವಾತಾವರಣ ಕಾವೇರಿದೆ. ಘಟಾನುಘಟಿಗಳು ಚುನಾವಣೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ದಲ್ಲಿ ಕೆಲವು ಕಡೆ ಕನ್ನಡಿಗರ ಮತಗಳೇ ನಿರ್ಣಾಯಕವಾಗಿವೆ. ಹೀಗಾಗಿ ಕನ್ನಡಿಗರ ಮತ ಸೆಳೆಯಲು ಕರ್ನಾಟಕದ ಜನಪ್ರತಿನಿಧಿಗಳು ನೆರೆಯ ಮರಾಠಿ ನೆಲದಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಹಿಂದವಿ ಸಾಮ್ರಾಜ್ಯದ ಕನಸು ಕಂಡು ವೀರ, ಛತ್ರಪತಿ ಶಿವಾಜಿ ಮಹಾರಾಜರ ನೆಲವಾಗಿರುವ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ವಿಧಾಸಭೆ ಚುನಾವಣೆ ದಿ.20 ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ಮಿತ್ರ ಪಕ್ಷಗಳು ಅಧಿಕಾರ ಹಿಡಿಯಲು ಕಸರತ್ತು ನಡೆಸಿವೆ. ಮಹಾರಾಷ್ಟ್ರ ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಮತದಾರರ ಮನಗೆಲ್ಲಲ್ಲು ತಾಲೀಮು ನಡೆಸುತ್ತಿವೆ. ಇನ್ನೂ ಮಹಾರಾಷ್ಟ್ರದ ರಾಜ್ಯದ ಕೊಂಕಣಿ, ಗಡಿಭಾಗದಲ್ಲಿ ಕನ್ನಡಿಗರ ಮತದಾರರೇ ಅಧಿಕವಾಗಿದ್ದಾರೆ. ಹಾಗೂ ಇವರೇ ನಿರ್ಣಾಯಕ ಮತದಾರರು. ಹೀಗಾಗಿ ಕನ್ನಡಿಗರ ಮತ ಸೆಳೆಯಲು ಮಹಾರಾಷ್ಟ್ರ ರಾಜ್ಯದಲ್ಲಿ ರಾಜ್ಯದ ದೊರೆ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ. ಇನ್ನೂ ಇವರ ಜೊತೆ ವಿಜಯಪುರ ಜಿಲ್ಲೆಗೆ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ನೀರಾವರಿ ಕಲ್ಪಿಸಿಕೊಟ್ಟ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಕೂಡಾ ಪ್ರಚಾರದಲ್ಲಿ ತೊಡಗಿದ್ದಾರೆ. ಸಾಂಗಲಿ, ಪುಣೆ, ಸೋಲಾಪುರ, ಕೋಲಾಪುರ, ಫಂಡರಾಪುರ, ಮಂಗಳವೇಡೆ, ಜತ್, ಸೇರಿದಂತೆ ಹಲವೆಡೆ ಅಬ್ಬರದ ಪ್ರಚಾರ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಿತ್ರಕೂಟ ದಿಗ್ವಿಜಯ ಸಾಧಿಸಲಿದೆ ಗ್ಯಾರಂಟಿ ಸರಕಾರ ಸ್ಥಾಪನೆಯಾಗಿ, ರಾಜ್ಯದ ಜನತೆಯ ಬದುಕು ಹಸನಾಗಲಿದೆ ಎಂದು ಭರ್ಜರಿ ಪ್ರಚಾರಕ್ಕೆ ಇಳಿದು ಕನ್ನಡಿಗರ ಮತಗಳನ್ನು ಸೆಳೆಯುವ ಕಸರತ್ತು ನಡೆಸಿದ್ದಾರೆ.

 

ಇನ್ನೂ ವಿಜಯಪುರ ಜಿಲ್ಲೆಯ ಬಿಜೆಪಿ ರಾಜಕಾರಣಿಗಳಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕೂಡಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ರಾಹುಲ್ ಜಾಧವ ಸೇರಿದಂತೆ ಹಲವು ಪದಾಧಿಕಾರಿಗಳು ನೆರೆಯ ಮಹಾರಾಷ್ಟ್ ಚುನಾವಣೆ ಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳನ್ನು ಕ್ರೋಡೀಕರಿಸುವ ಉದ್ದೇಶದೊಂದಿಗೆ ಠಿಕಾಣಿ ಹೂಡಿದ್ದಾರೆ. ಗಡಿ ಭಾಗದಲ್ಲಿ ಕನ್ನಡಿಗರ ಮತಗಳೇ ನಿರ್ಣಾಯಕವಾಗಿರುವದ್ರಿಂದ ಕನ್ನಡಿಗರ ಮನವೊಲಿಸಲು ಮುಂದಾಗಿದ್ದಾರೆ. ವಿಜಯಪುರ ಜಿಲ್ಲೆಯು ಕೂಡಾ ಗಡಿ ಜಿಲ್ಲೆಯಾಗಿರೊದ್ರಿಂದ ರಾಜಕೀಯ ಸಂಬಂಧಗಳು, ವ್ಯಯಕ್ತಿಕ ಸಂಬಂಧಗಳು ಉತ್ತಮವಾಗಿವೆ. ಹೀಗಾಗಿ ಎರಡು ಪಕ್ಷಗಳ ನಾಯಕರು ಪ್ರಚಾರದ ಅಖಾಢಾದಲ್ಲಿದ್ದಾರೆ.

ಒಟ್ನಲ್ಲಿ ಕನ್ನಡಿಗರ ಮತಗಳನ್ನು ಸೆಳೆಯಲು ಬಸವನಾಡಿನ ಜನಪ್ರತಿನಿಧಿಗಳು ಕೂಡಾ ಹಗಲು ರಾತ್ರಿ‌ ಎನ್ನದೆ ಕನ್ನಡಿಗರ ಮನಸ್ಸು ಗೆಲ್ಲಲು ಪ್ರಚಾರ ನಡೆಸುತ್ತಿದ್ದಾರೆ. ಇವರ ಪ್ರಚಾರದ ಫಲಿತಾಂಶ ಏನಿರಬಹುದು ಚುನಾವಣೆಯ ಫಲಿತಾಂಶ ಬಂದಾಗ ತಿಳಿದುಬರಲಿದೆ.

Tags:

error: Content is protected !!