ಬಂಧನವಾದರೂ ಚಿಂತೆಯಿಲ್ಲ. ಆದರೇ ಈ ಬಾರಿಯೂ ಕರ್ನಾಟಕ ಸರಕಾರದ ಚಳಿಗಾಲದ ಅಧಿವೇಶನದ ಪ್ರತಿಯಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಮಹಾಮೇಳಾವಾ ಆಯೋಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡುವ ನಿರ್ಣಯ ಕೈಗೊಳ್ಳಲಾಗಿದೆ.
ಮಾಜಿ ಶಾಸಕ ಮನೋಹರ್ ಕಿಣೇಕರ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಡಿಸೇಂಬರ್ 9 ರಂದು ವಾಕ್ಸಿನ್ ಡಿಪೋ ಮೈದಾನದಲ್ಲಿ ಕರ್ನಾಟಕ ಸರಕಾರದ ಚಳಿಗಾಲದ ಅಧಿವೇಶನದ ಪ್ರತಿಯಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಮಹಾಮೇಳಾವಾ ಆಯೋಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲ ಘಟಕಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಈ ವೇಳೆ ಖಜಾಂಚಿ ಪ್ರಕಾಶ್ ಮರಗಾಳೆ, ರಣಜಿತ್ ಚವ್ಹಾಣ ಪಾಟೀಲ್, ಆರ್. ಎಂ. ಚೌಗುಲೆ, ಗೋಪಾಳ ಪಾಟೀಲ್, ಮಾಲೋಜಿರಾವ್ ಅಷ್ಟೇಕರ, ಬಿ. ಡಿ. ಮೋಹನಗೆಕರ್, ಪಿಯುಶ್ ಹಾವಳ್, ಇನ್ನುಳಿದವರು ಭಾಗಿಯಾಗಿದ್ದರು.