Belagavi

ವನ್ ಸೈಡ್ ಲವ್ ; ಪಾಗಲ್ ಪ್ರೇಮಿಯಿಂದ ಆಸ್ಪತ್ರೆಗೆ ನುಗ್ಗಿ ವೈದ್ಯೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ…

Share

ಕೊಲ್ಕತ್ತಾ ಘಟನೆ ಮಾಸುವ ಮುನ್ನವೇ ಬೆಳಗಾವಿಯಲ್ಲಿ ಬೆಚ್ಚಿ ಬೀಳುವ ಘಟನೆ ನಡೆದಿದೆ. ಒನ್ ಸೈಡ್ ಲವರನೊಬ್ಬ ವೈದ್ಯೆಯೋರ್ವಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇನ್ನು ಮಗಳ ಮೇಲಿನ ಹಲ್ಲೆಗೆ ನೊಂದ ತಂದೆ ಸಾವನಪ್ಪಿದ್ದಾರೆ.

ಪ್ರೀತಿಸುವಂತೆ ಹಿಂದೆ ಬಿದ್ದ ಪಾಗಲ್ ಪ್ರೇಮಿಯಿಂದ ಆಸ್ಪತ್ರೆಗೆ ನುಗ್ಗಿ ವೈದ್ಯೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ವೈದ್ಯೆ ಬಚಾವ್ ಆಗಿದ್ದಾರೆ. ಕೈ ಚೀಲದಲ್ಲಿ ತೆಗೆದುಕೊಂಡು ಬಂದಿದ್ದು ಮಚ್ಚಿನಿಂದ ಏಕಾಏಕಿ ಆಸ್ಪತ್ರೆಯ ಕೌಂಟರ್ ಬಳಿಯೇ ವೈದ್ಯೆ ಮೇಲೆ ಅಟ್ಯಾಕ್ ಮಾಡಿದ್ದಾನೆ. ಮಚ್ಚು ಬೀಸುತ್ತಿದ್ದಂತೆ ವೈದ್ಯೆ ಪ್ರಾಣ ಪಣಕ್ಕಿಟ್ಟು ಆತ್ಮರಕ್ಷಣೆ ಮಾಡಿಕೊಂಡಿದ್ದಾರೆ.

ಪಾಗಲ್ ಪ್ರೇಮಿ ಪ್ರಕಾಶ್ ಜಾಧವ್ ಎಂಬಾತನಿಂದಲೇ ಈ ಕೃತ್ಯವನ್ನು ಎಸೆಗಲಾಗಿದೆ. ವೈದ್ಯೆ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಕಾಲೋನಿಯಲ್ಲಿ ಪ್ರಕಾಶ್ ವಾಸವಾಗಿದ್ದು, ವೈದ್ಯೆಗೆ ನಿತ್ಯ ಹಿಂಬಾಲಿಸುವುದು, ಮದುವೆ ಆಗುವಂತೆ ಪೀಡಿಸುತ್ತಿದ್ದನಂತೆ.
ಕೆಲ ದಿನಗಳ ಹಿಂದೆ ಪ್ರಕಾಶ್ ಕುಟುಂಬಸ್ಥರನ್ನ ವೈದ್ಯೆ ಮನೆಗೆ ಹೋಗಿದ್ದನಂತೆ. ಈ ವೇಳೆ ಮದುವೆಯನ್ನ ವೈದ್ಯೆಯ ಕುಟುಂಬಸ್ಥರು ನಿರಾಕರಿಸಿದ್ದಾರೆ. ಇದಾದ ಬಳಿಕವೂ ಮತ್ತೆ ಮದುವೆ ಆಗುವಂತೆ ಬೆನ್ನು ಬಿದ್ದಿದ್ದ. ಇದಕ್ಕೆ ವೈದ್ಯೆ ಸ್ಪಂದನೆ ಮಾಡದಿದ್ದಾಗ ಆಸ್ಪತ್ರೆಗೆ ನುಗ್ಗಿ ಅಟ್ಯಾಕ್ ಮಾಡಿದ್ದಾನೆ.

ಪಾಗಲ್ ಪ್ರೇಮಿಯ ಅಟ್ಟಹಾಸಕ್ಕೆ ಬೆಚ್ಚಿ ಬಿದ್ದು ಬಂದ ರೋಗಿಗಳು ಹೊರಗೆ ಓಡಿ ಹೋಗಿದ್ದಾರೆ. ಕೊನೆ ವರೆಗೂ ಆತನೊಂದಿಗೆ ಹೋರಾಟ ಮಾಡಿ ಜೀವ ಉಳಿಸಿಕೊಂಡ ವೈದ್ಯೆ. ಅ.30ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಖಡೇ ಬಜಾರ್ ಪೊಲೀಸರು ಆರೋಪಿಯನ್ನ ಕೂಡಲೇ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಮಗಳ ಸ್ಥಿತಿಯನ್ನು ನೆನೆದು ನೊಂದ ತಂದೆ ಜೈಲಿನಿಂದ ಬಂದು ಆರೋಪಿ ಮಗಳಿಗೆ ಏನಾದರೂ ಮಾಡುತ್ತಾನೆಂದು ಹೆದರಿ ಸಾವನ್ನಪ್ಪಿದ್ದಾರೆ. ಇನ್ನು ಈ ಕುರಿತು ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಅವರು ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

Tags:

error: Content is protected !!