Hukkeri

ತಾಲೂಕಾ ಸರಕಾರಿ ನೌಕರರ ಸಂಘದ ಅದ್ಯಕ್ಷರಾಗಿ ಅವಿನಾಶ ಹೋಳೆಪ್ಪಗೋಳ ಆಯ್ಕೆ.

Share

ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಹುಕ್ಕೇರಿ ತಾಲೂಕು ಘಟಕದ ಅಧ್ಯಕ್ಷರಾಗಿ ಅವಿನಾಶ ಹೊಳೆಪ್ಪಗೋಳ ಅವರು ಮರು ಆಯ್ಕೆಯಾಗಿದ್ದಾರೆ.

ತಾಲೂಕು ಪಂಚಾಯಿತಿ ಆವರಣದಲ್ಲಿ ಶನಿವಾರ 2024- 29ನೇ ಅವಧಿಗೆ ನಡೆದ ಸಂಘದ ತಾಲೂಕು ಘಟಕದ ಅಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ ಜಯ ಗಳಿಸಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕರೂ ಆದ ಚುನಾವಣಾಧಿಕಾರಿ ಆರ್.ಬಿ.ನಾಯ್ಕರ ಘೋಷಿಸಿದರು.

ಈ ಅಧ್ಯಕ್ಷ ಹುದ್ದೆಗೆ ಆಯ್ಕೆ ಬಯಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅವಿನಾಶ ಹೊಳೆಪ್ಪಗೋಳ ಮತ್ತು ಶಿಕ್ಷಣ ಇಲಾಖೆಯ ಎಂ.ಬಿ.ನಾಯಿಕ ನಡುವೆ ಸ್ಪರ್ಧೆ ಏರ್ಪಟ್ಟು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ನೇರಾನೇರ ಸ್ಪರ್ಧೆ ಕಂಡು ಬಂದಿತು.

ಒಟ್ಟು ಚಲಾವಣೆಯಾದ 31 ಮತಗಳ ಪೈಕಿ ಅವಿನಾಶ ಹೊಳೆಪ್ಪಗೋಳ 16 ಮತಗಳನ್ನು ಪಡೆಯುವ ಮೂಲಕ ಸಂಘದ ಅಧ್ಯಕ್ಷರಾಗಿ ಮತ್ತೊಮ್ಮೆಗೆಲುವಿನ ನಗೆ ಬೀರಿದ್ದಾರೆ. ಇನ್ನು ಪ್ರತಿಸ್ಪರ್ಧಿ ಎಂ.ಬಿ.ನಾಯಿಕ 15 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಇನ್ನು ರಾಜ್ಯ ಪರಿಷತ್ ಸ್ಥಾನಕ್ಕೆ ಖಜಾನೆ ಇಲಾಖೆಯ ಸುಭಾಷ ಝಂಡೆನ್ನವರ 24 ಮತಗಳನ್ನು ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ಆರೋಗ್ಯ ಇಲಾಖೆಯ ನವೀನಕುಮಾರ ಬಾಯಿನಾಯಕ ಕೇವಲ 7 ಮತಗಳನ್ನು ಪಡೆದು ಹೀನಾಯ ಸೋಲುಂಡರು. ತಾಲೂಕು ಘಟಕದ ಖಜಾಂಚಿ ಸ್ಥಾನಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಿ.ಎ.ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಾ ಸರಕಾರಿ ನೌಕರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ

Tags:

error: Content is protected !!