ಅಮ್ಮಾಜೇಶ್ವರಿ ಏತನೀರಾವರಿ ಹಾಗೂ ಬಸವೇಶ್ವರ ಏತ ನೀರಾವರಿ ಎಂಬ ಎರಡು ಬೃಹತ್ ನೀರಾವರಿ ಕಾಮಗಾರಿಗಳನ್ನು ಒಂದೇ ಇಲಾಖೆ ಮಾಡುತ್ತಿದ್ದರೂ ಕೂಡ ತಾರತಮ್ಯವೇಕೆ ಎಂಬುದು ರೈತರ ಪ್ರಶ್ನೆಯಾಗಿದೆ.ಅಧಿಕಾರಿಗಳಿಗೆ ಹೊಸ ಕಾಮಗಾರಿ ವಿಷಯದಲ್ಲಿನ ಆಸಕ್ತಿ ಹಳೆಯ ಕಾಮಗಾರಿಯಲ್ಲೇಕೆ ಇಲ್ಲ.. ಎಂದು ರೈತರು ಕೇಳುತ್ತಿದ್ದಾರೆ. ಈ ಕುರಿತು ಇಲ್ಲಿದೆ ಒಂದು ವರದಿ.
ಹೌದು,, ಬೆಳಗಾವಿ ಜಿಲ್ಲೆ ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ಎರಡು ಬೃಹತ್ ಕಾಮಗಾರಿಗಳು ಪ್ರಾರಂಭವಾಗಿವೆ. ಕೇವಲ ಆರು ತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿಸಿದ ಅಮ್ಮಾಜೇಶ್ವರಿ ಏತ ನೀರಾವರಿಯು ಈಗಾಗಲೇ 50% ಪೂರ್ಣಗೊಳ್ಖುತ್ತಿದೆ, ಆದ್ರೆ ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿದರೂ ಬಸವೇಶ್ವರ ಎತ ನೀರಾವರಿ ಇನ್ನು ಅರ್ಧಕ್ಕೆ ನಿಂತಿದೆ ಅಂದರೆ ಏನಿದರ ಅರ್ಥ ಎಂದು ರೈತರ ಪ್ರಶ್ನೆಯಾಗಿದೆ.!
ಎರಡೂ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಹಿಪ್ಪರಗಿ ಆಣೆಕಟ್ಟು ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರರು ಬಸವೇಶ್ವರ ಎತ ನೀರಾವರಿ ಕಾಮಗಾರಿ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ. ಬಹುತೇಕ ಕಮಿಷನ್ ದುಡ್ಡು ಬಂದಿಲ್ಲ ಅದಕ್ಕೆ ಕಾಮಗಾರಿ ಪೂರ್ಣಗೊಳ್ಳುವಲ್ಲಿ ವಿಳಂಬವಾಗುತ್ತಿದೆ, ನಿಮಗೆ ಕಮಿಷನ್ ಬೇಕಾದರೆ ಹೇಳಿ ಎಲ್ಲ ರೈತರು ಸೇರಿಸಿ ಮನೆ ಮನೆಗೆ ತೆರಳಿ ಪಟ್ಟಿ ಮಾಡಿ ಸಂಗ್ರಹಿಸಿ ಕೊಡ್ತೀವಿ ಎಂದು ರೈತ ಲಕ್ಷ್ಮಣ ಎಂಬ ರೈತ ಆರೋಪ ಮಾಡಿದರು.
ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಅನ್ನೋ ಗಾದೆ ಮಾತು ಇಲ್ಲಿ ಗಡಿಭಾಗದ ರೈತರ ವಿಷಯದಲ್ಲಿ ದಿಟವಾಯ್ತಾ..!
ಹಳೆಯ & ಹೊಸ ನೀರಾವರಿ ಯೋಜನೆಯ ಮಧ್ಯೆ ಕಮಿಷನ್ ಭೂತ ಏನಾದ್ರು ಅಂಟಿಕೊಂಡಿದೆಯಾ.! ಎಂಬುದು ರೈತರ ಆರೋಪವಾಗಿದೆ.