ಮುಡಾದ ಹಳೆಯ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರಸ್ತುತ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ,ಮುಡಾ ಪ್ರಕರಣದಲ್ಲಿ ದೂರುದಾರರು ನೀಡಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯವಾದಿ ಎನ್.ಆರ್. ಲಾತೂರ್ ಹೇಳಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಡಾ ಪ್ರಕರಣ ನ್ಯಾಯಾಲಯವನ್ನು ಮತ್ತು ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ ಅದಕ್ಕಾಗಿ ಜನರಿಗೆ ನಿಜವಾದ ಸತ್ಯಾಸತ್ಯೆತೆ ತಿಳಿಯಲು ಕರ್ನಾಟಕ ಜಾಗೃತ ವಕೀಲರ ವೇದಿಕೆ ವತಿಯಿಂದ ಮೂಡಾ ಪ್ರಕರಣ ಕುರಿತಾಗಿ ಪುಸ್ತಕ ರೂಪದಲ್ಲಿ ಹೊರತರಲಾದ ಈ ಪುಸ್ತಕವನ್ನು ಎಲ್ಲರೂ ಓದುವುದರ ಮೂಲಕ ತಿಳಿದುಕೊಳ್ಳಬೇಕಾಗಿದೆ ಎಂದರು.
ಮತ್ತೊಬ್ಬ ಹಿರಿಯ ವಕೀಲರಾದ ಶ್ರೀ ಶಾಸ್ತ್ರೀಯವರು ಮಾತನಾಡಿ , ನಮ್ಮದು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಉದ್ದೇಶವಿಲ್ಲ ಆದರೆ ಸುಳ್ಳು ದೂರುಗಳನ್ನು ಸಲ್ಲಿಸುವುದರ ಮೂಲಕ ನ್ಯಾಯಾಲಯವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಉತ್ತಮ ನಡೆಯಲ್ಲ ಶೋಷಿತ ಸಮುದಾಯದವರು ಅಧಿಕಾರಕ್ಕೆ ಬಂದಾಗ ಉದ್ದೇಶಪೂರ್ವಕವಾಗಿ ಅವರ ಧೈರ್ಯವನ್ನು, ಚೈತನ್ಯವನ್ನು ಕುಗ್ಗಿಸುವ ಪ್ರಯತ್ನವನ್ನ ಮಾಡುತ್ತಿರುವಂತಹ ನಡೆ ಸರಿಯಾದದ್ದಲ್ಲ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಅಧಿಕಾರ ನಡೆಸುತ್ತಿರುವಂತಹ ಪ್ರಸ್ತುತ ಸರಕಾರಕ್ಕೆ ಈ ಪ್ರಕರಣ ಕಿರುಕುಳಕಾರಿಯಾಗಿ ಪರಿಗಣಿಸಿದೆ ಅದಕ್ಕಾಗಿ ಮುಡಾ ಪ್ರಕರಣವನ್ನು ಅಧ್ಯಯನ ಮಾಡಿ ಹಿರಿಯ ನ್ಯಾಯವಾದಿಗಳು ಕರ್ನಾಟಕ ಜಾಗೃತ ವಕೀಲರ ವೇದಿಕೆಯ ಸದಸ್ಯರು ಪ್ರಕಟಪಡಿಸಿರುವ ಈ ಪುಸ್ತಕವನ್ನು ಎಲ್ಲರೂ ಓದುವುದರ ಮೂಲಕ ಜಾಗೃತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಬೆಳಗಾವಿಯ ವಕೀಲರಾದ ನಿಂಗಪ್ಪ ಮಸ್ತಿ, ವಿನೋದ ಪಾಟೀಲ, ಗಂಗಾಧರ ಶೇಗುಣಸಿ ಹಾಗೂ ಇತರರು ಉಪಸ್ಥಿತರಿದ್ದರು.