Kagawad

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಐನಾಪುರದಲ್ಲಿ ಮದ್ಯವರ್ಜನ ಶಿಬಿರ ಜರುಗಿತು

Share

ಕಾಗವಾಡ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥಾಪಕರಾದ ಸಂಸದ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯದಲ್ಲಿ 37 ಜಿಲ್ಲಾ ವೇದಿಕೆಗಳನ್ನು ಸ್ಥಾಪಿಸಿ 10 ಸಾವಿರಕ್ಕೂ ಮಿಕ್ಕಿದ ಸ್ವಯಂಸೇಕರ ಮುಖಂಡತ್ವದಲ್ಲಿ 1.25 ಲಕ್ಷಕ್ಕೂ ಮಿಕ್ಕಿದ ವ್ಯಸನಿಗಳನ್ನು ಮದ್ಯವರ್ಜನ ಶಿಬಿರಗಳ ಮೂಲಕ ಮನಪರಿವರ್ತನೆಗೊಳಿಸಿ ನೆಮ್ಮದಿಯಿಂದ ಬದುಕಲು ಕಾರಣೀಭೂತವಾಗಿದೆಯೆಂದು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಸಂಜಯ ನಾಡಗೌಡ ಹೇಳಿದರು.

ಸೋಮವಾರ ರಂದು ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದ ಶ್ರೀ ವಿಠ್ಠಲ ರುಕ್ಮೀನಿ ದೇವಸ್ಥಾನ ಸಭಾ ಭವನದಲ್ಲಿ ಮಹಾತ್ಮಾ ಗಾಂಧಿಜಿ ಇವರ ಜಯಂತಿ ನಿಮಿತ್ಯವಾಗಿ ನವಜೀವನ ಸಮೀತಿ ಸದಸ್ಯರ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉದ್ಘಾಟಕರಾದ ಆಗಮಿಸಿದ್ದ ಸಂಜಯ ನಾಡಗೌಡ ತಮ್ಮ ವಿಚಾರ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ವ್ಯಸನಮುಕ್ತ ಸಮಾಜ ನಿರ್ಮಿಸಲು ಪ್ರಯತ್ನಿಸಬೇಕಾಗಿತ್ತು. ಆದರೆ ಈ ಸೇವೆಯನ್ನು ಡಾ. ವೀರೇಂದ್ರ ಹೆಗ್ಡೆಯವರು ತಮ್ಮ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಳ್ಳುತ್ತಿದ್ದಾರೆ. ಈ ವರೆಗೆ 1866 ಮದ್ಯವರ್ಜನ ಶಿಬಿರಗಳನ್ನು ಹಮ್ಮಿಕೊಂಡು, ಅದರಲ್ಲಿ 1.32 ಲಕ್ಷ ಜನರು ಕುಡಿತನ್ನು ಬಿಟ್ಟು ನೆಮ್ಮದಿಯ ಬದುಕನ್ನು ಬಾಳುತ್ತಿದ್ದಾರೆ.

ಒಂದು ಭಾಗದಲ್ಲಿ 8 ದಿನ ಜರುಗುವ ಶಿಬಿರವನ್ನು ವೀಕ್ಷಿಸಿ ಪರೋಕ್ಷವಾಗಿ ರಾಜ್ಯಾದ್ಯಂತ 15 ಸಾವಿರ ಮಿಕ್ಕಿದ ಜನ ವ್ಯಸನಮುಕ್ತರಾಗಿದ್ದಾರೆ. ಒಟ್ಟು ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾಗಿ 1.5 ಲಕ್ಷ ಮಿಕ್ಕಿನ ಜನರಿಗೆ ಬೆಳಕು ಕೊಟ್ಟಿದ ಕಾರ್ಯಕ್ರಮ ಜನಜಾಗೃತಿ ಮದ್ಯವರ್ಜನ ಶಿಬಿರವಾಗಿದೆ. ಒಂದು ಶಿಬಿರ ಯಶಸ್ವಿಗೊಳಿಸಲು 50 ಸಾವಿರಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ. ಅದನ್ನು ಧರ್ಮಾಧಿಕಾರಿಗಳು ಭರಿಸುತ್ತಾರೆ. ಪ್ರತಿವರ್ಷ ಶಿಬಿರಕ್ಕಾಗಿ 62 ಲಕ್ಷ ರೂ. ಬಳಿಸುತ್ತಾರೆ. ಒಂದು ವರ್ಷದಲ್ಲಿ 124 ಶಿಬಿರಗಳು ನಡೆಯುತ್ತವೆ. ವ್ಯಸನಮುಕ್ತ ಸಮಾಜ ನಿರ್ಮಿಸಲು ರಾಜ್ಯಾದ್ಯಂತ “ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ” ಮತ್ತು “ತಂಬಾಕು ನಿಷೇಧ ದಿನಾಚರಣೆ”ಗೆ ವರ್ಷಕ್ಕೆ 8 ಕೋಟಿ ರೂ. ಧರ್ಮಾಧಿಕಾರಿಗಳು ವೆಚ್ಚುಮಾಡುತ್ತಾರೆಯೆಂದು ಹೇಳಿದರು.

ಐನಾಪುರದಲ್ಲಿ ಕಾಗವಾಡ, ಅಥಣಿ, ಹಾರೂಗೇರಿ, ಮೂಡಲಗಿ ತಾಲ್ಲೂಕುಗಳಿಂದ ದುಶ್ಚಟಗಳಿಗೆ ಅಂಟಿಕೊಂಡು ಮದ್ಯವರ್ತಿಗಳು ಶಿಬಿರದಲ್ಲಿ ಪಾಲ್ಗೊಂಡು ಅವರು ಅನೇಕ ವರ್ಷಗಳ ವ್ಯಸನಗಳನ್ನು ಮುಕ್ತಗೊಳಿಸಿ ಒಳ್ಳೆಯ ಜೀವನ ಬಾಳಲು ಸಭೆಯಲ್ಲಿ ಶಪಥ ಪಡೆದುಕೊಂಡರು. ಇವರಿಗೆ ಅತಿಥಿಗಳಿಂದ ಪುಷ್ಪವನ್ನು ನೀಡಿ ಅಭಿನಂದಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಐನಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸರೋಜಿನಿ ಸುರೇಶ ಗಾಣಿಗೇರ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯ ಅರುಣ ಗಾಣಿಗೇರ, ಸದಾಶಿವ ಚೌಗುಲಾ, ಅನೀಲ ಹಾಡಪದ, ಸುನೀಲ ಅವಟಿ, ಸುರೇಶ ಗಾಣಿಗೇರ, ಈಶ್ವರ ಕಾಂಬಳೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಧರ್ಮಸ್ಥಳದ ಅಥಣಿ ಜಿಲ್ಲಾ ನಿರ್ದೇಶಕ ಶ್ರೀಮತಿ ನಾಗರತ್ನಾ ಹೆಗ್ಡೆ, ಯೋಜನಾಧಿಕಾರಿ ಸಂಜೀವ ಮರಾಟಿ, ಧಾರವಾಡದ ಜನಜಾಗೃತಿ ಯೋಜನಾಧಿಕಾರಿಗಳಾದ ಭಾಸ್ಕರ, ಸವಿತಾ, ಯೋಜನಾಧಿಕಾರಿಗಳಾದ ಮೂಡಲಗಿಯ ರಾಜೀವ ನಾಯಿಕ, ಅಥಣಿಯ ರಜಬಲಿ, ಹಾರೂಗೇರಿಯ ಮೋಹನ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಗೊಂಡಿತ್ತು.

ಸುಕುಮಾರ ಬನ್ನೂರೆ,

ಇನ್ ನ್ಯೂಸ್, ಕಾಗವಾಡ.

Tags:

error: Content is protected !!