ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಖಾನಾಪೂರ ತಾಲೂಕಿನ ಇಟಗಿ ವಲಯದ ಮಂಗೇನಕೊಪ್ಪ ಕಾರ್ಯಕ್ಷೇತದ ವಾತ್ಸಲ್ಯ ಫಲಾನುಭವಿ ಮಲ್ಲವ್ವ ಸತಬನ್ನವರ್ ಇವರಿಗೆ ಮಂಜೂರಾಗಿ ನಿರ್ಮಾಣಗೊಂಡ ವಾತ್ಸಲ್ಯ ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರು ಸತೀಶ್ ನಾಯ್ಕ್, ತಾಲೂಕಾ ಯೋಜನಾಧಿಕಾರಿ ಗಣಪತಿ ನಾಯ್ಕ ಸೇರಿದಂತೆ ಇನ್ನಿತರ ಗಣ್ಯಮಾನ್ಯರು ಹಸ್ತಾಂತರ ಮಾಡಿದರು.
ತದನಂತರದಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ ಅವರು ಮಾತನಾಡಿ ಜ್ಞಾನ ವಿಕಾಸ ಕಾರ್ಯಕ್ರಮದ ಮುಖೇನ ವಾತ್ಸಲ್ಯ ಕಾರ್ಯಕ್ರಮವು ತೀರಾ ನಿರ್ಗತಿಕರಿಗೆ ಜೀವನದಲ್ಲಿ ನೊಂದು ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಅಸಹಾಯಕ ಪರಿಸ್ಥಿತಿಯಲ್ಲಿರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನೆಮ್ಮದಿಯ ಜೀವನ ನಡೆಸಲು ಮಾತೃಶ್ರೀ ಅಮ್ಮನವರ ಆಶಯದಂತೆ ವಾತ್ಸಲ್ಯ ಮನೆಯನ್ನು ನಿರ್ಮಿಸಿದ್ದು ಈ ಮನೆಯನ್ನು ಅವರಿಗೆ ಹಸ್ತಾಂತರಿಸಿ ಅವರ ಮುಂದಿನ ಜೀವನ ನಡೆಸಲು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಯೋಜನಾಧಿಕಾರಿ ಶ್ರೀಮತಿ ಮಲ್ಲಿಕಾ,, ಜ್ಞಾನ ವಿಕಾಸ ಸಮಸ್ವಯಾಧಿಕಾರಿ ಲಕ್ಷ್ಮೀ, ಸೇವಾ ಪ್ರತಿನಿಧಿ ಮಂಜುಳಾ ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ