Hukkeri

ಮೌನವೆ ಸಂಘರ್ಷಗಳಿಗೆ ಪರಿಹಾರ – ಚಂದ್ರಶೇಖರ ಶ್ರೀಗಳು.

Share

ಮೌನವಾಗಿದ್ದರೆ ಮಾತ್ರ ಸಂಘರ್ಷಗಳಿಗೆ ಕಡಿವಾಣ ವಾಗಬಹುದು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.
ಅವರು ಶನಿವಾರ ಸಾಯಂಕಾಲ ದಸರಾ ಕೊನೆಯ ದಿನದ ಅಡ್ಡ ಪಲ್ಲಕ್ಕಿ ಮಹೋತ್ಸವದಲ್ಲಿ ಆಶಿರ್ವಚನ ಮೂಲಕ ನಾಡಿನ ಜನತೆಗೆ ದಸರಾ ಸಂದೇಶ ನೀಡಿದರು.

ಮದ್ಯಾಹ್ನ ಮಠದ ದರ್ಬಾರ ಹಾಲ್ ಆಸ್ತಾನದ ಹಕ್ಕುದಾರರು ಮತ್ತು ಸೇವಕರ ದಸರಾ ದರ್ಬಾರ ನಡೆಸಿ ಅಡ್ಡಪಲ್ಲಕ್ಕಿ ಉತ್ಸವವು ನಗರದ ಹೋರವಲಯದ ಬನ್ನಿ ಮಂಟಪಕ್ಕೆ ತೇರಳಿ ಶಮಿ ಮರಕ್ಕೆ ಹೋಮ ಯಜ್ಞ ಯಾಗಾದಿ ಜರುಗಿಸಿ ಪೂಜೆ ಸಲ್ಲಿಸಿದರು.
ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿ ಈ ವರ್ಷದಲ್ಲಿ ಮನಸ್ಸುಗಳು ಕಲುಷಿತಗೊಂಡಿವೆ , ಯಾರ ಮೇಲೆ ಯಾರಿಗೂ ನಂಬಿಕೆ ಇಲ್ಲಾ ಮಾತಿಗೆ ಮಾತು ಬೆಳೆದು ತೊಂದರೆ ಯಾಗಲಿದೆ ಕಾರಣ ಮೌನವೆ ಎಲ್ಲದಕ್ಕೂ ಉತ್ತರ ಕೊಡಲಿದೆ, ಎಲ್ಲರೂ ಜಾತಿ ಮತ ಭೇದ ಮರೆತು ಶಾಂತಿ ಸಹಬಾಳ್ವೆಯಿಂದ ಬದುಕ ಬೇಕು ಎಂದು ದಸರಾ ಸಂದೇಶ ನೀಡಿದರು.

ಅಡ್ಡಪಲ್ಲಕ್ಕಿ ಯಲ್ಲಿ ವೀರಾಜಮಾನವಾಗಿ ಕುಳಿತ ಶ್ರೀಗಳನ್ನು ಹಕ್ಕುದಾರರು, ಆಸ್ತಾನ ಸೇವಕರು ಮಠದ ಸಾವಿರಾರು ಭಕ್ತರು ವಾದ್ಯ ಮೇಳಗಳೊಂದಿಗೆ ಕುದುರೆ ಸಾರೋಟಗಳಲ್ಲಿ ಹುಣಶ್ಯಾಳದ ನಿಜಗುಣ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶಮೋಲ್ಲಂಗನೆ ಮತ್ತು ಅಡ್ಡ ಪಲ್ಲಕ್ಕಿ ಯೊಂದಿಗೆ ಒಂಬತ್ತು ದಿನಗಳ ದಸರಾ ಉತ್ಸವಕ್ಕೆ ತೇರೆ ಎಳೆಯಲಾಯಿತು.

Tags:

error: Content is protected !!