Chikkodi

ತಾಯಿ, ಮಗು ಆಸ್ಪತ್ರೆ ಪ್ರಾರಂಭಿಸುವಂತೆ ಕರವೇಯಿಂದ ಮನವಿ

Share

ಚಿಕ್ಕೋಡಿ:ಪಟ್ಟಣದ ಹೊರವಲಯದಲ್ಲಿ ಸುಮಾರು 28 ಕೋಟಿ ರೂಗಳಲ್ಲಿ ನಿರ್ಮಾಣ ಮಾಡಲಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಉದ್ಘಾಟನೆಗೊಳ್ಳದೆ ಪಾಳು ಬಿದ್ದಿದೆ. ಇದನ್ನು ಕೂಡಲೇ ಪ್ರಾರಂಭಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಸಂಜು ಬಡಿಗೇರ ಇವರ ನೇತೃತ್ವದಲ್ಲಿ, ತಹಶೀಲ್ದಾರ ಸಿ.ಎಸ್. ಕುಲಕರ್ಣಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಜನರ ತೆರಿಗೆ ಹಣದಿಂದ ಕಟ್ಟಿಸಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬಡ ಜನರಿಗೆ ಸೇವೆ ನೀಡಬೇಕಿತ್ತು.ಆದರೆ ಕೆಲವು
ಆರೋಗ್ಯ ಇಲಾಖೆಯ ಅಧಿಕಾರಿಗಳ ಒಳಸಂಚಿನಿಂದ ಉದ್ಘಾಟನೆಗೊಳ್ಳದೆ ಇರುವುದು ಖಂಡನೀಯ ಎಂದರು. ಸಾರ್ವಜನಿಕ ಆಸ್ಪತ್ರೆಯ ಕೆಲ ಸಿಬ್ಬಂದಿಗಳು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿರಿಂದ, ಬಡ ರೋಗಿಗಳಿಗೆ ಯೋಜನೆಗಳು ದೊರೆಯದೇ ವಂಚಿತರಾಗುತ್ತಿದ್ದಾರೆ ಎಂದರು.

ಕರವೇ ಮುಖಂಡರಾದ ಸಂಜು ಬಡಿಗೇರ ಮಾತನಾಡಿ, ಈ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಆಗದೇ ಇದ್ದ ಕಾರಣ ಬಡ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 50-60 ಸಾವಿರ ಬಿಲ್ ತುಂಬುವ ಪರಿಸ್ಥಿತಿ ಎದುರಾಗುತ್ತಿದೆ. ಬಡವರು ಎಲ್ಲಿಂದ ಹಣ ತರಬೇಕು, ಕೂಡಲೇ ತಾಯಿ-ಮಕ್ಕಳ ಆಸ್ಪತ್ರೆ ಉದ್ಘಾಟನೆಗೊಂಡು, ಬಡ ಜನರ ಸೇವೆಗಾಗಿ ಸಿದ್ಧವಾಗಬೇಕು.ಇಲ್ಲವಾದರೆ ಸಾರ್ವಜನಿಕ ಆಸ್ಪತ್ರೆಯ ಎದುರಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂಧರ್ಭದಲ್ಲಿ ರುದ್ರಯ್ಯಾ ಹಿರೇಮಠ ,ಅನೀಲ ನಾವಿ, ಬಸವರಾಜ ಸಾಜನೆ, ರಫೀಕ ಪಠಾಣ, ಖಾನಪ್ಪ ಬಾಡಕರ, ಮಹೇಶ ಕಾಂಬಳೆ, ಅಪ್ಪಾಸಾಹೇಬ ಹಿರೇಕೊಡಿ, ರಾಮಾ ನೇಜ, ಮಂಜು ಮುಡಸೆ, ರಮೇಶ ಕರ್ನೂರೆ, ಸೌರಭ ಹಿರೇಮಠ, ಸತ್ಯಪ್ಪ ಕಾಂಬಳೆ, ದುಂಡಪ್ಪ ಬಡಿಗೇರ ಹಾಗೂ ಇತರ ಕರವೇ ಹೋರಾಟಗಾರರು ಉಪಸ್ಥಿತರಿದ್ದರು.

Tags:

error: Content is protected !!