ಹಳೇ ಹುಬ್ಬಳ್ಳಿ ಗಲಭೆ ಮಾಡಿದವರ ವಿರುದ್ಧ ದಾಖಲಾದ ಪ್ರಕರಣವನ್ನು ರಾಜ್ಯ ಸರ್ಕಾರಕ್ಕೆ ಹಿಂದೆ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಎಂ ಕಾರಿಗೆ ಮುತ್ತಿಗೆಯನ್ನು ಹಾಕಲು ಅಕ್ಷಯ ಪಾರ್ಕ್ ಬಳಿಯಲ್ಲಿ ಮುಂದಾಗಿದ್ದರು.ಈ ಹಿನ್ನೆಲೆ ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಜೆಪಿ ಶಾಸಕ ಮಹೇಶ ತೆಂಗಿನಕಾಯಿ ಸೇರಿದಂತೆ ಹಲವರನ್ನು ಬಂಧನ ಮಾಡಿದ್ದರು.
ಆದ್ರೂ ಕೂಡಾ ವಿಮಾನ ನಿಲ್ದಾಣದಿಂದ ಧಾರವಾಡಕ್ಕೆ ರಸ್ತೆ ಮಾರ್ಗವಾಗಿ ಹೊರಟಿದ್ದ ಸಿಎಂ ಗೆ ಗೋಕುಲ ರೋಡ್ ಬಳಿಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟೆ ತೋರಿಸಲು ಮುಂದಾದಾಗ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಗದೀಶ ಹಾಗೂ ಮಂಜುನಾಥ್ ಇವರನ್ನು ವಶಕ್ಕೇ ಪಡೆದಿರೋ ಪೊಲೀಸರು ಗೋಕುಲ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ