ವಿಜಯಪುರದ ಶಾಹು ನಗರದಲ್ಲಿ ನವರಾತ್ರಿ ಆಚರಣೆ ವೇಳೆ ಲಾವಣಿ ನೃತ್ಯದಲ್ಲಿ ಅಶ್ಲೀಲ ಸನ್ನೆ ಪ್ರದರ್ಶನ ಮಾಡಲಾಗಿದೆ. ಪ್ರತಿ ವರ್ಷ ಇಲ್ಲಿ ದೇವಿಯನ್ನ ಪ್ರತಿಷ್ಠಾಪನೆ ಮಾಡಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಆದರೆ ಈ ವರ್ಷ ಕಲಾ ತಂಡದವರು ಅತಿರೇಕ ಎನ್ನುವಂತೆ ನೃತ್ಯದಲ್ಲಿ ಅಶ್ಲೀಲ ಸನ್ನೆಗಳನ್ನ ಪ್ರದರ್ಶನ ಮಾಡಿದ್ದಾರೆ. ಇದರಿಂದಾಗಿ ಸ್ವತಃ ಆಯೋಜಕರೆ ಮುಜುಗರಕ್ಕಿಡಾಗಿ ನೃತ್ಯವನ್ನು ಬಂದ್ ಮಾಡಿಸಿದ್ದಾರೆ.
ಮಹಾರಾಷ್ಟ್ರದ ಜಾನಪದ ಕಲೆಯಾಗಿರುವ ಲಾವಣಿ ನೃತ್ಯ ವಿಜಯಪುರದಲ್ಲಿ ಬಳಹ ಪ್ರಸಿದ್ದಿಯಾಗಿದೆ. ಈ ಹಿಂದೆಯೂ ಇದೇ ತಂಡದಿಂದ ಇಲ್ಲಿ ಲಾವಣಿ ಆಯೋಜನೆ ಮಾಡಲಾಗಿತ್ತು. ಆದರೆ ಈ ವರ್ಷ ಮಾತ್ರ ಅತಿಯಾದ ಅಶ್ಲೀಲ ಸನ್ನೆ ಮಾಡಿ ನೃತ್ಯ ಮಾಡಲಾಗಿದೆ. ಈ ಬಗ್ಗೆ ಆದಿಶಕ್ತಿ ತರುಣ ಮಂಡಳಿಯವರು ಸ್ಪಷ್ಟನೆ ನೀಡಿದ್ದಾರೆ.