Banglore

ಕೇಂದ್ರ ಬಿಜೆಪಿಗರ ಮೇಲೆ 39% ಎಫ್‌.ಐ.ಆರ್ ಗಳಿವೆ ರಾಜ್ಯ ಬಿಜೆಪಿ ನಾಯಕರು ಅವರ ರಾಜೀನಾಮೆ ಕೇಳಲಿ – ಸಚಿವ ಮಧು ಬಂಗಾರಪ್ಪ ಟಾಂಗ್

Share

ಮುಡಾ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರು ಪಾದಯಾತ್ರೆ ಮಾಡಿ ಸಿಎಂ ರಾಜೀನಾಮೆಗೆ ಒತ್ತಾಯ ಮಾಡಿದ್ದರು. ಆದರೆ ಕೇಂದ್ರ ಬಿಜೆಪಿಗರ ಮೇಲೆ %39 ರಷ್ಟು ಎಫ್‌ಐಆರ್ ಇವೆ. ರಾಜ್ಯ ಬಿಜೆಪಿ ನಾಯಕರು ಅವರ ರಾಜೀಬಾಮೆ ಕೇಳುತ್ತಾರೋ ಎನ್ನುವ ಮೂಲಕ ಸಿಎಂ ರಾಜೀನಾಮೆ ಕೇಳುವ ಬಿಜೆಪಿ ನಾಯಕರಿಗೆ ಸಚಿವ ಮಧು ಬಂಗಾರಪ್ಪ ಟಾಂಗ್ ನೀಡಿದ್ದರು.

ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿಯ ಹಲವು ನಾಯಕರ ಮೇಲೆ ಎಫ್‌ಐಆರ್ ಆಗಿವೆ. ಅದಕ್ಕೆ ಅವರು ಕೋರ್ಟಗೆ ಹೋಗಿ ರಕ್ಷಣೆ ಪಡೆದುಕೊಂಡಿದ್ದಾರೆ, ಅವರಿಗೆ ಅದು ಕಾನೂನು ಬದ್ಧ ಹಕ್ಕಾಗಿದೆ‌. ಆದರೆ ರಾಜ್ಯದಲ್ಲಿ ಮುಡಾ ಹಗರಣದಲ್ಲಿ ಸಿಎಂ‌ಹೆಸರಿದೆ ಎಫ್‌ಐಆರ್ ಆಗಿದೆ ಅಂತಾ ನಮ್ಮ ಮುಖ್ಯಂಮತ್ರಿಗಳ ರಾಜೀನಾಮೆ ಕೇಳುವ ಬಿಜೆಪಿಗರು, ಎಫ್‌ಐಆರ್ ಆದ ಅವರ ಪಕ್ಷದ ನಾಯಕರ ರಾಜೀನಾಮೆಯನ್ನು ಪಡೆಯಲಿ ಎಂದರು.‌ ಇನ್ನೂ ಹಳೇಹುಬ್ಬಳ್ಳಿ ಕೇಸ್ ವಾಪಸ್ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡಿದರೆ ಮಾಡಕೊಳ್ಳಿಲಿ. ಜತೆಗೆ ಕೋರ್ಟ್ ಗೆ ಹೋಗಲಿ, ಕೋರ್ಟ್ ಇರೊದೇ ಅದಕ್ಕೆ. ನಮ್ಮ ದೇಶದಲ್ಲಿ ಕಾನೂನಿದೆ, ಕಾನೂನಿ ರಕ್ಷಣೆ ಪಡೆಯುವ ಅಧಿಕಾರ ಎಲ್ಲರಿಗೆ‌ ಇದೆ. ಅದನ್ನ ಎಲ್ಲರೂ ಮಾಡ್ತಾರೆ ,‌ ಮಾಡಿಕೊಳ್ಳಲಿ. ಹುಬ್ಬಳ್ಳಿ ಗಲಭೆ ಇರಲಿ,‌ಮೂಡಾ ಇರಲಿ, ಯಾವುದೇ ಇರಲಿ. ಯಾವುದೇ ಪಕ್ಷ ಅನ್ನೊದು ಬೇರೆ ಕಡೆ ಇರಲಿ. ನಮ್ಮ ದೇಶದಲ್ಲಿ ಕಾನೂನು ಗೆಲ್ಲಬೇಕು, ಅದಕ್ಕೆ ಅವಕಾಶ ಕೊಡಬೇಕು ಸಂಬಂಧಿಸಿದ ವ್ಯಕ್ತಿಗಳು ಅವಕಾಶ ತಗೊತ್ತಾರೆ. ಕಾನೂನು ನೇರವು ತಗೆದುಕೊಳ್ಳುವುದರಲ್ಲಿ ತಪ್ಪೆನು ಇಲ್ಲ. ಹಳೇ ಹುಬ್ಬಳ್ಳಿ ಕೇಸ್ ಅಷ್ಟೇ ಅಲ್ಲ, ಹಲವು ಪ್ರಕರಣಗಳಲ್ಲಿ ಎಷ್ಟೊ ಅಮಾಯಕರನ್ನ ಒಳಗೆ ಹಾಕಿರುತ್ತಾರೆ. ಮನೆ ಹುಡುಕಿಕೊಂಡು ಬಂದು ಕೇಸ್ ಹಾಕಿರೊದು ಉದಾಹರಣೆ‌ಗಳು ಇವೆ, ಅಂತಹ ಪ್ರಕರಣಗಳನ್ನು ಸರ್ಕಾರ ಹಿಂಪಡೆಯುತ್ತಿದೆ. ಇನ್ನೂ ಖರ್ಗೆ ಕುಟುಂಬ ಸೈಟ್ ವಾಪಸ್ ಕೊಟ್ಟ ನಿರ್ಧಾರ, ಅದು ಅವರ ದೊಡ್ಡ ಗುಣ ತೋರಿಸುತ್ತದೆ.‌ ಖುಷಿ ಆಗಬೇಕು ಅದಕ್ಕೆ ,ರಾಜೀನಾಮೆ ಯಾಕೆ ಕೊಡಬೇಕು?. ಪ್ರೇರಣಾ ಟ್ರಸ್ಟಗೆ ದುಡ್ಡು ಬಂದ ಮೇಲೆ ಕೂಡಾ ಯಡಿಯೂರಪ್ಪ ಅವರಿಗೆ ಸಿಎಂ ಮಾಡಿದ್ರು, ಯಾಕೆ ಮಾಡಿದ್ದು ಅಂದರೆ, ಅವರ ಬಳಿ‌ ವಾಶಿಂಗ್ ಮಷಿನ್ ಇದೆ. ಅದರಲ್ಲಿ ಹಾಕಿದ ತಕ್ಷಣ ಎಲ್ಲರೂ ಬೆಳ್ಳಗೆ ಆಗ್ತಾರೆ ಎಂದು ಲೇವಡಿ ಮಾಡಿದರು.‌ ಇನ್ನೂ ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕಾಗಿ‌ ಬೇಡಿಕೆ ಇದೆ, ಅದು ಹೆಚ್ಚು ಮಾಡಬೇಕಿದೆ. ಸಿಎಂ ಜೊತೆ ಮಾತಾಡಿದ್ದೇನೆ. ಉಪನ್ಯಾಸಕರ ವೇತನ ಹೆಚ್ಚಳ ಮಾಡಿದ್ದಾರೆ. ನಮ್ಮವರದು ಆಗುತ್ತೆ. ಯಾಕಂದ್ರೆ ಶ್ರಮ‌ ಪಟ್ಟು ನಮ್ಮವರು ಕೆಲಸ ಮಾಡ್ತಾರೆ. ಬಿಸಿಯೂಟ ಸಹಾಯಕರದು ಮಾಡಬೇಕು ಎಂದು ಸಿಎಂ ಬಳಿ ಹೇಳಿದ್ದೆನೆ ಎಂದು ತಿಳಿಸಿದರು.

Tags:

madhu bangarappa news
error: Content is protected !!