ಮಹಾತ್ಮಗಾಂಧೀಜಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕಷ್ಟೇ ಅಲ್ಲ. ವಿಶ್ವ ಶಾಂತಿಗೂ ಅಪಾರ ಕೊಡುಗೆ ನೀಡಿದ್ದಾರೆ. ಅವರ ಜೀವನಾದರ್ಶಗಳು ಎಲ್ಲಾ ತಲೆಮಾರಿಗೂ ಅನುಕರಣೀಯ ಎಂದು ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಹೇಳಿದರು. ಸರ್ವಲೋಕಾ ಸೇವಾ ಫೌಂಡೇಶನ್ ವತಿಯಿಂದ ಖಾನಾಪುರ ತಾಲೂಕಿನ ಗೊಲ್ಲಾಳಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 21ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕುಳಿತಿದ್ದ ಈ ಹಿನ್ನೆಲೆಯಲ್ಲಿ ಈ ಪರಿಸರದಲ್ಲಿ 21 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .
ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಮಾತನಾಡಿ ದಕ್ಷಿಣ ಆಫ್ರಿಕಾದಿಂದ ಮರಳಿ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಮಹಾತ್ಮ ಗಾಂಧೀಜಿ 1915ರಿಂದ 1934 ರವರೆಗೆ ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ 25 ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ರಾಜ್ಯದ ಜನರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗುವಂತೆ ಹುರಿದುಂಬಿಸಿದರು. ಇಲ್ಲಿನ ಸಾಮಾಜಿಕ ಹೋರಾಟಗಳಲ್ಲೂ ಭಾಗಿಯಾಗಿದರು ಎಂದು ಹೇಳಿದ್ದರು . ಅಲ್ಲದೆ ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮ ಗಾಂಧಿಜೀಯವರು ಇಲ್ಲಿಯೇ ಕಾಂಗ್ರೆಸ್ ಅಧಿವೇಶನ ನಡೆಸಿದ್ದು ಅಭಿಮಾನದ ಸಂಗತಿ ಎಂದು ತಿಳಿಸಿದ್ದರು