ಉಗಾರ ಸಕ್ಕರೆ ಕಾರ್ಖಾನೆಯ ವತಿಯಿಂದ ಅಥಣಿ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ರಕ್ತದ ತಪಾಸಣೆಗೆ ಸಹಾಯವಾಗಲೆಂದು ಆಟೋ ಎನಲೈಸರ್ ಯಂತ್ರವನ್ನು ದಾನವಾಗಿ ನೀಡಲಾಯಿತು.
ದಿ ಉಗಾರ ಶುಗರ್ ವಕ್ರ್ಸ್ ಸಕ್ಕರೆ ಕಾರ್ಖಾನೆಯ ಶಿರಗಾಂವಕರ ಬಂಧುಗಳು ಸಕ್ಕರೆ ಉದ್ಯಮದಲ್ಲಿ ಕೇವಲ ದೇಶದಲ್ಲಿಯೇ ಅಲ್ಲ, ವಿದೇಶಗಳಲ್ಲಿಯೂ ತಮ್ಮದೇ ಆದ ಪ್ರಮುಖ ಛಾಪು ಮೂಡಿಸಿದ್ದು, ಹಳೆಯ ಸಾಧನೆಗಳ ಹಿಂದೆ ನಿಂತ ಪ್ರಮುಖರು. ಅಥಣಿ ಮತ್ತು ಕಾಗವಾಡ ತಾಲ್ಲೂಕುಗಳಲ್ಲಿ, ಅವರ ಕೊಡುಗೆ ಮಹತ್ವವನ್ನು ಹೆಸರಿಸಲಾಗುತ್ತದೆ. ಇವರು ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಿದ ಆರ್ಥಿಕ ನೆರವು ಮತ್ತು ವಿವಿಧ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ನೀಡಿದ ಸಹಾಯವು ಇವರ ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದ್ದು, ಅವರು ಹೆಸರಾಂತ ಕೊಡುಗೆದಾರರಾಗಿದ್ದಾರೆ.
ಉಗಾರ ಸಕ್ಕರೆ ಕಾರ್ಖಾನೆ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಎತ್ತಿಹಿಡಿದು, ಅಥಣಿ ತಾಲ್ಲೂಕಿನ ಸರಕಾರಿ ಆಸ್ಪತ್ರೆಗೆ ಸಿ.ಬಿ.ಸಿ ಆಟೋ ಅನಾಲೈಸರ್ ಯಂತ್ರವನ್ನು ದಾನವಾಗಿ ನೀಡಿದೆ. ಈ ಯಂತ್ರವು ರೋಗಿಗಳ ರಕ್ತದ ಪರೀಕ್ಷೆಯನ್ನು ಸುಲಭವಾಗಿ, ವೇಗವಾಗಿ ಮತ್ತು ಹೆಚ್ಚು ಕಚ್ಚಾಯುತವಾಗಿ ನಡೆಸಲು ಸಹಾಯ ಮಾಡುತ್ತದೆ.
ಈ ಸಂದರ್ಭ ಅಥಣಿ ಮತ್ತು ಕಾಗವಾಡ ತಾಲ್ಲೂಕಿನ ಸರಕಾರಿ ವೈದ್ಯಾಧಿಕಾರಿಗಳಾದ ಡಾ. ಬಸಗೌಡ ಕಾಗೆ ಅವರು ಉಗಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದನ ಶಿರಗಾಂವಕರ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿ, ಈ ದಾನವು ಆರೋಗ್ಯ ಸೇವೆಗಳಲ್ಲಿ ಮಹತ್ವದ ಕೊಡುಗೆ ನೀಡಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಳೇದ ಅನೇಕ ವರ್ಷಗಳಿಂದ ಸರಕಾರಿ ಆಸ್ಪತ್ರೆಗಳಿಗೆ ಕೊರೊನಾ ಕಾಲದಲ್ಲಿ ರೋಗಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಅಲ್ಲದೇ, ಉಗಾರ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಬರುವ ಉಗಾರ ಖುರ್ದ ಮತ್ತು ಉಗಾರ ಬುದ್ರುಕ ಗ್ರಾಮಗಳಿಗೆ ಸುಮಾರು 2 ಕೋಟಿ ರೂ. ವೆಚ್ಚದ ಎಲ್.ಇ.ಡಿ ಬೀದಿದೀಪಗಳನ್ನು ಅಳವಡಿಸಿ ಜನರಿಗೆ ಸಹಕರಿಸಿದ್ದಾರೆ. 25 ಗಣಕಯಂತ್ರಗಳು ಮತ್ತು ಪ್ರಿಂಟರ್ ಮಷೀನ್‍ಗಳು ಶಾಲೆಯ ವಿದ್ಯಾರ್ಥಿಗಳಿಗೆ ದಾನವಾಗಿ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಶೌಚಾಲಯ ನಿರ್ಮಿಸುವುದು ಹೀಗೆ ಅನೇಕ ಕುಂದು-ಕೊರತೆಗಳು ಆಲಿಸಿ ಜನರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ.
ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದನ ಶಿರಗಾಂವಕರ, ಸನ್ಮಾನ ಸ್ವೀಕರಿಸಿ ಮಾತನಾಡಿ, “ನಾವೇನೋ ವಿಶೇಷ ಸಹಾಯ-ಸಹಕಾರ ಮಾಡುತ್ತಿಲ್ಲ, ಇದು ನಮ್ಮ ಕರ್ತವ್ಯ” ಎಂಬ ಶ್ಲಾಘನೀಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಆರೋಗ್ಯ, ಶೈಕ್ಷಣಿಕ ಮತ್ತು ಕಡುಬಡವರ ಸಮಸ್ಯೆಗಳತ್ತ ಸ್ಪಂದಿಸುತ್ತಿರುವುದಾಗಿ, ಹಾಗೂ ಈ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಹೀಗು ಹೇಳಿ, ದಸರಾ ಹಾಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.
ಸಕ್ಕರೆ ಕಾರ್ಖಾನೆಯ ಜನರಲ್ ಮ್ಯಾನೇಜರ್ ಡಿ.ಕೆ.ಪೆಂಡ್ಸೆ, ಮುಖ್ಯ ಆರ್ಥಿಕ ಅಧೀಕಾರಿ ಶ್ರೀಕಾಂತ ಭಟ್, ಉಗಾರ ಶುಗರ್ ಆರೋಗ್ಯ ಮಂದಿರ ವೈದ್ಯಾಧಿಕಾರಿ ಸಾಗರ ಮಾಳಿ, ಡಾ. ಪಿ.ಎಂ.ಶಹಾ, ಸಮುದಾಯ ಆರೋಗ್ಯ ಕೇಂದ್ರ ಕಾಗವಾಡದ ತಾಲೂಕಾ ಆರೋಗ್ಯಾಧಿಕಾರಿಗಳಾದ ಎಚ್.ಬಿ.ಗಣೇಶನವಾಡಿ, ಎ.ಎಸ್.ಕುಂಬಾರ, ಗಣೇಶ ತಳಕೇರ, ಆನಂದ ನಡಗೇರಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಸುಕುಮಾರ ಬನ್ನೂರೆ,
ಇನ್ ನ್ಯೂಸ್, ಕಾಗವಾಡ.