Hukkeri

ಬೋರಗಲ್ಲ ಗ್ರಾಮದಲ್ಲಿ ಶ್ರೀಗಳಿಂದ ಐದು ದಿನ ಜೀವನ ದರ್ಶನ ಆಧ್ಯಾತ್ಮಿಕ ಪ್ರವಚನ

Share

ಹುಕ್ಕೇರಿ: ಬಸವಣ್ಣನವರ ಸಿದ್ಧಾಂತಗಳು ವಿಶ್ವ ಮಾನವ ಕುಲಕ್ಕೆ ದಾರಿ ದೀಪವಾಗಿದ್ದು, ಶರಣರ ಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಪರಿವರ್ತನೆ ಕಂಡುಕೊಳ್ಳಲು ಸಾಧ್ಯ. ದೇಶ ಅಭಿವೃದ್ಧಿಯತ್ತ ಸಾಗಲು ಸಹಕಾರಿ ಆಗಲಿದೆ ಎಂದು ಯಮಕನಮರಡಿ ಹುಣಸಿಕೊಳ್ಳಮಠ ಶ್ರೀ ಸಿದ್ಧಬಸವ ದೇವರು ಹೇಳಿದರು. ತಾಲೂಕಿನ ಬೋರಗಲ್ಲ ಗ್ರಾಮದ ಸುಪುತ್ರರಾದ ಯಮಕನಮರಡಿ ಹುಣಸಿಕೊಳ್ಳಮಠ ಶ್ರೀ ಜಗದ್ಗುರು ಶೂನ್ಯ ಸಂಪಾದನ ಶ್ರೀ ಸಿದ್ಧಬಸವ ದೇವರು ಪುರಪ್ರವೇಶ ನಿಮಿತ್ತವಾಗಿ ಬೋರಗಲ್ಲ ಗ್ರಾಮದಲ್ಲಿ ಆಯೋಜಿಸಿದ್ದ ಐದು ದಿನಗಳ ʻʻಜೀವನ ದರ್ಶನ ಆಧ್ಯಾತ್ಮಿಕ ಪ್ರವಚನʼʼ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು ವಹಿಸಿ ಮಾತನಾಡಿದರು.

‘ಭಗವಂತನ ಸಾಕ್ಷಾತ್ಕಾರ ದೊರಕಬೇಕೆಂದರೆ ಭಕ್ತಿ ಮಾರ್ಗವೊಂದೇ ಸೂಕ್ತವಾದ ಆಯ್ಕೆ. ಶರಣರ ಸನ್ಮಾರ್ಗದಲ್ಲಿ ಸಾಗಿ ಉತ್ತಮವಾದ ಸಂಸ್ಕಾರದಿಂದ ನೆಮ್ಮದಿಯನ್ನು ಪಡೆದುಕೊಳ್ಳಿ. ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಆಧ್ಯಾತ್ಮಿಕ ಭಕ್ತಿ ಮಾರ್ಗವನ್ನು ಅನುಸರಿಸಬೇಕು. 12ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಜಾತೀಯತೆಯ ವಿರುದ್ಧ ಕ್ರಾಂತಿಯ ಕಹಳೆಯನ್ನು ಮೊಳಗಿಸಿದ ಭಕ್ತಿ ಭಂಡಾರಿ ಬಸವಣ್ಣನವರು, ಸಮ-ಸಮಾಜಕ್ಕೆ ಶ್ರಮಿಸಿದವರು. ಇಂತಹ ಶರಣರ ಬದುಕಿನ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ,’ ಎಂದು ಸಲಹೆ ನೀಡಿದರು.

ದಾನಧರ್ಮವನ್ನು ಮನುಷ್ಯ ಎಲ್ಲಿಯವರೆಗೂ ನಡೆಸಿಕೊಂಡು ಹೋಗುತ್ತಾನೋ? ಅಲ್ಲಿಯವರೆಗೂ ಧರೆಯಲ್ಲಿ ಮಳೆಬೆಳೆ ಸಮೃದ್ಧಿಯಾಗಿರುತ್ತದೆ. ಅನ್ನ ಹಾಕಿದ ಮನೆ, ಗೊಬ್ಬರ ಹಾಕಿದ ಹೊಲ ಎಂದಿಗೂ ಕೆಡುವುದಿಲ್ಲ ಎಂಬ ಸಂದೇಶವನ್ನು ಮನುಷ್ಯ ಅರಿತು ನಡೆದುಕೊಂಡಿದ್ದೆ ಆದರೆ ಆತನ ಬದುಕು ದಿನದಿಂದ ದಿನಕ್ಕೆ ಉನ್ನತಿ ಕಾಣುತ್ತದೆ. ಅಧಿಕಾರವಿದ್ದಾಗ ಜನಪರ ಸೇವೆ-ಸಂಪತ್ತು ಇದ್ದಾಗ ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸುವ ಔದರ್ಯ ಗುಣ ಮನುಷ್ಯನ ಬದುಕಿಗೆ ಗೌರವ ತಂದುಕೊಂಡುತ್ತದೆ ಎಂದರು.
ನಾವೆಲ್ಲರೂ ಬಸವಾದಿ ಶರಣ ಮಾರ್ಗದಲ್ಲಿ ಸಾಗೋಣ, ನಮಗೆ ಕಾಯಕ ವಂದೆ ಜೀವನ, ವಚನಗಳ ಮೂಲಕ ವಿಶ್ವಕ್ಕೆ ಸಂಸ್ಕೃತಿ, ಸಂಸ್ಕಾರ ಸಂದೇಶ ತಿಳಿಸಿದವರು ಬಸವಾದಿ ಶರಣರು, ಯುವ ಪೀಳಿಗೆಯ ಅವರ ಹಾಕಿಕೊಟ್ಟ ದಾರಿ ಸಾಗಬೇಕು ಎಂದು ಹೇಳಿದರು.

ಮನೆ ಮನೆಗೆ ತೆರಳಿ ಕಂತಿ ಭಿಕ್ಷಾಟನೆ ನಡೆಸಿದ ಶ್ರೀ ಸಿದ್ಧಬಸವ ದೇವರು: ತಾಲೂಕಿನ ಸುಕ್ಷೇತ್ರ ನಿಡಸೋಶಿ ವ್ಯಾಪ್ತಿಯ ಬೋರಗಲ್ಲ ಗ್ರಾಮಕ್ಕೆ ಕಾಲನಡಿಗೆ ಮೂಲಕ ಯಮಕನಮರಡಿ ಹುಣಸಿಕೊಳ್ಳಮಠ ಶ್ರೀ ಸಿದ್ಧಬಸವ ದೇವರು ಐದು ದಿನಗಳ ಕಾಲ ಮಠದ ಪದ್ಧತಿಯಂತೆ ಬೊರಗಲ್ಲ ಗ್ರಾಮದ ಮನೆ-ಮನೆಗೆ ತೆರಳಿ ಕಂತಿ ಭಿಕ್ಷಾಟನೆ ಮಾಡಿ, ಭಕ್ತಾಧಿಗಳಿಗೆ ಆಶೀರ್ವಚನ ನುಡಿಗಳನ್ನು ಹೇಳಿದರು.

ಭಿಕ್ಷಾಟನೆಗೆ ಬರುವ ಸಂಪ್ರದಾಯ ಅರಿತಿದ್ದ ಬೋರಗಲ್ಲ ಗ್ರಾಮಸ್ಥರು ಶ್ರೀಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು, ಶ್ರೀಗಳ ಜೋಳಿಗೆಗೆ ಅಕ್ಕಿಯನ್ನು ನೀಡುವ ಮೂಲಕ ಶ್ರೀ ಸಿದ್ಧಬಸವ ದೇವರ ಸ್ವಾಮೀಗಳ ಆಶೀರ್ವಾದ ಪಡೆದರು. ಸ್ವಾಮೀಜಿ ಭಿಕ್ಷಾಟನೆಗೆ ಬರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಗ್ರಾಮದ ರಸ್ತೆಗಳನ್ನೆಲ್ಲ ಯುವಕರು ತಳಿರು-ತೋರಣ ಗಳಿಂದ ಶೃಂಗರಿಸಿದರೆ ಇನ್ನೂ ಮಹಿಳೆಯರು ಸ್ವಾಮೀಜಿ ಸಾಗುವ ಮಾರ್ಗದುದ್ದಕ್ಕೂ ನೀರು ಹಾಕಿ ರಂಗೋಲಿ ಬಿಡಿಸಿ ಸ್ವಾಗತಿಸಿದರು.

ಚಿಂತಕರು ವೀರೇಶ ಪಾಟೀಲ ಮಾತನಾಡಿ, ಸಂಸ್ಕೃತಿ, ಸಂಸ್ಕಾರದಿಂದಲೇ ಭಾರತ ಶ್ರೀಮಂತ ರಾಷ್ಟ್ರವಾಗಿದೆ. ಇಲ್ಲಿನ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯನ್ನು ನಾಶ ಮಾಡಲು ದುಷ್ಟರು ಬಂದು.. ಹೋದರೂ… ಆದರೆ, ಭಾರತ ಎಂದೆಂದಿಗೂ ಶ್ರೇಷ್ಠವಾಗಿದೆ ಉಳಿದಿದೆ. ಆದರೆ, ಈಗಿನ ದಿನಗಳಲ್ಲಿ ದರೊಡೆ, ಕೊಲೆಗಳು ನಡೆಯುತ್ತಿವೆ. ಬುದ್ದ ಬಸವ ಮಹಾವೀರ ಹುಟ್ಟಿದ ನಾಡಿನಲ್ಲಿ ದುಷ್ಕೃತ್ಯ ನಡೆಯುತ್ತಿರುವ ವಿಷಾದವಾಗಿದೆ. ನಾವು ಹಿರಿಯರಿಗೆ ಗೌರವ ನೀಡಬೇಕು, ನಮ್ಮ ಸಂಸ್ಕಾರ ಉಳಿಸಿಕೊಳ್ಳೊಣ. ಸಮಾಜಕ್ಕೆ ಸಮರ್ಥ ಸಂತ ನೀಡಿರುವ ತಂದೆ – ತಾಯಿಗೆ ಅಭಿನಂದನೆ ತಿಳಿಸಿದರು.

ಬಸವ ಕಲ್ಯಾಣದ ಯೋಗ ಗುರುಗಳಾದ ಲೋಕೇಶ ಗುರುಜೀ ಅವರು ಮಾತನಾಡಿ, ಹುಣಸಿಕೊಳ್ಳಮಠ ಶ್ರೀ ಸಿದ್ಧಬಸವ ದೇವರು ನೂರಾರು ತಾಯಂದಿರ ಕಣ್ಣಿರು ಒರೆಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ಇದರ ಶ್ರೇಷ್ಠತೆ ಹೆತ್ತ ತಂದೆ- ತಾಯಿಗೆ ಸಲ್ಲುತ್ತದೆ. ಸಮ- ಸಮಾಜಕ್ಕೆ ಏನಾದರೂ ನೀಡಬೇಕು ಎಂದು ಶ್ರೀಗಳು ಪಣ ತೊಟ್ಟಿದ್ದಾರೆ. ಸಮಾಜಕ್ಕೆ ಯುವತರುಣ ಶ್ರೀಗಳನ್ನು ನೀಡಿರುವ ಬೋರಗಲ್ಲ ಪುಣ್ಯದ ಭೂಮಿ, ಹೃದಯವಂತ ಸಂತರ ಮನೆ ಜವಾಬ್ದಾರಿ ಊರಿನ ಮೇಲೆ ಇದೆ. ನಿತ್ಯವೂ ನಿಮ್ಮ ಸಹಾಯ-ಸಹಕಾರ ಅಗತ್ಯವಾಗಿದೆ. ಪ್ರತಿವರ್ಷವೂ ಪ್ರವಚನ ಆಯೋಜಿಸಬೇಕು. ಶ್ರೀಗಳಿಂದ ಆಶೀರ್ವಚನ ಪಡೆಯಬೇಕು ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮಲೇಕ್ಕಾಧಿಕಾರಿಗಳು ಆರ್‌ ಎಂ, ಪಾಟೀಲ, ಗ್ರಾಮಸ್ಥರು, ಗುರು ಹಿರಿಯರು, ಭಕ್ತಾಧಿಗಳು ಹಾಗೂ ಇತರರು ಇದ್ದರು.

Tags:

error: Content is protected !!