Athani

ಸಿಎಂ ಗೆ ಮತ್ತೆ ಹೋರಾಟದ ಭೀತಿ;ತಳವಾರ ಸಮಾಜದಿಂದ ಎಚ್ಚರಿಕೆ ರವಾನೆ

Share

 

ಅಥಣಿ : ರಾಜ್ಯದಲ್ಲಿ ಸುಮಾರು 8.64 ಲಕ್ಷ ಜನಸಂಖ್ಯೆ ಹೊಂದಿರುವ ತಳವಾರ ಮತ್ತು ಪರಿವಾರ ಸಮಾಜಕ್ಕೆ ಈಗಾಗಲೆ ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಪತ್ರ ನೀಡಲಾಗಿದ್ದು. ರಾಜ್ಯದಲ್ಲಿ ಕೆಲ ಕಾಣದ ಕೈಗಳಿಂದ ಸಮಾಜಕ್ಕೆ ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಪತ್ರ ಹಿಂಪಡೆಯುವಂತೆ ಸಿಎಂ ಸಿದ್ದರಾಮಯ್ಯ ಗೆ ಒತ್ತಡ ಹಾಕುತ್ತಿದ್ದಾರೆ ಎಂದು ಅಥಣಿ ಪಟ್ಟಣದಲ್ಲಿ ತಳವಾರ ಸಮಾಜದ ಮುಖಂಡರಿಂದ ಹೋರಾಟದ ರೂಪುರೆಷೆ ಕುರಿತು ಪೂರ್ವಭಾವಿ ಸಭೆ ಕರೆಯಲಾಗಿತ್ತು.

ಇಂದು ರಾಜ್ಯಾಧ್ಯಂತ ಆಯಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಸಂಖ್ಯೆಯಲ್ಲಿ ತಳವಾರ ಮತ್ತು ಪರಿವಾರ ಸಂಮಾಜ ಜನರಿಂದ ಎಸ್ ಟಿ ಮೀಸಲಾತಿ ಪ್ರಮಾಣ ಪತ್ರದಲ್ಲಿ ಯಾವುದೆ ಗೊಂದಲವಿಲ್ಲ,2011 ರ ಕುಲಷಾತ್ರ ಅಧ್ಯಯನ ಪ್ರಕಾರ 8.20 ಸಾವಿರ ತಳವಾರ ಜನಸಂಖ್ಯೆ ಹೊಂದಿದ್ದು ಇದು ಮೂಲವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಲು ಅರ್ಹರಿರುತ್ತಾರೆ ಎಂದು ವರದಿಗಳ ಆಧಾರದ ಮೇಲೆ 2014 ರಲ್ಲಿ ಸಿಎಂ ಸಿದ್ದರಾಮಯ್ಯ ನವರೇ ಕೇಂದ್ರ ಸಾಗಕಾರಕ್ಕೆ ಸಿಫಾರಸ್ಸು ಮಾಡಿದ್ದರು.

ಅದೆ ವರದಿಯ ಆಧಾರದ ಮೇಲೆ 2018 ರಲ್ಲಿ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಅನುಮೋದನೆಗೊಂಡು ರಾಷ್ಟಪತಿ ಅವರ ಅಂಕಿತ ಪಡೆದು ತಳವಾರ ಮತ್ತು ಪರಿವಾರ ಸಮಾಜಕ್ಕೆ ಎಸ್ ಟಿ ಮೀಸಲಾತಿ ಪತ್ರ ನೀಡಲು ಆದೇಶ ಹೊರಡಿಸಲಾಗಿತ್ತು.

ಅದೆ ಆದೇಶದನ್ವಯ 2020 ರಲ್ಲಿ ರಾಜ್ಯ ಪತ್ರ ಹೊರಡಿಸಲಾಗಿತ್ತು ತದನಂತರ ಸತತ ಎರಡು ವರ್ಷಗಳ ವರದಿ ಪರಿಶೀಲನೆ ಹಾಗೂ ಸಮಾಜದ ಹೋರಾಟದ ಪ್ರತಿಫಲವಾಗಿ 2022 ರಲ್ಲಿ ಸರ್ಕಾರ ತಳವಾರ ಮತ್ತು ಪರಿವಾರ ಸಮಾಜಕ್ಕೆ ಎಸ್ ಟಿ ಮೀಸಲಾತಿ ಪ್ರಮಾಣ ಪತ್ರ ನಿಡಲಾಯಿತು.

ಅದರಂತೆ ರಾಜ್ಯದಲ್ಲಿ ಎಸ್ ಟಿ ಮೀಸಲಾತಿಗೆ ಅರ್ಹರಾದ ತಳವಾರ ಮತ್ತು ಪರಿವಾರ ಸಮಾಜದ ವಿರುದ್ಧ ಕೆಲ ಷಡ್ಯಂತ್ರ ನಡೆಯುತ್ತಿದ್ದೂ ಮೊನ್ನೆ ಸಿಎಂ ಸಿದ್ದರಾಮಯ್ಯ ನವರಿಗೆ ತಳವಾರ ಮತ್ತು ಪರಿವಾರ ಸಮಾಜದ ಜನರ ಮೀಸಲಾತಿ ಪ್ರಮಾಣ ಪತ್ರ ಹಿಂಪಡೆಯಲು ಒತ್ತಾಯ ಹಾಕಲಾಗಿತ್ತು ಎಂಬ ಮಾತು ಕೇಳಿ ಬಂದ ಹಿನ್ನೆಲೆ ರಾಜ್ಯದ್ಯಂತ ತಳವಾರ ಮತ್ತು ಪರಿವಾರ ಸಮಾಜದ ಜನರಿಂದ ಆಯಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಎಂ ಸಿದ್ದರಾಮಯ್ಯ ಅವರಿಗೆ ನಮ್ಮ ಮೂಲ ಹಕ್ಕಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡದಂತೆ ಮನವಿ ಸಲ್ಲಿಸಲಾಗುವುದು,ಸ್ಪಂದನೆ ನೀಡದೆ ಇದ್ದಲ್ಲಿ ರಾಜ್ಯಾಧ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!