Hukkeri

ಕರ್ನಾಟಕದ ತರಕಾರಿ ಮಹಾರಾಷ್ಟ್ರಕ್ಕೆ ರವಾನೆ – ಕರವೇ ಖಂಡನೆ.

Share

ಹುಕ್ಕೇರಿ ತಾಲೂಕಿನ ಸಂಕೇಶ್ವರ ಭಾಗದ ರೈತರು ಬೆಳೆದ ತರಕಾರಿ ಮಹಾರಾಷ್ಟ್ರದ ಮುತ್ನಾಳ ಗ್ರಾಮಕ್ಕೆ ಹೋಗುತ್ತಿರುವದನ್ನು ಖಂಡಿಸಿದ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು.

ಹುಕ್ಕೇರಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಅದ್ಯಕ್ಷ ದೀಲಿಪ ಹೋಸಮನಿ ನೇತೃತ್ವದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಸಂಕೇಶ್ವರ ನಗರದಲ್ಲಿ ಕಳೆದ 30 ವರ್ಷಗಳಿಂದ ದುರುದುಂಡಿಶ್ವರ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ನಡೆಯುತ್ತಿದ್ದು ಇತ್ತಿಚಿಗೆ ರೈತರ ಮತ್ತು ದಲ್ಲಾಳಿಗ ನಡುವಿನ ಸಂಘರ್ಷದಿಂದ ಜಿಲ್ಲಾಡಳಿತ ದುರುದುಂಡಿಶ್ವರ ಮಾರುಕಟ್ಟೆ ಬಂದ್ ಮಾಡಿ ಎ ಪಿ ಎಂ ಸಿ ಯಲ್ಲೆ ವ್ಯಾಪಾರ ಮಾಡಲು ಆದೇಶ ನಿಡಿದ್ದರಿಂದ ಕರ್ನಾಟಕದ ರೈತರು ಪಕ್ಕದ ಮಹಾರಾಷ್ಟ್ರದ ಮುತ್ನಾಳ ಗ್ರಾಮದಲ್ಲಿ ಸಗಟು ವ್ಯಾಪಾರ ಮಾಡುತ್ತಿರುವದರಿಂದ ಕರ್ನಾಟಕದ ಆದಾಯ ಮಹಾರಾಷ್ಟ್ರ ರಾಜ್ಯಕ್ಕೆ ಹೋಗುತ್ತಿರುವದನ್ನು ಕರವೇ ಕಾರ್ಯಕರ್ತರು ಖಂಡಿಸಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಮುಖಂಡರಾದ ಪ್ರಮೋದ ಹೊಸಮನಿ , ಮಹೇಶ ಹಟ್ಟಿಹೋಳಿ ಮತ್ತು ದಿಲೀಪ ಹೋಸಮನಿ ಸಂಕೇಶ್ವರ ನಗರದಲ್ಲಿ ನಿಡಸೊಸಿ ಮಠದ ಒಡೆತನದಲ್ಲಿ ತರಕಾರಿ ಮಾರುಕಟ್ಟೆಯನ್ನು ಕೆಲ ಸಗಟು ವ್ಯಾಪಾರಸ್ಥರ ಮತ್ತು ರೈತರ ಮದ್ಯೆ ಭಿನ್ನಾಭಿಪ್ರಾಯ ಮೂಡಿದ ಹಿನ್ನಲೆಯಲ್ಲಿ ರೈತ ಘಟನೆಗಳ ಮುಖಂಡರ ಪ್ರತಿಭಟನೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಖಾಸಗಿ ಮಾರುಕಟ್ಟೆ ಬಂದ್ ಮಾಡಿ ಎ ಪಿಚೆಮ್ ಸಿ ಮೂಲಕ ರೈತರಿಗೆ ವ್ಯಾಪಾರ ಮಾಡಲು ಸೂಚಿಸಿದ್ದಾರೆ ಇದರಿಂದಾಗಿ ರೈತರು ಪಕ್ಕದ ಮಹಾರಾಷ್ಟ್ರ ಕ್ಕೆ ತೇರಳಿ ತಮ್ಮ ವ್ಯಾಪಾರ ಮಾಡುತ್ತಿದ್ದಾರೆ ಕಾರಣ ಜಿಲಗಕಾಡಳಿತ ಕೂಡಲೆ ಮಠಕ್ಕೆ ಸೇರಿದ ಮಾರುಕಟ್ಟೆಯನ್ನು ಉಪ ಮಾರುಕಟ್ಟೆಯಾಗಿ ಪ್ರಾರಂಭಿಸಲು ಅನುಮತಿ ನೀಡಬೇಕು ಇಲ್ಲವಾದರೆ ಸಂಕೇಶ್ವರ ನಗರದಲ್ಲಿ ಕರವೇ ಕಾರ್ಯಕರ್ತರು ಮತ್ತು ಹೋಟೆಲ್ ಉದ್ಯಮಿಗಳು, ಕಿರಾಣಿ ವ್ಯಾಪಾರಸ್ಥರು ಮಂಗಳವಾರ 15 ರಂದು ಸ್ವಯಂ ಘೋಷಿತ ಬಂದ್ ಆಚರಿಸಿ ಪ್ರತಿಭಟನೆ ಜರುಗಿಸಲಾಗುವದು ಪ್ರತಿಭಟನೆಯಲ್ಲಿ ಮಠದ ಭಕ್ತಾದಿಗಳು, ರೈತರು ,ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು .

ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಗಂಗಾರಾಮ ಭೂಸಗೊಳ, ಪ್ರಮೋದ ಕೂಗಿ, ಸಂತೋಷ ಸತ್ಯನಾಯಿಕ, ಬಸವರಾಜ ಲೋಳಸೂರೆ, ವಿನೋದ ನಾಯಿಕ, ವಿನೋದ ಪಾಟೀಲ, ರಾಬಿನ್ ಸನ್ ಕೌಜಲಗಿ, ಅಭೀಜಿತ ಮುಗಳಿ, ವಿಲ್ಸನ್ ಕೌಜಲಗಿ, ಸುನಿಲ ಕರೋಶಿ, ರೇಹಾನ್ ಚಟ್ಟರಕಿ, ಚೇತನ ಮಗದುಮ್ಮ, ಜ್ಞಾನೇಶ್ವರ ಗೌಡರ, ,ಶಾಂತಿನಾತ ಮಗದುಮ್ಮ, ಮಹಾಂತೇಶ ಬೇವಿನಕಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ

Tags:

error: Content is protected !!