Uncategorized

ಗುಮ್ಮಟನಗರಿಯಲ್ಲಿ ದಾಂಡಿಯಾ ಗುಂಗು: ದಾಂಡಿಯಾ ಆಸಕ್ತಿ ಮೂಡಿಸುತ್ತಾ ಯಶಸ್ವಿಯಾಗುತ್ತಿರುವ‌ ಮಹಿಳಾ ತಂಡ

Share

ನವರಾತ್ರಿ ಹಬ್ಬ ಎಂದ್ರೆ ಮಹಿಳಾಮಣಿಗಳ ಹಬ್ಬ. ನವರಾತ್ರಿ ಹಬ್ಬದಲ್ಲಿ ಮಹಿಳಾ ಮಣಿಗಳು ಫುಲ್ ಆ್ಯಕ್ಟಿವ್ ಆಗ್ತಾರೆ. ಟಿವಿ ಸಿರಿಯಲ್ ಗಳನ್ನು ಬದಿಗೊತ್ತಿ ದೇವಿ ಆರಾಧನೆಯಲ್ಲಿ ತೊಡಗುತ್ತಾರೆ‌. ಒಂಬತ್ತು ದಿನ ದಾಂಡಿಯಾ, ಘರ್ಬಾ ಹಾಗೂ ದೇವಿ ಸ್ತುತಿಯಲ್ಲಿ ಭಕ್ತಿಯ ಲೋಕದಲ್ಲಿ ತೇಲಾಡುತ್ತಾರೆ. ಇತ್ತಿಚೆಗೆ ದಾಂಡಿಯಾ ಟ್ರೆಂಡ್ ಆಗುತ್ತಿದೆ. ಹೀಗೆಯೆ ಇಲ್ಲೊಂದು ಮಹಿಳಾ ಮಂಡಳಿಯ ಒಂದಿಪ್ಪತ್ತು ಜನ ನವರಾತ್ರಿ ಒಂಭತ್ತು ದಿವಸ ಬಡಾವಣೆ ಬಡಾವಣೆ ತಿರುಗಾಡಿ ದಾಂಡಿಯಾದ ಕುರಿತು ಆಸಕ್ತಿ ಮೂಡಿಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ವಿಜಯಪುರ ನಗರದಲ್ಲಿ ನವರಾತ್ರಿ ಹಬ್ಬ ಸಂಭ್ರಮದಿಂದ ಮುಕ್ತಾಯಗೊಳ್ಳುತ್ತಿದೆ. ಪ್ರತಿ ಬಡಾವಣೆಯಲ್ಲಿ ದಾಂಡಿಯಾ ಮೇಳಗಳು ನಡೆಯುತ್ತಿವೆ.‌ ಇಲ್ಲೊಂದು ಮಹಿಳೆಯರ ಗ್ರೂಪ್ ವೊಂದು ಕಳೆದ ಹನ್ನೊಂದು ವರ್ಷಗಳಿಂದ ದಾಂಡಿಯಾ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಬಡಾವಣೆ ಬಡಾವಣೆ ತಿರುಗಾಡಿ ದಾಂಡಿಯಾ ಪ್ರದರ್ಶನ ನೀಡುತ್ತಾ ದಾಂಡಿಯಾ ನೃತ್ಯದಲ್ಲೇ ಜಗನ್ಮಾತೆಯ ಮಹಾತ್ಮ ತಿಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ‌. ಅಂದ ಹಾಗೆ ಅವರಲ್ಲಿ ಕಾಲೇಜು ಉಪನ್ಯಾಸಕಿಯರು, ಶಿಕ್ಷಕಿಯರು,
ಗೃಹಿಣಿಯರು, ವಿದ್ಯಾರ್ಥಿಗಳು ಸೇರಿರೋದು ವಿಶೇಷ. ದಾಂಡಿಯಾ ಜಗನ್ಮಾತೆಗೆ ಪ್ರೀಯವಾದ ಕಲೆ ಎಂದು ನವರಾತ್ರಿಯ ಹಬ್ಬದಲ್ಲಿ ದಾಂಡಿಯಾ ಗುಂಗು ಹಿಡಿಸುತ್ತಿದ್ದಾರೆ. ಐಗಿರಿ ನಂದಿನಿಯಿಂದ ಪ್ರಾರಂಭವಾಗುವ ದಾಂಡಿಯಾ ಲಲ್ಲಾಟಿ ಭಂಡಾರ ಹಾಡಿಗೆ ಕೊನೆಯಾಗುತ್ತದೆ‌. ರಾಕ್ಷಸ ವಧೆ ನೃತ್ಯ ಜನರನ್ನು ಆಕರ್ಷಿಸುತ್ತದೆ.

ನವರಾತ್ರಿ ಒಂದು ವಾರ ಮೊದಲು ಕಲಿಕೆಯಲ್ಲಿ ನಿರತರಾಗುವ ಈ ತಂಡವು ನಗರದ ವಿವಿದೆಡೆಯಿಂದ ಬರುವ ಮಹಿಳೆಯರಿಗೆ ಹಾಗೂ ತಂಡಗಳಿಗೆ ತರಬೇತಿಯನ್ನು ಸಹ ನೀಡುತ್ತವೆ‌. ಇವರ ದಾಂಡಿಯಾ ಟೀಮ್ ಗೆ ನಗರದಲ್ಲಿ ಬೇಡಿಕೆ ಇದ್ದು ಪ್ರತಿ ದಿನ ಎರಡಿಂದ ಮೂರು ಕಡೆ ಪ್ರದರ್ಶನ ನೀಡುತ್ತಾರೆ. ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೇ ಧಾರ್ಮಿಕವಾಗಿ ಮಹಿಳೆಯರಿಗೆ ಉಡಿ ತುಂಬುವ ಮೂಲಕ ಸೌಭಾಗ್ಯ ಗಟ್ಟಿಯಾಗಿರಲಿ ಎಂದು ಹರಸುತ್ತಾರೆ. ಒಂಬತ್ತು ದಿನಗಳ ಕಾಲ ಒಂಭತ್ತು ಬಣ್ಣದ ಸೀರೆಯುಟ್ಟು ಫುಲ್ ಮಿಂಚುತ್ತಾರೆ. ರಾತ್ರಿ ಅದೇ ಕಲರ್ ಸೀರೆಯಲ್ಲಿ ದಾಂಡಿಯಾ ನೃತ್ಯ ಪ್ರದರ್ಶನ ನೀಡುತ್ತಾರೆ‌.

ಒಟ್ನಲ್ಲಿ ದಾಂಡಿಯಾದ ಕುರಿತು ಇತರೆ‌ ಮಹಿಳೆಯರಲ್ಲಿ ದಾಂಡಿಯಾ ಜಾಗೃತಿ ಜೊತೆಗೆ ನಮ್ಮ ಸಂಸ್ಕೃತಿ ಕಾಪಾಡುವತ್ತ ಇತತರಿಗೆ ನೃತ್ಯದ ಕುರಿತು ಆಸಕ್ತಿ ಮೂಡಿಸುವಲ್ಲಿ ಯಶಸ್ವಿ ಯಾಗುತ್ತಿದ್ದಾರೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!