Raibag

ಅಂಗನವಾಡಿ ನಿರ್ಮಿಸಿ ಕೊಡುವಂತೆ ಹಗಲು,ರಾತ್ರಿ ದಲಿತರಿಂದ ಪ್ರತಿಭಟನೆ

Share

ರಾಯಬಾಗ : ತಮ್ಮ ವೈಯಕ್ತಿಕ ಲಾಭಕ್ಕಾಗಿ ಸುಮಾರು 30 ವರ್ಷಗಳಿಂದ ಇದ್ದಂತಹ ಅಂಗನವಾಡಿ ಕೇಂದ್ರವನ್ನು ತೆರವುಗೊಳಿಸಿ ಹೊಸದಾಗಿ ಅಂಗನವಾಡಿಯನ್ನು ನಿರ್ಮಿಸಿ ಕೊಡುತ್ತೇವೆಂದು ಹೇಳಿ ಈಗ ಅದೇ ಜಾಗದಲ್ಲಿ ಮಳಿಗೆ ನಿರ್ಮಾಣ ಮಾಡುತ್ತಿರುವದನ್ನ ವಿರೋದಿಸಿ ನಾಲ್ಕು ದಿನಗಳಿಂದ ಹಗಲು ರಾತ್ರಿ ಪ್ರತಿಭಟನೆ ಮಾಡುತ್ತಿರುವ ಘಟನೆ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಿರಡಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ

ಹೌದು ಇತ್ತ ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಚಿಕ್ಕಮಕ್ಕಳಿಂದಲೇ ಶಿಕ್ಷಣ ನೀಡುತ್ತಿದ್ದಾರೆ ಆದರೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಿರಡಿ ಗ್ರಾಮದಲ್ಲಿ ಪಂಚಾಯತಿಯ ಅಧ್ಯಕ್ಷ ಮಹಾದೇವ ಸದಾಶಿವ ದೆಶಿಂಗೆ,, ಮತ್ತು ಪಿಡಿಓ ದಲಿತ್ ಕಾಲನಿಯಲ್ಲಿ ಇದ್ದ ಅಂಗನವಾಡಿ ಕೇಂದ್ರ ತೆರವುಗೊಳಿಸಿ ಅಲ್ಲಿ ಫಿಲ್ಟರ್ ನೀರು ಜೊತೆ ಅಂಗನವಾಡಿ ಕೇಂದ್ರ ನಿರ್ಮಿಸಿ ಕೊಡುತ್ತೇವೆಂದು ಹೇಳಿದ್ದರು,,

ಆದ್ರೆ ಈಗ ಬಿರಡಿ ಗ್ರಾಮ ಪಂಚಾಯತ ಅಧ್ಯಕ್ಷ ತಾನೇ ಸರ್ವಾಧಿಕಾರಿಯಂತೆ ಮರೆಯುತಿದ್ದಾನೆ, ಮಳಿಗೆ ಬೇಡ ನಮ್ಮ ಮಕ್ಕಳಿಗೆ ಶಿಕ್ಷಣ ಬೇಕು ಅದಕ್ಕೆ ಅಂಗನವಾಡಿ ನಿರ್ಮಿಸಿ ಎಂದು ನಾಲ್ಕು ದಿನಗಳಿಂದ ದಲಿತರು ತಮ್ಮ ಕುಟುಂಬ ಸಮೇತ ಹಗಲು ರಾತ್ರಿ ಬಿರಡಿ ಗ್ರಾಮ ಪಂಚಾಯತ ಮುಂದೆ ಪ್ರತಿಭಟನೆ ಮಾಡುತಿದ್ದರು ಸಹ ಸೌಜನ್ಯಕ್ಕಾದರೂ ಸಹ ಅಧ್ಯಕ್ಷ. ಸದಾಶಿವ ದೆಶಿಂಗೆ, ಅಷ್ಟೇ ಅಲ್ಲ ಸ್ಥಳೀಯ ಶಿಶು ಅಭಿವೃದ್ಧಿ ಅಧಿಕಾರಿ, ತಹಸೀಲ್ದಾರ, ಅಷ್ಟೇ ಯಾಕೆ ಚುನಾವಣೆ ಬಂದಾಗ ಕೈ ಮುಗಿದು ಕಾಲು ಬಿದ್ದು ಮತ ಕೇಳುವ ಸ್ಥಳೀಯ ಶಾಸಕ ಮೂರು ಬಾರಿ ಇದೆ ದಲಿತರಿಂದ ಗೆದ್ದು ಬಂದ್ ದುರ್ಯೋಧನ ಐಹೊಳೆ ಅವರು ಕೂಡ ಬಂದು ಕಣ್ಣೆತ್ತಿ ನೋಡಿಲ್ಲಾ,,

ಅಂದು ಬಾಬಾ ಸಾಹೇಬ ಅಂಬೇಡ್ಕರ್ ಅವರು ಶಿಕ್ಷಣಕ್ಕಾಗಿ ಹೋರಾಟ ಮಾಡಿದ್ದರು,ಇಂದು ಸ್ವಾತಂತ್ರ್ಯ ಸಿಕ್ಕು ನೂರಾರು ವರ್ಷಗಳಾದರೂ ಸಹ ಬಿರಡಿ ಗ್ರಾಮದಲ್ಲಿ ಶಿಕ್ಷಣಕ್ಕಾಗಿ ರಾತ್ರಿ ಹಗಲು ಪ್ರತಿಭಟನೆ ಮಾಡಬೇಕಾ ಎಂಬ ಪ್ರಶ್ನೆ ಉದ್ಭವ ಆಗುತ್ತದೆ. ಇನ್ನು ದಲಿತರ ಪರ ,ಹಿಂದುಳಿದ ಪರ ಅನ್ನುವ ಸರಕಾರ ನಾಲ್ಕು ದಿನಗಳಿಂದ ಹಗಲು ರಾತ್ರಿ ದಲಿತರು ತಮ್ಮ ಮಕ್ಕಳು ಶಿಕ್ಷಣ ಕಲಿಯಬೇಕೆಂಬ ಉದ್ದೇಶದಿಂದ ಅಂಗನವಾಡಿ ಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ ಹೊರತು ಬೇರೆ ಯಾವುದಕ್ಕೂ ಅಲ್ಲ,,,

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೇ,ದಲಿತರು ಶಿಕ್ಷಣಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ,ಇಲ್ಲಿನ ಪಿಡಿಓ ,ಅಭಿವೃದ್ಧಿ ಅಧಿಕಾರಿ ಪಂಚಾಯತಿಯ ಅಧ್ಯಕ್ಷನ ಕೈ ಗೊಂಬೆ ಆಗಿದ್ದಾರೆ ಅದಕ್ಕೆ ಅವರು ಅಧ್ಯಕ್ಷ ಹೇಳಿದಂತೆ ನಟಿಸುತ್ತಿದ್ದಾ ರೆಂದು ಸಂಶಯ ವ್ಯಕ್ತಪಡಿಸಿದ್ದಾರೆ.ಇನ್ನಾದರೂ ಎಚ್ಚರಗೊಂಡು ದಲಿತ ಮಕ್ಕಳು ಕಲಿಯಲ್ಲಿಕೆ ಅಂಗನವಾಡಿ ಕಟ್ಟಿಸಿಕೊಡಿ,,ಈಗಾಗಲೇ ಓರ್ವ ಯುವಕ ಪ್ರತಿಭಟನೆಯಲ್ಲಿ ಅಸ್ವಾಸ್ತನಾಗಿದ್ದು ಚಿಕಿತ್ಸೆ ನೀಡಿದ್ದಾರೆ, ಇನ್ನು ಮುಂದೆ ಏನಾದರೂ ಸಾವು ನೋವು ಸಂಭವಿಸಿದರೆ ಅದಕ್ಕೆ ಜವಾಬ್ದಾರ ಸ್ಥಳೀಯ ಶಾಸಕ, ತಹಸೀಲ್ದಾರ ಗ್ರಾಮ ಪಂಚಾಯತಿ ಅಧ್ಯಕ್ಷ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ,,

Tags:

error: Content is protected !!