Vijaypura

ಸಿಎಂ ಸಿದ್ದರಾಮಯ್ಯ ಮುಂದೆ ಐದು ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ: ಸಚಿವ ಎಂ.ಬಿ.ಪಾಟೀಲ ಸ್ಪಷ್ಟನೆ

Share

ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಸಿಎಂ ಆಗಿದ್ದರು. ಈಗ ಸಿಎಂ ಆಗಿದ್ದಾರೆ. ಮುಂದೆ ಐದು ವರ್ಷ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಸಿಎಂ ಅವರವರ ಅಭಿಮಾನಿಗಳು ಅವರು ಮುಖ್ಯಮಂತ್ರಿಯಾಗಲಿ. ಉನ್ನತ ಹುದ್ದೆ ಪಡೆಯಲಿ ಎಂದು ಬಯಸುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಸಿಎಂ ಬದಲಾವಣೆ ಕುರಿತು ಪದೇ ಪದೇ ಮಾತನಾಡಿದರೆ ಅರ್ಥವಿಲ್ಲ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಐದು ವರ್ಷ ಸಂಪೂರ್ಣವಾಗಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು. ದಸರಾ ನಂತರ ಬಿಜೆಪಿಯವರು ಮತ್ತೋಂದು ಹೋರಾಟಕ್ಕೆ ಕೈ ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿಯವರಿಗೆ ಅವರಲ್ಲಿಯೇ ನೆಲೆ ಇಲ್ಲ. ಅವರಲ್ಲಿಯೇ 20 ಗುಂಪುಗಳಿವೆ.

ಶಾಸಕ ರಮೇಶ ಜಾರಕಿಹೊಳಿ ಅವರ ಮತಕ್ಷೇತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಹೋಗಿದ್ದಾರೆ. ಅಲ್ಲಿಯ ಶಾಸಕರು ಅನುಪಸ್ಥಿತಿಯಲ್ಲಿ ಸಭೆ ಮಾಡುತ್ತಿದ್ದಾರೆ. ಮೊದಲು ಅವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಬೇರೆಯವರ ಮನೆ ಕಡೆ ಯಾಕೆ ನೋಡಬೇಕು ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. 40 ಪರ್ಸೆಂಟ್ ಭ್ರಷ್ಟಾಚಾರ ನಡೆಸಿದವರನ್ನು ಜನ ಮನೆಗೆ ಕಳುಹಿಸಿದ್ದಾರೆ. ಅವರಲ್ಲಿ ಹೊಂದಾಣಿಕೆಯಿಲ್ಲ. ಅವರಲ್ಲಿಯೇ ಎಷ್ಟೋಂದು ಗುಂಪುಗಳಿವೆ ಎಂದು ಅವರು ಹೇಳಿದರು. ಹುಬ್ಬಳ್ಳಿ ಗಲಭೆ ಕೇಸ್ ನ್ನು ಸರಕಾರ ವಾಪರ್ ಪಡೆದಿರುವ ಮತ್ತು ಇದರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹೋರಾಟ ಮತ್ತು ಗಲಭೆಗಳಲ್ಲಿ ಸರ್ವೆ ಸಾಮಾನ್ಯವಾಗಿ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರ ವಿರುದ್ಧ ಕಾಲಕಾಲಕ್ಕೆ ಎಲ್ಲ ಸರಕಾರಗಳು ಹಿಂಪಡೆಯುತ್ತಿರುತ್ತವೆ. ಸಿ. ಟಿ. ರವಿ ವಿರುದ್ಧದ ಪ್ರಕರಣವನ್ನೂ ಹಿಂಪಡೆಯಲಾಗಿದೆ. ಅದನ್ನು ಬಿಜೆಪಿಯವರು ಹೇಳುವುದಿಲ್ಲವೇ? ಎಂದು ಹೇಳಿದರು. ಗಲಭೆ ಪ್ರಕರಣಗಳಲ್ಲಿ ಬಹಳಷ್ಟು ಜನ ನಿರಪರಾಧಿಗಳಾಗಿರುತ್ತಾರೆ. ಗಲಭೆ ಮಾಡಿದವರು ಓಡಿ ಹೋಗಿರುತ್ತಾರೆ. ಅವರು ಸಿಕ್ಕಿರುವುದಿಲ್ಲ. ಇಂಥ ಘಟನೆ ನಡೆದ ಸಂದರ್ಭದಲ್ಲಿ ನೋಡುತ್ತ ನಿಂತಿರುವ ನಿರಪರಾಧಿಗಳನ್ನು ಹಿಡಿದುಕೊಂಡು ಹೋಗಿರುತ್ತಾರೆ. ಹೀಗಾಗಿ ಕಾಲಕಾಲಕ್ಕೂ ರೈತ ಹೋರಾಟ, ವಿದ್ಯಾರ್ಥಿ ಹೋರಾಟ, ಜನಪರ ಹೋರಾಟಗಳ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳನನು ಎಲ್ಲ ಸರಕಾರಗಳೂ ವಾಪಸ್ ಪಡೆದುಕೊಂಡಿರುತ್ತವೆ. ಇಲ್ಲಿಯೂ ಅದೇ ರೀತಿ ವಾಪಸ್ ಪಡೆದಿರಬೇಕು ಎಂದು ಸಚಿವರು ಹೇಳಿದರು. ಇನ್ನೂ ಹುಬ್ಬಳ್ಳಿ ಗಲಭೆ ಕೇಸ್ ನ್ನು ಸರಕಾರ ವಾಪರ್ ಪಡೆದಿರುವ ಮತ್ತು ಇದರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹೋರಾಟ ಮತ್ತು ಗಲಭೆಗಳಲ್ಲಿ ಸರ್ವೆ ಸಾಮಾನ್ಯವಾಗಿ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರ ವಿರುದ್ಧ ಕಾಲಕಾಲಕ್ಕೆ ಎಲ್ಲ ಸರಕಾರಗಳು ಹಿಂಪಡೆಯುತ್ತಿರುತ್ತವೆ. ಸಿ. ಟಿ. ರವಿ ವಿರುದ್ಧದ ಪ್ರಕರಣವನ್ನೂ ಹಿಂಪಡೆಯಲಾಗಿದೆ. ಅದನ್ನು ಬಿಜೆಪಿಯವರು ಹೇಳುವುದಿಲ್ಲವೇ? ಎಂದು ಹೇಳಿದರು. ಗಲಭೆ ಪ್ರಕರಣಗಳಲ್ಲಿ ಬಹಳಷ್ಟು ಜನ ನಿರಪರಾಧಿಗಳಾಗಿರುತ್ತಾರೆ. ಗಲಭೆ ಮಾಡಿದವರು ಓಡಿ ಹೋಗಿರುತ್ತಾರೆ. ಅವರು ಸಿಕ್ಕಿರುವುದಿಲ್ಲ.

 

ಇಂಥ ಘಟನೆ ನಡೆದ ಸಂದರ್ಭದಲ್ಲಿ ನೋಡುತ್ತ ನಿಂತಿರುವ ನಿರಪರಾಧಿಗಳನ್ನು ಹಿಡಿದುಕೊಂಡು ಹೋಗಿರುತ್ತಾರೆ. ಹೀಗಾಗಿ ಕಾಲಕಾಲಕ್ಕೂ ರೈತ ಹೋರಾಟ, ವಿದ್ಯಾರ್ಥಿ ಹೋರಾಟ, ಜನಪರ ಹೋರಾಟಗಳ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳನನು ಎಲ್ಲ ಸರಕಾರಗಳೂ ವಾಪಸ್ ಪಡೆದುಕೊಂಡಿರುತ್ತವೆ. ಇಲ್ಲಿಯೂ ಅದೇ ರೀತಿ ವಾಪಸ್ ಪಡೆದಿರಬೇಕು ಎಂದು ಸಚಿವರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಹಬ್ಬವಿದ್ದಂತೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇವರು ಹಿಜಾಬ್, ಹಲಾಲ್, ಆಜಾಂ ಮಾತನಾಡುತ್ತ ಬಂದಿದ್ದರು. ಆದರೆ, ನಮ್ಮಲ್ಲಿ ಎಲ್ಲ ಜನರನ್ನು ನಾವು ರಕ್ಷಣೆ ಮಾಡುತ್ತೇವೆ. ಹಿಂದೂಗಳನ್ನು ರಕ್ಷಣೆ ಮಾಡುತ್ತೇವೆ. ಮುಸ್ಲಿಮರನ್ನು, ಸಿಖ್ ರನ್ನು, ಬೌದ್ಧರನ್ನು, ಜೈನರನ್ನು ರಕ್ಷಣೆ ಮಾಡುತ್ತೇವೆ. ಎಲ್ಲರಿಗೂ ಪ್ರೋತ್ಸಾಹ ಕೊಡುತ್ತೇವೆ ಎಂದು ಹೇಳಿದರು. ವಿಜಯಪುರ ನಗರದಲ್ಲಿ ಗಣೇಶ ಚೌಕಿನಲ್ಲಿ ನಡೆದ ಅವಮಾನ ಘಟನೆಯನ್ನು ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿಟ್ಟಿನಲ್ಲಿ ಎಸ್ಪಿಯವರು ಕ್ರಮ ಕೈಗೊಂಡಿದ್ದಾರೆ. ಕಿಡಿಗೇಡಿಗಳು ಎಲ್ಲ ಕಡೆ ಇರುತ್ತಾರೆ. ಅದಕ್ಕೆ ಇಡೀ ಸಮಾಜವನ್ನು ಹೊಣೆ ಮಾಡುವುದು ತಪ್ಪಾಗುತ್ತದೆ. ಈ ಹಿಂದೆ ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸದವರು ಯಾರು? ಅದಕ್ಕೆ ಇಡೀ ಹಿಂದೂ ಸಮಾಜವನ್ನು ಹೊಣೆ ಮಾಡುವುದು ಸರಿಯಲ್ಲ. ಯಾವುದೋ ಒಂದು ಸಂಘಟನೆಯವರು ಅಂದು ಈ ಕೃತ್ಯ ಮಾಡಿದ್ದರು. ಇಂಥ ಘಟನೆಗಳಲ್ಲಿ ಇಡೀ ಹಿಂದು ಅಥವಾ ಮುಸ್ಲಿಮ್ ಸಮಾಜವನ್ನು ಹೊಣೆ ಮಾಡಲು ಬರುತ್ತಾ? ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕಣ ದಾಖಲಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ತನಿಖೆಯಾದ ಬಳಿಕ ಸತ್ಯ ಹೊರಬರಲಿದೆ. ಆರೋಪ ಮಾಡಿದವರ ಹಿನ್ನೆಲೆಯನ್ನೂ ನೋಡಬೇಕಾಗುತ್ತದೆ ಎಂದು ಅವರು ಹೇಳಿದರು.ವಕ್ಫ್ ಆಸ್ತಿ ಸಂಬಂಧ ವಿಜಯಪುರದಲ್ಲಿರುವ ಆಸ್ತಿಯನ್ನು 45 ದಿನಗಳಲ್ಲಿ ಪ್ರಕರಣ ಇತ್ಯರ್ಥ ಪಡಿಸಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ಸೂಚನೆ ವಿರುದ್ಧ ಶಾಸಕ ಯತ್ನಾಳ ಅಕ್ಟೋಬರ್ 15 ರಂದು ಪ್ರತಿಭಟನೆ ನಡೆಸುತ್ತಿರುವ ಕೇಳಲಾದ ಪ್ರಶ್ನೆಗೆ ಸಚಿವರು ಪ್ರತಿಕ್ರಿಯೆ ನೀಡಿ, ಎಲ್ಲವೂ ಕಾನೂನು ಪ್ರಕಾರ ನಡೆಯುತ್ತದೆ. ಕಾನೂನು ಮೀರಲು ಬರುವುದಿಲ್ಲ. ಹಿಂದುಗಳ ಆಸ್ತಿ ಹಿಂದುಗಳಿಗೆ ಉಳಿಯುತ್ತದೆ. ಮುಸ್ಲಿಮರ ಆಸ್ತಿ ಮುಸ್ಲಿಮರಿಗೆ ಉಳಿಯುತ್ತದೆ. ಉಳಿದವರ ಆಸ್ತಿ ಅವರವರಿಗೆ ಉಳಿಯುತ್ತದೆ. ಈ ಕುರಿತು ರೈತರಿಗೆ ಅನ್ಯಾಯವಾಗುತ್ತಿದ್ದರೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

Tags:

error: Content is protected !!