Agriculture

ಅತಿವೃಷ್ಟಿಯಿಂದ ಮೆಣಸಿನಕಾಯಿ ಬೆಳೆ ಹಾನಿ

Share

ಅತಿವೃಷ್ಟಿ ಮಳೆಯ ಪರಿಣಾಮ ರೈತ ಉತ್ತಮ ಫಲದ ನಿರೀಕ್ಷೆ ಇಟ್ಟು ಬೆಳೆಸಿದ ತೋಟಗಾರಿಕೆ ಬೆಳೆ ಮೆಣಸಿನಕಾಯಿ ಹಾಳಾದ ಕಾರಣ ನಿರಾಸೆಯಿಂದ ತಾನೇ ಬೆಳೆ ಕಿತ್ತು ಎಸೆಯುತ್ತಿದ್ದಾನೆ.

ಕುಂದಗೋಳ ತಾಲೂಕಿನಲ್ಲಿ ಪ್ರಸ್ತುತ ವರ್ಷ 6500 ಹೆಕ್ಟೇ‌ರ್ ಮೆಣಸಿನಕಾಯಿ ಬೆಳೆ ಪ್ರದೇಶದಲ್ಲಿ 500 ಹೆಕ್ಟೇ‌ರ್ ಬೆಳೆ ಮಳೆಗೆ ಹಾಳಾಗಿತ್ತು. ಅದರಂತೆ ಗುಡೇನಕಟ್ಟಿ ಗ್ರಾಮದ ಸೋಮರಾಯಪ್ಪ ಯೋಗಪ್ಪನವರ ಎಂಬುವವರು ಅತಿವೃಷ್ಟಿ ಪರಿಣಾಮ ಹಾಳಾಗಿ ಹೋದ ಮೆಣಸಿನಕಾಯಿ ಬಿಟ್ಟಂತಹ ಗಿಡಗಳನ್ನೇ ಕಿತ್ತು ಎಸೆದು ನಿರಾಸೆಗೆ ಈಡಾಗಿದ್ದಾರೆ.

ಉತ್ತಮ ಹಸೆಕಾಯಿ ಹೊಂದಿ ಒಳ್ಳೆಯ ಫಲದ ನಿರೀಕ್ಷೆ ಮೂಡಿಸಿದ್ದ ತೋಟಗಾರಿಕೆ ಮೆಣಸಿನಕಾಯಿ ಬೆಳೆ ನರಚನ ಹಳ್ಳದ ಪ್ರವಾಹಕ್ಕೆ ಸಿಲುಕಿ ಸರ್ವನಾಶವಾಗಿದೆ. ಇನ್ನೂ ಗಿಡದಲ್ಲಿನ ಮೆಣಸಿನಕಾಯಿ ಕೊಳೆತು ಹೋಗಿದ್ದು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿವೆ.
ಪ್ರಸ್ತುತ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಹ ಬೆಳೆ ಹಾನಿಯಾದ ಜಮೀನಿಗೆ ಭೇಟಿ ಕೊಟ್ಟು ಪರಿಶೀಲನೆ ಕಾರ್ಯ ನಡೆಸಿದ್ದಾರೆ.
ಸದ್ಯ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರದಿಂದ ಬೆಳೆ ಪರಿಹಾರ ಮತ್ತು ಇನ್ಸೂರೆನ್ಸ್ ಕಂಪನಿ ಬೆಳೆ ವಿಮೆ ನೀಡಿದಲ್ಲಿ ಮಾತ್ರ ಅನ್ನದಾತನ ಆರ್ಥಿಕ ದುಸ್ಥಿತಿ ಸರಿ ಹೋಗಲಿದೆ.

Tags:

error: Content is protected !!