Kagawad

ರಾಜ್ಯದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ಕಾರ್ಯ ಶ್ಲಾಘನೀಯ : ಚಂದ್ರಶೇಖರ ನುಗ್ಲಿ

Share

ಕಾಗವಾಡ :  ಕರ್ನಾಟಕ ರಾಜ್ಯದಲ್ಲಿ 53 ವರ್ಷಗಳ ಹಿಂದೆ ಓರ್ವ ದಲಿತ ಶಿಕ್ಷಕ ಜಯಶಂಕರ ಇವರ ನೇತೃತ್ವದಲ್ಲಿ ಸ್ಥಾಪಿಸಿದ “ರಾಜ್ಯ ಶಿಕ್ಷಕರ ಸಂಘಟನೆ” ಈ ವರೆಗೆಯೂ ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯಲ್ಲಿ 46 ಸಾವಿರ ಸರಕಾರಿ ಕನ್ನಡ ಶಾಲೆಗಳಿಂದ 52 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಈ ಎಲ್ಲ ಶಿಕ್ಷಕರ ಆರೋಗ್ಯ ಕಾಪಾಡಲು ಶಿಕ್ಷಕರ ಸಂಘಟನೆ ವತಿಯಿಂದ “ಜ್ಯೋತಿ ಸಂಜೀವಿನಿ/ಆರೋಗ್ಯ ಭಾಗ್ಯ ಡಿಜಿಟಲ್ ಕಾರ್ಡ್” ವಿತರಿಸಲಾಗುತ್ತಿದ್ದು, ಶಿಕ್ಷಕರು ಈ ಮುಂದೆ ನಿಮ್ಮ ಆರೋಗ್ಯದ ಸಂರಕ್ಷಣೆ ಈ ಸಂಘಟನೆ ಕಾಪಾಡಲಿದೆಯೆಂದು ಕರ್ನಾಟಕ ರಾಜ್ಯ ಶಿಕ್ಷಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಹೇಳಿದರು.

ಬುಧವಾರ ಸಂಜೆ ಉಗಾರ ಖುರ್ದ ಪಟ್ಟಣದ ಮಹಾದೇವ ಮಂದಿರದ ಸಭಾ ಭವನದಲ್ಲಿ ಆಯೋಜಿಸಿದ್ದ “ಕಾಗವಾಡ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಂಘಟನೆ”ಯ ಸದಸ್ಯರ ಸಭೆಯಲ್ಲಿ ಸುಮಾರು 300 ಶಿಕ್ಷಕರಿಗೆ “ಜ್ಯೋತಿ ಸಂಜೀವಿನಿ/ಆರೋಗ್ಯ ಭಾಗ್ಯ ಡಿಜಿಟಲ್ ಕಾರ್ಡ್” ವಿತರಿಸಿ ಚಂದ್ರಶೇಖರ ನುಗ್ಲಿ ಮಾತನಾಡಿದರು.

ರಾಜ್ಯದ ಗಡಿಯಲ್ಲಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿಯ ಎಲ್ಲ ಶಿಕ್ಷಕರು ಒಳ್ಳೆ ರೀತಿಯಿಂದ ಬೋಧನೆ ಮಾಡುತ್ತಿದ್ದು, ರಾಜ್ಯ ಮಟ್ಟದ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿನಿಧಿತ್ವವಿದೆ. ಕಾಗವಾಡ ತಾಲ್ಲೂಕಿನ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಎಲ್ಲ ಶಿಕ್ಷಕರಿಗೆ ಸರಕಾರದ ಸೌಲಭ್ಯಗಳಲ್ಲದೇ ಅವರ ಅನೇಕ ಕುಂದು ಕೊರತೆಗಳು ಆಲಿಸಿ ಸಹಕಾರ ನೀಡುತ್ತಿದ್ದಾರೆ. ರಾಜ್ಯದಲ್ಲಿ ಇದೊಂದು ಅತ್ಯುತ್ತಮ ಶಿಕ್ಷಕರ ಸಂಘಟನೆಯೆಂದು ಚಂದ್ರಶೇಖರ ನುಗ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ್ದ ಎಲ್ಲ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಅಭಿನಂದಿಸಿದರು. ಚಿಕ್ಕೋಡಿ ಜಿಲ್ಲಾಧ್ಯಕ್ಷ ಎಸ್.ಎಂ.ಲೋಕನ್ನವರ ಇವರು ಕಾಗವಾಡ ಶಿಕ್ಷಕರ ಸಂಘಟನೆಯ ಸೇವೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳಾದ ಡಿ.ಜೆ.ಕಲಾರಕೊವೈ, ಕಾಗವಾಡ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಸಂಕಪಾಳ, ರಾಜ್ಯ ಪ್ರಶಸ್ತಿ ವಿಜೇತ ಶ್ರೀಮತಿ ಪದ್ಮಶ್ರೀ ರುಗ್ಗೆ, ಬಿ.ಎ.ನಾಂರ್ದಗೆ, ಎ.ಜಿ.ನಸರದಿ, ಎಸ್.ಎಸ್.ಭಾವಿ, ಎಸ್.ಎಸ್.ಸಾಜನೆ, ಐ.ಐ.ಕಾಂಬಳೆ, ಆರ್.ಎಂ.ತೇವರಟ್ಟಿ, ಅಪ್ಪು ಕೋಳಿ, ಎಸ್.ಎಸ್.ಶೇಡಶ್ಯಾಳೆ, ಗುಲಾಬ ಮಾಂಜರೆ, ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕರ ಸಂಘಟನೆಯ ಕಾರ್ಯದರ್ಶಿ ಕುಮಾರ ಗಾಣಿಗೇರ ಕಾರ್ಯಕ್ರಮ ನಿರೂಪಿಸಿದರು.

ಸುಕುಮಾರ ಬನ್ನೂರೆ,

ಇನ್ ನ್ಯೂಸ್, ಕಾಗವಾಡ.

Tags:

error: Content is protected !!