ತಾಂತ್ರಿಕ ದೋಷದಿಂದ ಐ20 ಕಾರವೊಂದು ನಡು ರಸ್ತೆಯಲ್ಲಿಯೇ ಹೊತ್ತಿ ಉರಿದು ಸಂಪೂರ್ಣ ಕಾರ್ ಸುಟ್ಟು ಕರಕಲಾದ ಘಟನೆ ಧಾರವಾಡದ ಸತ್ತೂರು ಬಳಿನಡೆದಿದೆ.
ಧಾರವಾಡ ಸತ್ತೂರಿನ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯಲ್ಲಿ ದುರ್ಘಟನೆ ನಡೆದಿದ್ದು, ಬೆಂಕಿಗೆ ಆಹುತಿಯಾದ ಕಾರ್ ಧಾರವಾಡದ ಸಾಧನಕೇರಿ ನಿವಾಸಿ ಶಿವಪುತ್ರಪ್ಪ ಹರಿಹರ್ ಅವರಿಗೆ ಸೇರಿದಾಗಿದೆ. ಇನ್ನೂ ಚಲಿಸುತ್ತಿದ್ದ ವೇಳೆಯಲ್ಲಿ ಕಾರಿನ ಮುಂಭಾಗದಲ್ಲಿ ಚಿಕ್ಕದಾಗಿ ಹೊಗೆ ಕಾಣಿಸಿಕೊಂಡಿದೆ. ಬೆಂಕಿಯ ಹೋಗೆ ಗಮನಿಸಿದ ಕಾರ್ ಚಾಲಕ ಕೂಡಲೇ ಕಾರನ್ನು ರಸ್ತೆ ಪಕಕ್ಕೆ ನಿಲ್ಲಿಸಲು ಮುಂದಾಗಿದ್ದಾನೆ. ಅಷ್ಟರಲ್ಲಿ ಕಾರಿನ ಮುಂಭಾಗದಲ್ಲಿ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ. ಸ್ಥಳೀಯರು ಹಾಗೂ ಕಾರ್‌ನ ಪ್ರಯಾಣಿಕರು ಬೆಂಕಿನಂದಿಸಲು ಮುಂದಾಗಿದ್ದಾರೆ. ಆದರೆ ಬೆಂಕಿ ಕೈ ಮೀರಿ ಹೋಗುತ್ತಿರುವುದನ್ನು ನೋಡಿ, ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಕೊನೆಗೆ ಬೆಂಕಿ ನಂದಿಸಿದ್ದಾರೆ. ಸದ್ಯ ಕಾರ್ ಬೆಂಕಿ ನರ್ತನಕ್ಕೆ ಸುಟ್ಟು ಕರಲಕಾಲಾಗಿದೆ. ಈ ಕುರಿತು ಧಾರವಾಡ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ