ರಸ್ತೆ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ನೇಜ-ಶಮನೇವಾಡಿ ಮಧ್ಯದಲ್ಲಿ ನಡೆದಿದೆ

ಮೃತನನ್ನು ಶಮನೇವಾಡಿ ಗ್ರಾಮದ ಸುನೀಲ ಖೋತ (45) ಎಂದು ಗುರುತಿಸಲಾಗಿದೆ.ಹಲವು ವರ್ಷಗಳಿಂದ ಸಹೋದರರ ಮಧ್ಯದಲ್ಲಿ ರಸ್ತೆ ವಿಚಾರವಾಗಿ ಗಲಾಟೆ ನಡೆಯುತ್ತಾ ಇತ್ತು.ಇಂದು ಕೊಡಲಿಯಿಂದ ಬಲವಾದ ಏಟು ಬಿದ್ಧಿರುವದರಿಂದ ಆಸ್ಪತ್ರೆಗೆ ಸಾಗಿಸುವಾಗ ಮೃತನಾಗಿದ್ದಾನೆ.
ಇಬ್ಬರು ಸಹೋದರರು ಬೆಳಿಗ್ಗೆ ಸದಲಗಾ ಪೋಲಿಸ್ ಠಾಣೆಗೆ ತೆರಳಿದ್ದರು.ಸಂಜೆ ರಾಜಿ ಪಂಚಾಯತಿ ಮಾಡುವದಾಗಿ ಪೋಲಿಸರು ಕಳುಹಿಸಿದ್ದರು.ಸಂಜೆ ಇಬ್ಬರ ಮಧ್ಯ ನಡೆದ ಗಲಾಟೆಯಲ್ಲಿ ಸುನೀಲ ಖೋತ ಮೃತನಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟ್ಟಿ ನೀಡಿ ಪರಿಶೀಲನೆ ನಡೆಸಿದರು.
