ನೀರು ಕುಡಿಯಲು ಹೋಗಿ ಕಾಲು ಜಾರಿ ನದಿಗೆ ಬಿದ್ದು ಬಾಲಕನೋರ್ವ ನದಿ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಗೋಕಾಕ ನಗರದ ಮಾರ್ಕಂಡೆಯ ನದಿಯಲ್ಲಿ ನಡೆದಿದೆ.
ಗೋಕಾಕ ನಗರದ ಮಾರ್ಕಂಡೆಯ ನದಿಯ ತೀರದ ಹೆಜ್ಜೆಗಾರ ಹೊಲದ ಹತ್ತಿರ ನೀರು ಕುಡಿಯುಲು ಹೋಗಿ ಬಾಲಕನೋರ್ವ ಕಾಲು ಜಾರಿ ನದಿಗೆ ಬಿದ್ದು ನದಿ ಪಾಲಾಗಿದ್ದಾನೆ. 16 ವರ್ಷದ ಸಾಗರ ಗೌಳಿ ಎಂದು ಮೃತ ಬಾಲಕನನ್ನು ಗುರುತಿಸಲಾಗಿದೆ. ನಗರ ಪಿಎಸ್ಐ ಕೆ,ವಾಲಿಕಾರ ಮತ್ತು ತಹಸೀಲ್ದಾರ ಡಾ:ಮೋಹನ ಭಸ್ಮೆ ಹಾಗೂ ಅಗ್ನಿ ಶಾಮಕದಳ ಹಾಗೂ ಎನ್, ಡಿ,ಆರ್,ಎಫ್ ತಂಡದ ಸಹಕಾರದೊಂದಿಗೆ ಚಿಗಡೊಳ್ಳಿ ಗ್ರಾಮದ ವಿಠ್ಠಲ ಪದ್ಮಿನಿ ಅವರು ಸುಮಾರು ಒಂದು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ, ಶವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಅಗ್ನಿ ಶಾಮಕ ತಾಲೂಕಾ ಅಧಿಕಾರಿ ಸದಾನಂದ ಮೇಳವಂಕಿ ಹಾಗು ಇನ್ನಿತರರು ಉಪಸ್ಥಿತರಿದ್ದರು.ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.