Chikkodi

ಬೇರೆ ರಾಜ್ಯದ ಕ್ಷೌರಿಕರಿಗೆ ಅವಕಾಶ ಬೇಡ,ಸ್ಥಳೀಯ ‌ಕ್ಷೌರಿಕರಿಂದ ಒತ್ತಾಯ

Share

ಚಿಕ್ಕೋಡಿ:ಬೋರಗಾಂವ ಪಟ್ಟಣದಲ್ಲಿ ದೆಹಲಿ ಕ್ಷೌರಿಕರು ಅಂಗಡಿಗಳನ್ನು ಪ್ರಾರಂಭಿಸುತ್ತಿದ್ದು, ಬೇರೆ ರಾಜ್ಯದ ಕ್ಷೌರಿಕರಿಗೆ ಪಟ್ಟಣದಲ್ಲಿ ಅವಕಾಶ ನೀಡಬಾರದು ಎಂದು ಶ್ರೀ ಸಂತ ಸೇನಾ ಕ್ಷೌರಿಕರ ಸಂಘಟನೆ ವತಿಯಿಂದ ಪಟ್ಟಣ ಪಂಚಾಯಿತಿಗೆ ಮನವಿ ನೀಡಲಾಯಿತು.

ಬೇರೆ ರಾಜ್ಯದ ಕ್ಷೌರಿಕರಿಗೆ ಅವಕಾಶ ನೀಡಿದರೆ, ಅನೇಕ ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ನಮ್ಮ ಮೇಲೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕ್ಷೌರಿಕರು ಅಂಗಡಿಗಳನ್ನು ಮುಚ್ಚಿ ಅನಿರ್ದಿಷ್ಟ ಧರಣಿ ಕೈಗೊಂಡಿದ್ದಾರೆ .

ದೆಹಲಿ ಸಲೂನ ಮಾಲೀಕರು ಬೋರಗಾಂವ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಹಾಕುತ್ತಿರುವುದರಿಂದ ನಗರದ ಎಲ್ಲ ಕಾರ್ಮಿಕರು ಅನಿರ್ದಿಷ್ಟಾವಧಿ ಕೆಲಸ ಸ್ಥಗಿತಗೊಳಿಸಿದ್ದು, ನಮಗೆ ನ್ಯಾಯ ಸಿಗುವವರೆಗೂ ಅಂಗಡಿ ಮುಂಗಟ್ಟು ಮುಚ್ಚಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಕಾರ್ಮಿಕರು, ಸಂಘದ ಅಧ್ಯಕ್ಷ ಅಪ್ಪಾಸಾಹೇಬ ಹಳಿಜೋಳೆ ಮಾತನಾಡಿ, ಬೋರಗಾಂವ ನಗರದಲ್ಲಿ ಸುಮಾರು 18 ಸಲೂನ್ ಅಂಗಡಿಗಳಿವೆ. ಕಳೆದ ಏಳು ದಶಕಗಳಿಂದ ನಾವು ನಮ್ಮ ಕುಟುಂಬವನ್ನು ಈ ವ್ಯವಸಾಯದಲ್ಲಿ ನಡೆಸುತ್ತಿದ್ದೇವೆ. ಈ ಕೆಲಸದಿಂದ ಜೀವನ ಸಾಗಿಸುತ್ತಿರುವ ನಮಗೆ ಬೇರೆ ಜೀವನೋಪಾಯವಿಲ್ಲ.

ಸದ್ಯ ಈ ಜಾಗದಲ್ಲಿ ದೆಹಲಿ ಸಲೂನ್‌ಗಳು ತಮ್ಮ ಅಂಗಡಿಗಳನ್ನು ತೆರೆಯುತ್ತಿದ್ದು, ಇದರಿಂದ ನಮಗೆ ಹಸಿವಿನಿಂದ ಬಳಲುವ ಪರಿಸ್ಥಿತಿ ಉಂಟಾಗುತ್ತದೆ. ದೆಹಲಿಯ ಸಲೂನ್ ಮಾಲೀಕರು ಅಂಗಡಿಗಳಲ್ಲಿ ಐದರಿಂದ ಆರು ಚೇರ್ ಸಲೂನ್ ಅಂಗಡಿಗಳನ್ನು ಸ್ಥಾಪಿಸುತ್ತಿರುವುದರಿಂದ ನಮ್ಮ ಮೇಲೆ ಅನ್ಯವಾಗುತ್ತಿದ್ದು, ಸ್ಥಳೀಯರು ನಮಗೆ ಸಹಕರಿಸಿ, ಬೇರೆ ರಾಜ್ಯದ ಸಲೂನ್ ಮಾಲೀಕರಿಗೆ ಈ ಸ್ಥಳದಲ್ಲಿ ಅವಕಾಶ ನೀಡದಂತೆ ವಿನಂತಿಸುತ್ತೇವೆ ಎಂದರು.

ಸಂದೀಪ್ ಶಿಂಧೆ ಮಾತನಾಡಿ, ಪಟ್ಟಣದ ಎಲ್ಲ ಮುಖಂಡರು ಹಾಗೂ ನಾಗರಿಕರ ಸಹಕಾರದಿಂದ ಹಲವು ವರ್ಷಗಳಿಂದ ಈ ಸ್ಥಳದಲ್ಲಿ ಸಲೂನ್ ವ್ಯವಸಾಯ ಮಾಡುತ್ತಿದ್ದೇವೆ. ಆದರೆ ಈಗ ಈ ಜಾಗಕ್ಕೆ ಬೇರೆ ರಾಜ್ಯದ ಕ್ಷೌರಿಕರು ಬರುತ್ತಿರುವುದರಿಂದ ನಮಗೆ ಭಾರಿ ಹೊಡೆತ ಬೀಳಲಿದೆ. ಆದರೆ ನಿವೆಲ್ಲರೂ ಸಹಕರಿಸಬೇಕು ಎಂದರು. ನ್ಯಾಯ ಸಿಗುವವರೆಗೂ ಈ ಸ್ಥಳದಲ್ಲಿ ಅನಿರ್ದಿಷ್ಟಾವಧಿಗೆ ನಮ್ಮ ಕೆಲಸ ನಿಲ್ಲಿಸಿದ್ದೇವೆ ಎಂದರು.

ಅಣ್ಣಪ್ಪ ಹೊನಮಾನೆ, ಸುನೀಲ ಸಾಳುಂಕೆ, ವಿಠ್ಠಲ ಹಡಪದ, ರಾಮದಾಸ ಸಾಳುಂಖೆ, ಸಚಿನ ಹಳಿಜೋಳೆ, ಸುಭಾಷ ಹಳಿಜೋಳೆ, ಸೂರದಾಸ ಸಾಳುಂಕೆ, ಸಚಿನ ಕೋರೆ, ರಾಹುಲ ಕೋರೆ, ಪುರಂದರ ಸಾಳುಂಕೆ, ಸ್ವಪ್ನಿಲ ಹೊನಮಾನೆ, ವರದ ಕೋರೆ, ಸುರೇಶ ಹಳ್ಳಿಜೋಳೆ, ಸಂಜಯ ಹಳಿಜೋಳೆ, ಸದಾಶಿವ ಸಂಕಪಾಳ, ಪ್ರವೀಣ ಉಪಸ್ಥಿತರಿದ್ದರು.

Tags:

error: Content is protected !!