Nandagad

ಬೀಡಿ ಗ್ರಾ.ಪಂ ಸದಸ್ಯೆ ಮತ್ತು ಪತಿಯಿಂದ ಹಲ್ಲೆಯ ಆರೋಪ

Share

ಖಾನಾಪೂರ ತಾಲೂಕಿನ ಬೀಡಿ ಗ್ರಾಮ ಪಂಚಾಯಿತಿಯು ಒಂದಲ್ಲ ಒಂದು ರೀತಿಯಲ್ಲಿ ಚರ್ಚೆಯಲ್ಲಿದೆ ಗ್ರಾಮ ಸಭೆಯಲ್ಲಿ ಜರುಗಿದ ವಾದ ವಿವಾದಗಳು ನಂದಗಡ ಪೋಲಿಸ್ ಠಾಣೆಯ ಮೆಟ್ಟಿಲು ಏರಿದೆ ದಿನಾಂಕ 16ರಂದು ಬೀಡಿ ಸರಕಾರಿ ಉರ್ದು ಶಾಲೆಯಲ್ಲಿ ವಾರ್ಡ್ ನಂಬರ್ 4 ರ ಸಭೆಯ ಕಾಲಕ್ಕೆ ತನ್ನ ಕುಂದುಕೊರತೆಗಳ ಬಗ್ಗೆ ಕೇಳಲು ಹೋದ ನಾಜಮೀನ ಅಸ್ಲಂ ಪಠಾಣ್ ಅವರು ತನ್ನ ದೊಡ್ಡಪ್ಪ ತಾಜೂದ್ದೀನ ಇವರ ಮನೆ ಬಿದ್ದಿದೆ ನಿಮ್ಮಗೆ ಎಷ್ಟು ಸಾರಿ ಹೇಳಿದರೂ ನೀವು ರಿಪೇರಿ ಮಾಡುತ್ತಿಲ್ಲ ಅಂತ ಗ್ರಾಮ ಸಭೆಯಲ್ಲಿ ಕೇಳಿದಾಗ ಬಶೀರಾಬಾನು (ಸದಸ್ಯೆ) ನಾನು ಮಾಡುವುದಿಲ್ಲ ಏನು ಮಾಡುತ್ತಿ ಮಾಡಿಕೋ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಚಪ್ಪಲಿ ತೆಗೆದು ಕೊಂಡು ಹೊಡೆಯಲು ಎದ್ದಾಗ ಸಭೆಯಲ್ಲಿ ಇದ್ದ ಜನರು ಬಿಡಿಸಿಕೊಂಡಿದರು ನಂತರ ದಿನಾಂಕ 23ರಂದು ರಾತ್ರಿ ಕಣ್ಣಿಲ್ಲದ ತನ್ನ ದೊಡ್ಡಪ್ಪನೊಂದಿಗೆ ಇದ್ದಾಗ ರಾತ್ರಿ 9.30 ಗಂಟೆಯ ಸುಮಾರಿಗೆ ಸದಸ್ಯೆ ಬಸೀರಾ ತನ್ನ ಗಂಡನೊಂದಿಗೆ ಮನೆ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ತನ್ನನ್ನು ಗಂಡ ತನ್ನ ಕೈಹಿಡಿದು ಜಡಿಯನ್ನು ಜಗ್ಗಿ ತನ್ನ ಗುಪ್ತಾಂಗದಲ್ಲಿ ಕೈಹಾಕಿ ಸಂಭೋಗ ಮಾಡಿ ಎಲ್ಲರ ಮುಂದೆ ಹೇಳುತ್ತೇನೆ ಅಂತ ಅವಾಚ್ಯ ಶಬ್ದಗಳಿಂದ ಇದರ ಕುರಿತು ಧುಮುಕಿ ನೀಡಿರುವ ಬಗ್ಗೆ ಮೋಹ್ಮದ ಷರಿಫ್ (ಗಂಡ) ಹಾಗೂ ಪಂಚಾಯಿತಿ ಸದಸ್ಯೆ ಬಸೀರಾ ಳ ಬಗ್ಗೆ ನಂದಗಡ ಪೋಲಿಸ್ ಠಾಣೆಯಲ್ಲಿ ನಾಜಮೀನ ಅಸ್ಲಂ ಪಠಾಣ್ ದೂರು ನೀಡಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ನಂದಗಡ ಪೋಲಿಸರು ಪಂಚನಾಮೆ ಮಾಡಿ ತನ್ನ ಮೇಡಿಕಲ್ ಮಾಡಿಸಿದ್ದಾರೆ ಆದರೆ ಇನ್ನೂ ವರೆಗೆ ಅವರಿಗೆ ತನ್ನ ವಶಕ್ಕೆ ಪಡೆದುಕೊಂಡಿಲ್ಲ ಅವರನ್ನು ತಕ್ಷಣ ಬಂಧಿಸಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ನಾಜಮೀನ ಪಠಾಣ ಬೇಡಿಕೆಯಾಗಿದೆ.

Tags:

error: Content is protected !!