Accident

ಹೊನಗಾ ರಸ್ತೆ ಹೆದ್ದಾರಿ ಮೇಲೆ ಅಪಘಾತ; 7 ಯುವಕರಿಗೆ ಗಾಯ…

Share

ಧಾಭಾದಲ್ಲಿ ಊಟ ಮುಗಿಸಿಕೊಂಡು ಮರಳಿ ಬರುವಾಗ ವೇಗವಾಗಿ ಕಾರು ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕ ದಾಟಿ ಎದುರಿನ ರಸ್ತೆಗೆ ಹೋಗಿ ಬಿದ್ದಿದ್ದು, ಅಪಘಾತ ತಪ್ಪಿಸಲು ಹೋಗಿ ಕೆ.ಎಸ್.ಆರ್.ಟಿ.ಸಿ ಬಸ್ ಅಂಗಡಿಗಳಿಗೆ ನುಗ್ಗಿದ ಘಟನೆ ಬೆಳಗಾವಿ ತಾಲೂಕಿನ ಹೊನಗಾ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸಂಭವಿಸಿದೆ.

ಹತ್ತರಗಿ ಧಾಬಾದಲ್ಲಿ ಊಟ ಮುಗಿಸಿಕೊಂಡು ಬೆಳಗಾವಿ ನಗರಕ್ಕೆ ಮರಳುತ್ತಿದ್ದ ವೇಳೆ ಆರು ಜನರ ಯುವಕರ ಹ್ಯುಂಡಾಯಿ ಕಾರ ಬೆಳಗಾವಿ ತಾಲೂಕಿನ ಹೊನಗಾ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಿಯಂತ್ರಣ ತಪ್ಪಿ ಡಿವೈಡರ್ ಏರಿ ಎದುರಿನ ರಸ್ತೆಗೆ ಹೋಗಿದೆ. ಇದೇ ವೇಳೆ ಪುಣೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತದಿಂದ ತಪ್ಪಿಕೊಳ್ಳಲು ಪ್ರಯತ್ನಿಸಿ ಸರ್ವಿಸ್ ರಸ್ತೆ ದಾಟಿ ಪಕ್ಕದಲ್ಲಿದ್ದ ವಡಾಪಾವ ಮತ್ತು ಪಾನಶಾಪಗೆ ನುಗ್ಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ ಆದರೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹ್ಮದ ರಿಯಾಜ್, ಮಹ್ಮದ ನಾಸಿರುದ್ಧೀನ, ಲುರಮಾನಖಾನ ಮಾಡಿವಾಲೆ, ರೇಹಾನ ಮಂಜೂರ ಮಕಾಂದಾರ, ಮಹ್ಮದ ಉಮರ್ ಮಾಡಿವಾಲೆ, ನಿಯಾಜ್ ಸಲಾಮ್ ದೇಸಾಯಿ ಮತ್ತು ಕೊಪ್ಪಳ ಮೂಲದ ಚಾಲಕ ವಿರುಪಾಕ್ಷಪ್ಪ ಚಿತ್ತಾಪೂರ ಗಾಯಗೊಂಡಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!