ಅಥಣಿ ತಾಲೂಕಿನ ಸಂಕೋಣಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಡಂಗಿ ತೋಟದಲ್ಲಿ ನಿನ್ನೆ ಸುರಿದ ಮಳೆಗೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ತಾಲೂಕಿನ ಹಲವು ಕಡೆಗಳಲ್ಲಿ ನಿನ್ನೆ ತಡ ರಾತ್ರಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ಪಟ್ಟಣದ ಹೊರವಲಯದ ಮಸೊಬಾ ಹಳ್ಳ ತುಂಬಿ ಹರಿದಿದ್ದು ಹಳ್ಳದ ಪಕ್ಕದ ಸುಮಾರು ಎಂಟು ಮನೆಗಳಿಗೆ ನೀರು ನುಗ್ಗಿದೆ.
ಮಳೆ ನೀರಿನಿಂದ ಮನೆಯಲ್ಲಿದ್ದ ದವಸ ಧಾನ್ಯಗಳು ಮಣ್ಣು ಪಾಲಾಗಿದ್ದು ಈ ಅವಾಂತರಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ನರೇಗಾ ಯೋಜನೆ ಅಡಿಯಲ್ಲಿ ಹಳ್ಳದ ಹುಳೆತ್ತುವಿಕೆ ಮಾಡುವಂತೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದರು ಕಿವಿಗೋಡದೆ ನಿರ್ಲಕ್ಷ ತೋರಿದ್ದಾರೆ ಹಳ್ಳಕ್ಕೆ ಹೂಳು ತುಂಬಿದ್ದರಿಂದ ಮಳೆ ನೀರು ಮನೆಗಳಿಗೆ ನುಗ್ಗಿದೆ ಎಂದು ಸಂತ್ರಸ್ತರು ಗ್ರಾಮ ಪಂಚಾಯತ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.