ನಮ್ಮ ದೇಶ ಕಾಯುವ ಸೈನಿಕರಿಗೆ ಯಾವಾಗಲೂ ಒಂದು ಗೌರವವಿದೆ. ಅದರಲ್ಲೂ ಸೇವೆಯಿಂದ ನಿವೃತ್ತರಾದ ಬಳಿಕ ತಮ್ಮ ಮೂಲ ಸ್ಥಾನಕ್ಕೆ ಮರಳುವ ವೀರಯೋಧರನ್ನು ಸ್ವಾಗತಿಸಿ ಅವರನ್ನು ಗೌರವಿಸುವದು ಬಸವನಾಡಿನ ಸಂಸ್ಕೃತಿ. ಅದರಲ್ಲೂ ಒಂದೇ ಗ್ರಾಮದ ನಾಲ್ವರು ಸೈನಿಕರು ತಮ್ಮ ಗ್ರಾಮಕ್ಕೆ ಮರಳಿದ ಹಿನ್ನಲೆಯಲ್ಲಿ ಅವರನ್ನು ಮೆರವಣಿಗೆ ಮೂಲಕ ಕರೆತಂದು ಅಭಿನಂಧಿಸಿ ಸ್ವಾಗತಿಸಲಾಯಿತು. ಈ ಕುರಿತು ಇಲ್ಲಿದೆ ಡಿಟೇಲ್ಸ್..
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತಮ್ಮ ಸ್ವಗ್ರಾಮ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಪ್ಪಲದಿನ್ನಿ ತಾಂಡಾದ ನಾಲ್ವರು ವೀರಯೋದರು ಮರಳಿದರು. ಈ ಸಂದರ್ಭದಲ್ಲಿ ತಾಂಡಾದ ಗ್ರಾಮಸ್ಥರು ಮತ್ತು ನೌಕರರ ಸಂಘದ ವತಿಯಿಂದ ಬಸವನ ಬಾಗೇವಾಡಿಯಿಂದ ಉಪ್ಪಲದಿನ್ನಿ ತಾಂಡಾದವರೆಗೆ ಭವ್ಯ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಲಾಯಿತು. ವೀರಯೋದರಾದ ಹವಾಲ್ದಾರ್ ಆನಂದ ಲಮಾಣಿ, ಸುಬೇದಾರ ವೆಂಕಪ್ಪ ಲಮಾಣಿ, ಹವಾಲ್ದಾರ್ ಶಂಕರ ಲಮಾಣಿ, ಲೆಫ್ಟಿನೆಂಟ್ ಕರ್ನಲ್ ಬಾಸು ಲಮಾಣಿ ಸಾಹೇಬರಿಗೆ ಅಖಿಲ ಕರ್ನಾಟಕ ಸೇವಾ ಸಮಿತಿ ರಾಜ್ಯ ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಿ ರಕ್ತ ಮಠ ಬಸವನಬಾಗೇವಾಡಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು ಗುರುಶಾಂತ ದಾಶಾಳ ಸಿಪಿಐ ಮತ್ತು ಊರಿನ ಗುರು ಹಿರಿಯರು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಮುಖ್ಯ. ಅತಿಥಿಗಳಾಗಿ ಶ್ರೀ ಸಂಗನಗೌಡ ಚಿ ಕೊಂಡ ಅಧ್ಯಕ್ಷರು ಪಿಕೆಪಿಎಸ್ ಹಾಗೂ ಅಶೋಕ್ ಹಂಚಲಿ ಸಾಹಿತಿಗಳು ಬಸವನಬಾಗೇವಾಡಿ ಆಗಮಿಸಿದ್ದರು. ಈ ವೇಳೆ ವೀರ ಯೋಧರ ದೇಶ ಸೇವೆಯನ್ನು ಸ್ಮರಿಸಿ ಶ್ಲಾಘಿಸಲಾಯಿತು.
ಇದೇ ವೇಳೆ ದೇಶ ಸೇವೆ ಮಾಡುವುದು ಪುಣ್ಯದ ಕೆಲಸ ಎಂದು ಸಾನಿಧ್ಯ ವಹಿಸಿದ ಶ್ರೀಗಳು ಆಶೀರ್ವಚನ ನೀಡಿದರು. ಇನ್ನೂ ತಮ್ಮನ್ನು ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತಿಸಿ ನೀಡಿದ ಗೌರವ ಕಂಡು ನಿವೃತ್ತ ಯೋಧರು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿ ದೇಶ ಕಾಯುವ ನಮ್ಮಂತಹ ಯೋಧರಿಗೆ ಇಂತಹ ಕಾರ್ಯಕ್ರಮಗಳು ನವ ಚೈತನ್ಯ, ಸ್ಪೂರ್ತಿ ತುಂಬುತ್ತವೆ ಎಂದರು. ಈ ವೇಳೆ ಈ ಸಂದರ್ಭದಲ್ಲಿ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಮಹಾದೇವ ಬಿರಾದಾರ , ರಾಜ್ಯ ಗೌರವಾಧ್ಯಕ್ಷರಾದ ಗಜಾನಂದ ಸುತಾರ, ರಾಜ್ಯ ಸಂಚಾಲಕರಾದ ಶ್ರೀಮತಿ ರೇಖಾ ಪಾಟೀಲ, ಶ್ರೀಧರ ಮರ್ಡೇಕರ ಅಲ್ಲದೇ ಕಾರ್ಯಕ್ರಮದಲ್ಲಿ ಪ್ರಕಾಶ್ ಶಂಕರ್ ನಾಯಕ್ ಪಾಪು ಶಿವಪ್ಪ ಚೌಹಾನ್ ಗಂಗಾಧರ ನಾ ಲಮಾಣಿ ಶ್ರೀ ಶಿವು ಲಮಾಣಿ ಮತ್ತು ಊರಿನ ಗಣ್ಯಮಾನ್ಯರು ನಿವೃತ್ತ ಯೋಧರು ಉಪಸ್ಥಿತರಿದ್ದರು.
ಒಟ್ನಲ್ಲಿ ದೇಶ ಕಾಯುವ ವೀರಯೀಧರಿಗೆ ಅದ್ದೂರಿಯಾಗಿ ಸ್ವಾಗತಿಸಿ, ಅವರ ಸೇವೆಯನ್ನು ಸ್ಮರಿಸುವ ಅರ್ಥಪೂರ್ಣವಾಗಿವೂ
ಹೃದಯಸ್ಪರ್ಶಿಯಾಗಿಯೂ ನಡೆಯಿತು.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್
ವಿಜಯಪುರ..